ಸುದ್ದಿಮೂಲ ವಾರ್ತೆ ಬೆಂಗಳೂರು, ಜ.28:
ಕಾಂಗ್ರೆೆಸ್ ಸರ್ಕಾರದಿಂದ ರಾಜಭವನದ ೆನ್ ಟ್ಯಾಾಪ್ ಮಾಡುತ್ತಿಿರುವುದು ಸಚಿವರ ಮಾತಿನಿಂದಲೇ ಸ್ಪಷ್ಟವಾಗಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ದೆಹಲಿಯಿಂದ ರಾಜಭವನಕ್ಕೆೆ ೆನ್ ಕರೆ ಬರುತ್ತದೆ, ಅದರಂತೆ ರಾಜ್ಯಪಾಲರು ನಡೆದುಕೊಳ್ಳುತ್ತಾಾರೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಅಂದರೆ ರಾಜಭವನ ೆನ್ ಟ್ಯಾಾಪ್ ಮಾಡಲಾಗುತ್ತಿಿದೆ ಎಂದರ್ಥ. ಇಲ್ಲವೆಂದರೆ ಈ ಎಲ್ಲ ವಿಷಯ ಸಚಿವರಿಗೆ ಹೇಗೆ ಗೊತ್ತಾಾಗುತ್ತದೆ. ಸಚಿವ ಪ್ರಿಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಕಚೇರಿಯಿಂದ ರಾಜಭವನಕ್ಕೆೆ ಕರೆ ಬರುತ್ತದೆ ಎಂದು ಆರೋಪಿಸಿದ್ದಾರೆ. ಅಂದರೆ ಆರ್ಎಸ್ಎಸ್ ಕಚೇರಿಯ ಟೆಲಿೆನ್ ಕೂಡ ಟ್ಯಾಾಪ್ ಆಗುತ್ತಿಿದೆ ಎಂದರ್ಥ. ಇದು ೆನ್ ಟ್ಯಾಾಪಿಂಗ್ ಸರ್ಕಾರವೇ. ಇನ್ನು ನಮ್ಮ ೆನ್ ಕೂಡ ಟ್ಯಾಾಪ್ ಮಾಡಲಾಗುತ್ತಿಿದೆಯೇ. ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ಇದ್ದಾಗ ೆನ್ ಟ್ಯಾಾಪಿಂಗ್ನಿಂದಲೇ ಸರ್ಕಾರ ಬಿದ್ದುಹೋಗಿತ್ತು. ಈ ಸರ್ಕಾರ ಕೂಡ ೆನ್ ಟ್ಯಾಾಪ್ ಮಾಡಿ ಬಿದ್ದುಹೋಗುತ್ತದೆ. ಈ ಬಗ್ಗೆೆ ಸರ್ಕಾರ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.
ಕಾನೂನು ಸಚಿವರು ರಾಜ್ಯಪಾಲರ ಮೂಲಕವೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈಗ ಅವರ ವಿರುದ್ಧವೇ ಮಾತನಾಡುತ್ತಾಾರೆ. ಸಚಿವರು ಗೌಪ್ಯತೆ ಕಾಪಾಡುವ ಕೆಲಸ ಮಾಡಬೇಕಿತ್ತು. ಇವರು ಕಾನೂನು ಸಚಿವರಾಗಿರುವುದೇ ನಮ್ಮ ಸದನಕ್ಕೆೆ ಅಗೌರವ. ಈ ಹಿಂದೆ ಅನಾಮಿಕ ವ್ಯಕ್ತಿಿಯೊಬ್ಬ ಸದನಕ್ಕೆೆ ಬಂದು ಕುಳಿತಿದ್ದ. ಕಾನೂನು ಸಚಿವರು ಅದನ್ನು ನೋಡಿಕೊಂಡು ಸುಮ್ಮನೆ ಕೂತಿದ್ದರು. ಇದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸದನಕ್ಕೆೆ ಯಾರು ಬೇಕಾದರೂ ಬರಬಹುದೇ ಎಂದು ಪ್ರಶ್ನಿಿಸಿದರು.
