ಸುದ್ದಿಮೂಲ ವಾರ್ತೆ ರಾಯಚೂರು, ಡಿ.26:
ರಾಷ್ಟೀಯ ಪಲ್ಸ್ ಪೋಲಿಯೋ ಅಭಿಯಾನದಡಿಯಲ್ಲಿ, ಹುಟ್ಟಿಿನಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕುವ ಆಭಿಯಾನ ಡಿಸೆಂಬರ್ 21ರಿಂದ ಆರಂಭವಾಗಿದ್ದು, ಜಿಲ್ಲೆಯ ರಾಯಚೂರು, ಲಿಂಗಸುಗೂರು, ಸಿಂಧನೂರು, ಮಾನವಿ, ದೇವದುರ್ಗ ತಾಲ್ಲೂಕಗಳಲ್ಲಿ ಮೊದಲ ದಿನ ಡಿ.21ರಂದು ಒಟ್ಟು 2,59,984 ಮಕ್ಕಳ ಪೈಕಿ 2,47,052 ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಶೇ.95.02 ರಷ್ಟು ಸಾಧನೆ ಮಾಡಲಾಗಿದೆ.
ಡಿಸೆಂಬರ್ 24 ರವರೆಗೆ ಉಳಿದ 12,932 ಮಕ್ಕಳಿಗೂ ಲಸಿಕೆ ಹಾಕಿ ಒಟ್ಟು 2,60, 002 ಮಕ್ಕಳನ್ನು ತಲುಪಿ ಶೇ.100.02ರಷ್ಟು ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣಾಧಿಕಾರಿ ಡಾ. ಸುರೇಂದ್ರ ಬಾಬು ತಿಳಿಸಿದ್ದಾರೆ.

