ಸುದ್ದಿಮೂಲ ವಾರ್ತೆ ರಾಯಚೂರು, ಡಿ.30:
ಅಪಾಯ, ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ ನೀಡುವ ಉದ್ದೇಶದ ಅಕ್ಕ ಪಡೆ ವಾಹನಕ್ಕೆೆ ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಎಂ.ಪುಟ್ಟಮಾದಯ್ಯ ಚಾಲನೆ ನೀಡಿದರು.
ಇಂದು ಜಿಲ್ಲಾ ಪೊಲೀಸ್ ಕಚೇರಿಯ ಕವಾಯತು ಮೈದಾನದಲ್ಲಿ ಅಕ್ಕ ಪಡೆ ವಾಹನಕ್ಕೆೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಆರಂಭಿಸಿರುವ ಅಕ್ಕ ಪಡೆ, ಇದು ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಿ ಇಲಾಖೆಯ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುವ ಪಡೆ ಮಹಿಳೆ, ಯುವತಿಯರಿಗೆ ಚುಡಾಯಿಸುವಿಕೆ, ದೌರ್ಜನ್ಯ ಮುಂತಾದ ಸಮಸ್ಯೆೆಗಳಿಗೆ ತಕ್ಷಣ ಸ್ಪಂದಿಸುತ್ತದೆ ಮತ್ತು ಹೆಣ್ಣುಮಕ್ಕಳ ಸುರಕ್ಷತೆ, ವಿಶ್ವಾಾಸ ಹೆಚ್ಚಿಿಸಲು ಸಹಾಯ ಮಾಡುತ್ತದೆ. ಅದಕ್ಕಾಾಗಿ ಸಹಾಯವಾಣಿ 1098, 181, 112 ಮೂಲಕವೂ ಸಂಪರ್ಕಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಎಸ್ಪಿ ಹರೀಶ, ಸಿಪಿಐ ನಾಗರಾಜ ಮೇಕಾ ಸೇರಿದಂತೆ ಅಕ್ಕ ಪಡೆಯ ಕರ್ತವ್ಯ ಸಿಬ್ಬಂದಿಗಳಾದ ಗೃಹ ರಕ್ಷಕ ದಳದ ಸಿಬ್ಬಂದಿ, ಪೊಲೀಸ್ ಪೇದೆಗಳಿದ್ದರು.
ಅಕ್ಕ ಪಡೆ ವಾಹನಕ್ಕೆ ಎಸ್ಪಿ ಚಾಲನೆ ಅಪಾಯದಲ್ಲಿರುವ ಅಬಲೆ, ಮಹಿಳೆಯರಿಗೆ ತಕ್ಷಣ ನೆರವು – ಪುಟ್ಟಮಾದಯ್ಯ

