ಸುದ್ದಿಮೂಲ ವಾರ್ತೆ ಮುದಗಲ್ , ಫೆ.19:
ಇತ್ತೀಚಿಗೆ ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವತ್ ನಾರಾಯಣ ಬಳಸಿರುವ ಟಿಪ್ಪುವಿನಂತೆ ಮಾಜಿ ಸಿಎಂ ಸಿದ್ಧರಾಮಯ್ಯರನ್ನ ಹೊಡೆದುಹಾಕಿ ಪದವನ್ನು ಖಂಡಿಸಿ ಇದೇ ಫೆ,20ರಂದು ಲಿಂಗಸುಗೂರುನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆರ್ ರುದ್ರಯ್ಯ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ ನಾರಾಯಣರವರು ಸಿದ್ಧರಾಮಯ್ಯ ನವರ ಬಗ್ಗೆ ಅನಾಗರೀಕ ಪದ ಬಳಕೆ ಮಾಡಿದ್ದಾರೆ. ಟಿಪ್ಪುವಿನಂತೆ ಸಿದ್ದರಾಮಯ್ಯ ರನ್ನ ಹೊಡೆದುಹಾಕಿ ಎಂದು ಅವಹೇಳನಕಾರಿ ಹೇಳಿಕೆ ಖಂಡನೀಯ. ಟಿಪ್ಪು ಒಬ್ಬ ಹೋರಾಟಗಾರವೆಂಬುದು ಪಠ್ಯದಲ್ಲಿ ಓದಿ ತಿಳಿದುಕೊಂಡಿದ್ದೇವೆ. ಬ್ರಿಟಿಷರ ಜತೆಗೆ ನಾಲ್ಕು ಆಂಗ್ಲೋ-ಇಂಡಿಯಾ ಟಿಪ್ಪುವಿನ ಯುದ್ಧ ಆಗಿವೆ. ಧರ್ಮದ ಆಧಾರದ ಮೇಲೆ ಯುವಕರನ್ನ ಬಿಜೆಪಿಯವರು ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯ-ದೇಶವನ್ನು ಬಿಜೆಪಿಯವರು ಎತ್ತಕೊಂಡ್ಯೂತ್ತಿದ್ದಾರೆಂಬುದು ತಿಳಿಯದಾಗಿದೆ. ಸಮಾಜದಲ್ಲಿ ಆಶಾಂತಿ ಸೃಷ್ಠಿ ಮಾಡುತ್ತಿದ್ದಾರೆ. ಸರಕಾರ ಸಚಿವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಲಿಂಗಸುಗೂರುನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು. ನಾಗನಗೌಡ ತುರಡಗಿ, ಎಸ್ ಆರ್ ರಸೂಲ್, ಬಸನಗೌಡ ಕರಡಕಲ್, ಅಮರಯ್ಯ ಹಿರೇಮಠ, ಮಾಧವ್ ನೇಲಗಿ, ಪಿಡ್ಡಪ್ಪ ನಾಯಕ, ಶರಣಪ್ಪ ಚಿಕ್ಕಹೆಸರೂರು, ಪ್ರಭು ಹವಾಲ್ದಾರ್, ಸಂಗಣ್ಣ ಬಯ್ಯಾಪೂರು, ನಾಗರಾಜ ದಫೇದಾರ್, ಶ್ರೀ ಶೈಲ್ ಅಂಗಡಿ, ಅಂಬರೀಶ್ ಪೂಜಾರಿ, ರಹಿಮಾನ ಟೇಲರ್, ಶಾಂತಾ ಹಣಿಗಿ, ಅಬ್ದುಲ್ ಖದೀರ್, ರಹೀಂ ಶಾ, ಹುಸೇನ್ ಭಾಷ ಡೊಂಗ್ರಿ ಹಾಗೂ ಇತರರಿದ್ದರು.