ಸುದ್ದಿಮೂಲ ವಾರ್ತೆ ರಾಯಚೂರು, ಜ.06:
ವಿದ್ಯಾಾರ್ಥಿನಿಯರು ತಮ್ಮ ಬದುಕಿನಲ್ಲಿ ಸದಾ ಸ್ಪರ್ಧಾ ಮನೋಭಾವ ಅಳವಡಿಸಿಕೊಳ್ಳಬೇಕು ಎಂದು ಅಲ್ ಕರೀಂ ಪಿಯು ಕಾಲೇಜ್ನ ಉಪಾಧ್ಯಕ್ಷ ಮೊಹಮ್ಮದ್ ಇಕ್ಬಾಾಲ್ ಹೇಳಿದರು.
ಅಲ್ ಕರಿಂ ಪಿಯು ಕಾಲೇಜ್ ಾರ್ ವುಮೆನ್ ನಡೆಸಿದ ಇಂಟರ್ ಸ್ಕೂಲ್ ಜೀನಿಯಸ್ ಹಂಟ್ ಕಾಂಪಿಟೇಶನ್ ಸರ್ಚ್ ಾರ್ ದ ಅಲ್ಟಿಿಮೇಟ್ ಮೈಂಡ್ ಎಂಬ ಅಂತರ ಶಾಲಾ ರಸಪ್ರಶ್ನೆೆ ಕಾರ್ಯಕ್ರಮದ ಅಧಕ್ಷತೆ ವಹಿಸಿ ಮಾತನಾಡಿದರು. ಈ ಕಾಲದಲ್ಲಿ ಶಿಕ್ಷಣ ವೌಲ್ಯ ಕಡಿಮೆ ಆಗುತ್ತಿಿದ್ದು ತಂತ್ರಜ್ಞಾನ ಯುಗದಲ್ಲಿರುವುದರಿಂದ ಪ್ರತಿಯೊಬ್ಬ ವಿದ್ಯಾಾರ್ಥಿನಿ ಸ್ಪರ್ಧಿಸುವ ಮನಸ್ಥಿಿತಿಯಲ್ಲಿರಬೇಕಿದೆ ಎಂದರು.
ಇಂತಹ ಸ್ಪರ್ಧೆ ಎದುರುಗೊಂಡಾಗ ಅದನ್ನು ಎದುರಿಸಲು ಆತ್ಮವಿಶ್ವಾಾಸ ತುಂಬಲು ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿ ತಮ್ಮ ಭವಿಷ್ಯದ ಆಯ್ಕೆೆಯನ್ನು ಸುಲಭವಾಗಿ ತೀರ್ಮಾನಿಸಲು ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಿ ಸೈಯದ್ ಆಸ್ಿ ಮೋಹಿದ್ದಿನ್ ಮಾತನಾಡಿ, ಹೆಣ್ಣು ಕೇವಲ ಮನೆಗೆ ಸೀಮಿತವಾಗದೆ ಹೊರಬಂದು ಶಿಕ್ಷಣದ ಮೂಲಕ ಕುಟುಂಬದ ಉಜ್ವಲ ಭವಿಷ್ಯ ರೂಪಿಸುವಂತಾಗಬೇಕು ಇದರಿಂದ ಸಮಾಜದಲ್ಲಿ ಜ್ಞಾನದ ಬೆಳಕು ಹರಡುತ್ತದೆ ಎಂದರು.
ಕಾಲೇಜಿನ ಸಂಘಟನಾ ಕಾರ್ಯದರ್ಶಿ ಅಮೀರ ಮಹಮ್ಮದ್ ಶರ್ೀ ಅನ್ವರ್ ಮಾತನಾಡಿ, ಕಾಲೇಜಿನಲ್ಲಿ 10ನೇ ತರಗತಿ ವಿದ್ಯಾಾರ್ಥಿನಿಯರಿಗೆ ರಸಪ್ರಶ್ನೆೆ ಸ್ಪರ್ಧೆ ಏರ್ಪಡಿಸಲಾಗಿತ್ತುಘಿ. ಸ್ಪರ್ಧೆಯಲ್ಲಿ ಪ್ರಥಮ ಸ್ಥಾಾನ ಪಡೆದ ಆ್ಯಡಂ ಪ್ರೌೌಢಶಾಲೆ ವಿದ್ಯಾಾರ್ಥಿನಿ ಹಸಪಾಹನಾಗೆ 5 ಸಾವಿರ ಬಹುಮಾನ, ದ್ವಿಿತೀಯ ಸ್ಥಾಾನ ಪಡೆದ ಸೆಂಟ್ ಮೇರೀಸ್ ಕಾನ್ವೆೆಂಟ್ ನ ಹುಸನಾ ಪಾತಿಮಾ ಗೆ 3 ಸಾವಿರ, ತೃತೀಯ ಸ್ಥಾಾನ ಪಡೆದ ಲಿಟಲ್ ಏಂಜಿಲ್ ಶಾಲೆಯ ಅರಿಬಾ ತರುಣಂಗೆ 2 ಸಾವಿರ ರೂಗಳ ಬಹುಮಾನ ವಿತರಿಸಲಾಯಿತು.
ವೇದಿಕೆಯ ಮೇಲೆ ಸೈಯದ್ ನೇಮಿತುಲ್ಲಾಾ ಖಾದ್ರಿಿ, ಪ್ರಾಾಚಾರ್ಯ ಷಾಹಿಸ್ತಾಾ ಅರ್ಮಿನ್ ಸೇರಿ ಉಪನ್ಯಾಾಸಕರು ಸಿಬ್ಬಂದಿ ವರ್ಗದವರು ಮತ್ತು ವಿದ್ಯಾಾರ್ಥಿನಿಯರು ಇದ್ದರು.
ಅಲ್ ಕರೀಂ ಕಾಲೇಜಿನಲ್ಲಿ ರಸಪ್ರಶ್ನೆ ಕಾರ್ಯಕ್ರಮ ಸ್ಪರ್ಧಾ ಮನೋಭಾವ ಸದಾ ಇರಲಿ – ಇಕ್ಬಾಲ್

