ಸುದ್ದಿಮೂಲ ವಾರ್ತೆ ರಾಯಚೂರು, ಡಿ.13
ಮನೆಯಲ್ಲಿ ತಿರಸ್ಕೃತ ಅನಾಥ ಮಕ್ಕಳಿದ್ದರೆ ಮಠಕ್ಕೆೆ ನೀಡಿದರೆ ಅದುವೆ ನಿಮ್ಮ ಬಹುದೊಡ್ಡ ದಾನ ಎಂದು ಗದಗದ ಶ್ರೀ ವೀರೇಶ್ವರ ಪುಣ್ಯಾಾಶ್ರಮದ ಪೂಜ್ಯಶ್ರೀ ಕಲ್ಲಯ್ಯ ಅಜ್ಜ ಹೇಳಿದರು.
ನಗರದ ಸೋಮವಾರಪೇಟೆ ಹಿರೇಮಠದಲ್ಲಿ ಡಾ.ಪಂ. ಪುಟ್ಟರಾಜ ಸಾಂಸ್ಕೃತಿಕ ಟ್ರಸ್ಟ್ ಹಮ್ಮಿಿಕೊಂಡ ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ವರ್ಷದ ಪುಣ್ಯಸ್ಮರಣೆಯ ನಿಮಿತ್ಯ ಎರಡು ದಿನಗಳ ಸಂಗೀತ ಸಮ್ಮೇಳನದಲ್ಲಿ 2985 ನೇ ತುಲಾಭಾರ ಸ್ವೀಕರಿಸಿ ಆಶೀರ್ವಚನ ನೀಡಿದರು. ನಿಮ್ಮ ಮನೆಯಲ್ಲಿ ಅಂಧ ಅನಾಥ ಮಕ್ಕಳಿದ್ದರೆ ವೀರೇಶ್ವರ ಪುಣ್ಯಶ್ರಮಕ್ಕೆೆ ಕಳಿಸಿ ಪುಣ್ಯ ಕಟ್ಟಿಿಕೊಳ್ಳಿಿ ಎಂದು ಹೇಳಿದರು.
ಕೌಶಲ್ಯ ಬಿ. ವೆಂಕಟೇಶರೆಡ್ಡಿಿ ಹಾಗೂ ಕುಟುಂಬದವರು ಕಲ್ಲಯ್ಯ ಅಜ್ಜನವರ 2985 ನೇ ತುಲಾಭಾರ ನೆರವೇರಿಸಿದರು. ಶ್ರೀಗಳು ದಂಪತಿಗಳಿಗೆ ಸನ್ಮಾಾನಿಸಿ ಶುಭಾಶೀರ್ವದಿಸಿದರು.
ನಂತರ ಧರ್ಮ ಸಂದೇಶ ನೀಡಿದ ಕಿಲ್ಲೇ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಸತತ 15 ವರ್ಷಗಳಿಂದ ಪುಟ್ಟರಾಜರ ಪುಣ್ಯಸ್ಮರಣೆ ಅಂಗವಾಗಿ ಕಲಾವಿದರಿಗೆ ವೇದಿಕೆ ಕಲ್ಪಿಿಸಿ ಆರ್ಥಪೂರ್ಣವಾಗಿ ಸ್ಮರಿಸುವ ಕೆಲಸ ಮಾಡುತ್ತಿಿರುವುದಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸತತ ಪ್ರಯತ್ನದಿಂದ ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳಿಗೆ ತುಲಾಭಾರ ನಡೆದು ಹೋಗಿವೆ ಅದಕ್ಕೆೆ ಅವರನ್ನು ಜಗತ್ತಿಿನ ಏಕೈಕ ತುಲಾಭಾರ ಚಕ್ರವರ್ತಿ ಎಂದು ಹೇಳಲಾಗುತ್ತದೆ ಎಂದರು.
