ನೀರಾವರಿ ನ್ಯಾಾಯಾಲಯ ಸ್ಥಾಪಿಸಲು ವಿಧೇಯಕ ಮಂಡನೆ
ಸುದ್ದಿಮೂಲ ವಾರ್ತೆ ಬೆಂಗಳೂರು, ಜು.22:
ನೀರಾವರಿ ಪ್ರದೇಶದ ನಾಲೆಗಳಿಂದ ಅಕ್ರಮವಾಗಿ ನೀರು ಪಡೆಯುವವರ ವಿರುದ್ಧ ಶಿಕ್ಷೆ ವಿಧಿಸಲು ನೀರಾವರಿ ನ್ಯಾಾಯಾಲಯಗಳ ಸ್ಥಾಾಪನೆ ಮಾಡಲು ಅವಕಾಶ ನೀಡುವ ಕರ್ನಾಟಕ ನೀರಾವರಿ ತಿದ್ದುಪಡಿ ವಿಧೇಯಕ 2024ನ್ನು ಇಂದು ವಿಧಾನಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮಂಡಿಸಿದರು.
ರಾಜ್ಯದಲ್ಲಿ ಅಚ್ಚುಕಟ್ಟು ಪ್ರದೇಶಗಳಿಗೆ ನಿಗದಿಪಡಿಸಿದ ಅಚ್ಚುಕಟ್ಟಿಿಗೆ ನಾಲೆಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿಿದೆ. ಆದರೆ, ಕೆಲವೆಡೆ ಅನಧಿಕೃತವಾಗಿ ನಾಲೆಗಳ ಮೂಲಕ ನೀರು ಪಡೆದು
ಕೊನೆಯ ಭಾಗಕ್ಕೆೆ ನೀರು ತಲುಪದೆ ರೈತರು ಸಮಸ್ಯೆೆ ಎದುರಿಸುತ್ತಿಿದ್ದು, ಅದನ್ನು ತಡೆಯಲು ಕಾನೂನಾತ್ಮಕ ಅವಕಾಶ ಕಲ್ಪಿಿಸಲು ಈ ವಿಧೇಯಕ ಮಂಡಿಸಲಾಗುತ್ತಿಿದೆ ಎಂದು ಮಾಹಿತಿ ನೀಡಿದರು.
ವಿಶೇಷವಾಗಿ ತುಂಗಭದ್ರಾಾ, ಹೇಮಾವತಿ, ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮೇಲ್ಭಾಾಗದ ರೈತರು ತಮ್ಮ ವ್ಯಾಾಪ್ತಿಿಯಲ್ಲಿರುವ ನಾಲೆಗಳ ಮೂಲಕ ನೀರು ಪಡೆಯುತ್ತಿಿದ್ದು, ಇದರಿಂದಾಗಿ ಕೊನೆ ಭಾಗಕ್ಕೆೆ ನೀರು ತಲುಪುತ್ತಿಿಲ್ಲ. ಅನೇಕ ಬಾರಿ ಕಂದಾಯ, ನೀರಾವರಿ ಇಲಾಖೆಗಳ ಮೂಲಕ ಕ್ರಮಗಳನ್ನು ಕೈಗೊಂಡರೂ ಈ ಪದ್ದತಿ ತಡೆಯಲು ಸಾಧ್ಯವಾಗುತ್ತಿಿಲ್ಲವಾದ್ದರಿಂದ ಅಕ್ರಮವಾಗಿ ನೀರು ಪಡೆಯುವವರಿಗೆ ದಂಡ ವಿಧಿಸಲು ಮತ್ತು ಶಿಕ್ಷೆ ವಿಧಿಸಲು ಅನುಕೂಲವಾಗುವಂತೆ ವಿಶೇಷ ನ್ಯಾಾಯಾಲಯ ಸ್ಥಾಾಪಿಸಲು ಈ ವಿಧೇಯಕದಲ್ಲಿ ಅವಕಾಶ ಕಲ್ಪಿಿಸಲಾಗಿದೆ.