ಬಳಿಕ ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸಚಿವರು ಹಾಗೂ ಐಟಿ ಸಚಿವರು ೆನ್ ಟ್ಯಾಾಪ್ ಬಗ್ಗೆೆ ಪರೋಕ್ಷವಾಗಿ ಒಪ್ಪಿಿಕೊಂಡಿದ್ದಾರೆ. ೆನ್ ಟ್ಯಾಾಪ್ ಮಾಡುವುದು ಅಪರಾಧ. ಸಂವಿಧಾನದಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ೆನ್ ಟ್ಯಾಾಪ್ ಮಾಡುತ್ತಾಾರೆ ಎಂದರೆ ಅದು ಸಂವಿಧಾನಕ್ಕೆೆ ಮಾಡುವ ಅಪಮಾನ. ಕಾನೂನು ಸಚಿವರು ಅಕ್ಷಮ್ಯ ಅಪರಾಧ ಮಾಡಿದ್ದು, ಈ ಕುರಿತು ಕ್ಷಮೆ ಕೋರಬೇಕು. ಈ ಕುರಿತು ಸಿಬಿಐ ತನಿಖೆಯಾಗಬೇಕಿದೆ. ರಾಜಭವನದಲ್ಲಿ ಏನು ನಡೆಯುತ್ತಿಿದೆ ಎಂಬ ಎಲ್ಲ ಮಾಹಿತಿ ಸರ್ಕಾರಕ್ಕೆೆ ಗೊತ್ತಾಾಗುತ್ತಿಿದೆ. ರಾಜಭವನಕ್ಕೆೆ ಕರೆ ಮಾಡಿದ ಕೇಂದ್ರದ ನಾಯಕರು ಹಾಗೂ ಆರ್ಎಸ್ಎಸ್ ನಾಯಕರ ಹೆಸರಿನ ಪಟ್ಟಿಿಯನ್ನು ಸರ್ಕಾರ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ಖಂಡನಾ ನಿರ್ಣಯವೇ
ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯದ ಬಗ್ಗೆೆ ಸದನದಲ್ಲಿ ಮಾತನಾಡಿದ ಆರ್.ಅಶೋಕ, ಇಂದಿನ ಪತ್ರಿಿಕೆಗಳಲ್ಲಿ ಖಂಡನಾ ನಿರ್ಣಯ ಎಂದು ವರದಿ ಬಂದಿದೆ. ಚರ್ಚೆಯ ನೆಪದಲ್ಲಿ ರಾಜ್ಯಪಾಲರಿಗೆ ಅಪಮಾನ ಮಾಡಲಾಗಿದೆ. ಖಂಡನಾ ಭಾಷಣಕ್ಕೆೆ ವಂದನಾ ನಿರ್ಣಯ ಸಾಧ್ಯವೇ ಎಂದು ಪತ್ರಿಿಕೆಗಳು ಪ್ರಶ್ನೆೆ ಮಾಡಿವೆ. ರಾಜ್ಯಪಾಲರನ್ನು ಮೊದಲ ಪ್ರಜೆ ಎಂದು ಕರೆಯುತ್ತೇವೆ. ಅಂತಹವರಿಗೆ ಈ ರೀತಿ ಗೌರವ ಕೊಡಬಾರದು. ಕಾಂಗ್ರೆೆಸ್ ಶಾಸಕ ಎ.ಎಎಸ್.ಪೊನ್ನಣ್ಣ ನಿನ್ನೆೆ ಮಾತನಾಡಿ, ರಾಜ್ಯಪಾಲರು ಒಂದೇ ಸಾಲಿನಲ್ಲಿ ಭಾಷಣ ಮುಗಿಸಿರುವುದು ಆತಂಕಕಾರಿ ನಡೆ ಎಂದು ಹೇಳಿದ್ದಾರೆ. ಇಲ್ಲಿ ಆತಂಕವಾದಿಗಳಿಲ್ಲ ಅಥವಾ ಶಾಸಕರು ಇಲ್ಲಿಗೆ ಆತಂಕದಿಂದ ಬಂದಿಲ್ಲ. ಸದನದಲ್ಲಿ ಭಯದ ವಾತಾವರಣವಿದ್ದರೆ ಇಲ್ಲಿಗೆ ರಾಜ್ಯಪಾಲರನ್ನು ಏಕೆ ಕರೆಸಬೇಕು ಎಂದು ಪ್ರಶ್ನೆೆ ಮಾಡಿದರು.
ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ರಾಜ್ಯಪಾಲರು ಓಡಿ ಹೋಗಿದ್ದಾರೆ ಎಂದು ಹೇಳಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋೋಟ್ ಸರ್ಕಾರದ ಸಾಧನೆಗಳ ಬಗ್ಗೆೆ ಕೆಲವು ಸಾಲಿನಲ್ಲಿ ಹೇಳಿದ್ದಾರೆ. ಆದರೂ ಶಾಸಕರು, ಸಚಿವರು ರಾಜ್ಯಪಾಲರಿಗೆ ಅಪಮಾನ ಮಾಡಿದ್ದಾರೆ. ಆರ್ಸಿಬಿ ಸಂಭ್ರಮಾಚರಣೆ ನಡೆದಾಗ ರಾಜ್ಯಪಾಲರನ್ನು ವೇದಿಕೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಅಲ್ಲಿ ಶಿಷ್ಟಾಾಚಾರ ಪಾಲಿಸಲಿಲ್ಲ. ರಾಜ್ಯಪಾಲರ ಮುಂದೆ ರಾಯಲ್ ಚಾಲೆಂಜರ್ಸ್ ವಿಸ್ಕಿಿಯ ೆಟೋ ಇರಿಸಲಾಗಿತ್ತು. ಹೀಗೆ ಪ್ರತಿ ಸಲ ರಾಜ್ಯಪಾಲರನ್ನು ಕರೆಸಿ ಅಪಮಾನ ಮಾಡಲಾಗುತ್ತಿಿದೆ. ರಾಜ್ಯಪಾಲರಿಗೆ ಅಪಮಾನ ಮಾಡಿದ ಶಾಸಕರನ್ನು ಸದನದಿಂದ ಹೊರಗೆ ಹಾಕಬೇಕು ಎಂದು ಆಗ್ರಹಿಸಿದರು.
ಕಾಂಗ್ರೆೆಸ್ ಶಾಸಕರು ಮಾತಾಡಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಅದನ್ನು ಜನರು ನೋಡಿದ್ದಾರೆ. ರಾಜ್ಯಪಾಲರು ಓಡಿಹೋಗಿದ್ದಾರೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿರುವುದು ತಪ್ಪುು. ರಾಜ್ಯಪಾಲರು ಸದನದಿಂದ ಓಡಿಲ್ಲ. ಬಿ.ಕೆ.ಹರಿಪ್ರಸಾದ್ ರಾಜ್ಯಪಾಲರಿಗೆ ಕೈ ಬೆರಳು ತೋರಿಸುತ್ತಿಿರುವುದು ವೀಡಿಯೋದಲ್ಲಿದೆ. ಶಾಸಕ ಶರತ್ ಬಚ್ಚೇಗೌಡರು ಬೆದರಿಕೆ ಹಾಕುವುದು, ಬಿ.ಕೆ.ಹರಿಪ್ರಸಾದ್ ಬಟ್ಟೆೆ ಹರಿದುಕೊಂಡಿರುವುದು ದಾಖಲಾಗಿದೆ. ಬಿಜೆಪಿ ಶಾಸಕರು ಸೀಟು ಬಿಟ್ಟು ಹೋಗದಿದ್ದರೂ, ಬಿ.ಕೆ.ಹರಿಪ್ರಸಾದ್ ಬಟ್ಟೆೆ ಹರಿದಿದ್ದು ಬಿಜೆಪಿಯವರು ಎಂದು ಆರೋಪ ಮಾಡಿದ್ದಾರೆ. ರಾಜ್ಯಪಾಲರಿಗೆ ರಕ್ಷಣೆ ನೀಡಲು ಶಾಸಕರನ್ನು ನಾನೇ ಕಳುಹಿಸಿದೆ ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಅದೇ ಶಾಸಕರು ರಾಜ್ಯಪಾಲರು ಹೊರಗೆ ಹೋಗದಂತೆ ಅಡ್ಡಗಟ್ಟಿಿದ್ದಾರೆ. ಈ ಘಟನೆ ಬಗ್ಗೆೆ ಸರ್ಕಾರ ವಿಷಾದ ವ್ಯಕ್ತಪಡಿಸಬೇಕು. ಆದರೆ ಇಷ್ಟೆೆಲ್ಲ ಆದರೂ ಸರ್ಕಾರಕ್ಕೆೆ ಇದು ತಪ್ಪುು ಎಂದು ಅನ್ನಿಿಸುತ್ತಿಿಲ್ಲ. ಕಾಂಗ್ರೆೆಸ್ ಶಾಸಕರು ಭಾಷಣದ ಮೇಲೆ ವಂದನಾ ನಿರ್ಣಯ ಮಾಡುವ ಬದಲು ಖಂಡನಾ ನಿರ್ಣಯ ಮಾಡುತ್ತಿಿದ್ದಾರೆ ಎಂದರು.
ವಿಧಾನಸಭೆಯಲ್ಲಿ ಆರ್. ಅಶೋಕ್ ಆಗ್ರಹ ರಾಜ್ಯಪಾಲರಿಗೆ ಕರೆ ಮಾಡಿದವರ ಪಟ್ಟಿ ಬಹಿರಂಗವಾಗಲಿ