ಸೋಮವಾರ ಪೇಟೆ ಮಠದ ಶ್ರೀ ಅಭಿನವ ರಾಚೋಟಿ ಶಿವಾಚಾರ್ಯರು ಮಾತನಾಡಿ, ಪ್ರಾಾಣ ಪಕ್ಷಿ ಹಾರಿ ಹೋದ ಒಂದು ಮಗುವನ್ನು ಪಾದೋದಕ ಭಸ್ಮದ ಲೇಪನದಿಂದ ಮಗುವಿಗೆ ಮರುಜೀವ ಕೊಟ್ಟ ಶ್ರೀಗಳು ಪವಾಡ ಪುರುಷರು ಎಂದು ಸ್ಮರಿಸಿದರು.
ವಿಶೇಷ ಆಹ್ವಾಾನಿತ ಕಲಾವಿದರಾದ ವಿದ್ಯಾಾಶ್ರೀ ಸಾಲಿಮಠ, ಬೆಂಗಳೂರು ಹಾಗೂ ಪಂ. ದೇವೇಂದ್ರಕುಮಾರ ಪತ್ತಾಾರ ಹಿಂದೂಸ್ಥಾಾನಿ ಸಂಗೀತವನ್ನು ಪ್ರಸ್ತುತ ಪಡಿಸಿದರು, ಹರಿಕೃಷ್ಣ ಪುರೋಹಿತ್, ಪವಮಾನ ಅರಳೀಕಟ್ಟಿಿ, ಮೃತ್ಯುಂಜಯ ಅವರು ಸಾಥಿ ನೀಡಿದರು.
ಮಂಗಳವಾರಪೇಟೆ ಹಿರೇಮಠದ ಪೀಠಾಧಿಪತಿ ಶ್ರೀ ವೀರಸಂಗಮೇಶ್ವರ ಶಿವಾಚಾರ್ಯರು, ಪಂಪಾಪತಿ ಶಾಸಿಗಳು, ಕಾಂಗ್ರೆೆಸ್ ಯುವ ಮುಖಂಡ ರವಿ ಬೋಸರಾಜ್, ಗಿರಿಜಾ ಶಂಕರ, ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಸಾಜಿದ್ ಸಮೀರ, ನರಸಿಂಹಲು ಮಾಡಗಿರಿ, ರಾಮಚಂದ್ರಪ್ಪ ಕರ್ಲಿ, ಟ್ರಸ್ಟ್ನ ಗೌರವಾಧ್ಯಕ್ಷ ಡಾ.ಪಂ. ನರಸಿಂಹಲು ವಡವಾಟಿ, ಡಾ.ಪಂ.ಪುಟ್ಟರಾಜ ಸಾಂಸ್ಕೃತಿಕ ಟ್ರಸ್ಟ್ ನ ಜಿಲ್ಲಾಾಧ್ಯಕ್ಷ ಈರಣ್ಣ ಹೂಗಾರ ಜಾಲಿಬೆಂಚಿ, ಪಂ. ಸೂಗೂರೇಶ ಅಸ್ಕಿಿಹಾಳ, ರಘುಪತಿ ಪೂಜಾರ ದಿನ್ನಿಿ, ಪಿ. ಚಿನ್ನಯ್ಯ ಸ್ವಾಾಮಿ, ಎ.ಎಸ್. ರಘುಕುಮಾರ, ಎ.ಎಸ್.ಸುರೇಶಕುಮಾರ, ದಾನಯ್ಯ, ವೀರೇಂದ್ರಕುಮಾರ ಕುರ್ಡಿ, ವಿಜಯಕುಮಾರ ದಿನ್ನಿಿ ಸ್ಥಳಿಯ ಕಲಾವಿದರು, ಸಾರ್ವಜನಿಕರು ಮಹಿಳೆಯರು ಉಪಸ್ಥಿಿತರಿದ್ದರು.
ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳ ಪುಣ್ಯಸ್ಮರಣೆ, ಸಂಗೀತ ಸಮ್ಮೇಳನ ಅನಾಥ, ಅಂಧ ಮಕ್ಕಳ ಮಠಕ್ಕೆೆ ನೀಡಿದರೆ ಅದುವೆ ದಾನ-ಪೂಜ್ಯಶ್ರೀ ಕಲ್ಲಯ್ಯಜ್ಜ

