ಸುದ್ದಿಮೂಲ ವಾರ್ತೆ ಸಿಂಧನೂರು, ನ.03:
ತಾಲ್ಲೂಕಿನ ಗ್ರಾಾಮೀಣ ಪ್ರದೇಶಗಳಲ್ಲಿ ನಾಯಕ ಸಮುದಾಯದವರ ಮೇಲೆ ನಿರಂತರ ಹಲ್ಲೆೆ ಮತ್ತು ದೌರ್ಜನ್ಯಗಳು ನಡೆಯುತ್ತಿಿವೆ. ಮನೆಗಳಿಗೆ ನುಗ್ಗಿಿ ಮಾರಕಾಸಗಳಿಂದ ಹಲ್ಲೆೆ ಮಾಡುತ್ತಿಿರುವುದರಲ್ಲದೆ, ಹಲ್ಲೆೆಗೆ ಒಳಗಾದವರ ಮೇಲೆಯೇ ಕೇಸ್ ದಾಖಲಿಸುತ್ತಿಿರುವುದು ಖಂಡನೀಯವಾಗಿದೆ. ಆದ್ದರಿಂದ ಈ ಬಗ್ಗೆೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ತಿಮ್ಮಯ್ಯ ನಾಯಕ ಮನವಿ ಮಾಡಿದರು.
ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯನ್ನುದ್ದೇಶಿಸಿ ಅವರು ಮಾತನಾಡಿದರು. ತಾಲೂಕಿನ ಹತ್ತಿಿಗುಡ್ಡ ಗ್ರಾಾಮದಲ್ಲಿ ನಾಯಕ ಸಮಾಜದ ಮಹಿಳೆಗೆ ದುಡ್ಡು ಕೊಡುತ್ತೇವೆ ನಮ್ಮ ಜೊತೆ ಮಲಗಬೇಕು ಎಂದು ಕೇಳಿ, ಆಕೆಯನ್ನೇ ಎಳೆದಾಡಿ ಅತ್ಯಾಾಚಾರಕ್ಕೆೆ ಪ್ರಯತ್ನಿಿಸಿರುವುದು ಶೋಚನೀಯ ಸಂಗತಿಯಾಗಿದೆ. ಈ ಬಗ್ಗೆೆ ಪ್ರಶ್ನಿಿಸಿದ್ದಕ್ಕೆೆ ನಾಯಕ ಸಮಾಜದವರ ಮನೆಗಳಿಗೆ ನುಗ್ಗಿಿ ಹಲ್ಲೆೆ ಮಾಡಿದ್ದಾಾರೆ. ಇವರ ವಿರುದ್ಧ ಕೇಸ್ ಮಾಡಿದರೆ, ಹಲ್ಲೆೆಗೆ ಒಳಗಾದವರ ವಿರುದ್ಧವಷ್ಟೇ ಇಡೀ ನಾಯಕ ಸಮಾಜದವರ ಮೇಲೆ ಸುಳ್ಳು ಕೇಸ್ ದಾಖಲಿಸಿರುವುದು ಎಷ್ಟು ಸರಿ. ಕಾನೂನು ಅನ್ಯಾಾಯಕ್ಕೆೆ ಒಳಗಾದವರ ಪರ ಇದೆಯೇ, ಇಲ್ಲವೋ ಎಂದು ಪ್ರಶ್ನಿಿಸಿದರು.
ಕುರುಕುಂದಿ ಗ್ರಾಾಮದಲ್ಲಿ ಕಳೆದ 23 ವರ್ಷಗಳ ಹಿಂದೆ ಗೌಡಪ್ಪ ಈರಣ್ಣ ಅವರು ಜಮೀನು ಖರೀದಿಸಿ, ಅದರ ಖರೀದಿಪತ್ರ ಮತ್ತು ಕಬ್ಜಾಾ ಸ್ವಾಾಧೀನ ಪತ್ರ ಇದ್ದು, ಹೊಲವನ್ನು ಸಾಗುವಳಿ ಮಾಡುತ್ತಾಾ ಬಂದಿದ್ದಾಾರೆ. ಈ ವರ್ಷ ಭತ್ತ ಬೆಳೆದು ಕಟಾವಿಗೆ ಬಂದ ಸಂದರ್ಭದಲ್ಲಿ ರಾತ್ರೋೋರಾತ್ರಿಿ ಕಳ್ಳತನದಿಂದ ಅದಕ್ಕೆೆ ಸಂಬಂಧ ಇಲ್ಲದವರು ಬಂದು ಭತ್ತ ಕಟಾವ್ ಮಾಡಿಕೊಂಡು ಹೋಗಿರುವುದು ದೌರ್ಜನ್ಯದ ಪರಮಾವಧಿಯಾಗಿದೆ. ದುಡ್ಡಿಿನ ಆಸೆಗೆ ಪೊಲೀಸರು ಭತ್ತ ಕದ್ದವನನ್ನು ಬಿಟ್ಟು, ಭತ್ತ ಬೆಳೆದ ರೈತನ ವಿರುದ್ದ ಕೇಸ್ ದಾಖಲಿಸಿರುವುದು ದುರಾದೃಷ್ಟಕರ. ಅನ್ಯಾಾಯಕ್ಕೆೆ ಒಳಗಾದವರ ಪರವಾಗಿ ನಿಂತ ವಕೀಲರ ಕುಟುಂಬದವರ ಮೇಲೆ ದೂರು ದಾಖಲಿಸುತ್ತಾಾರೆ ಎಂದರೆ ನಾವು ಯಾವ ಸಮಾಜದಲ್ಲಿ ಬದುಕುತ್ತಿಿದ್ದೇವೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಜಿಲ್ಲೆೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಈ ಬಗ್ಗೆೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ತಪ್ಪಿಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಿ, ಅನ್ಯಾಾಯಕ್ಕೆೆ ಒಳಗಾದವರಿಗೆ ನ್ಯಾಾಯ ಒದಗಿಸಿ ಕೊಡಬೇಕು. ವೈಯಕ್ತಿಿಕ ಮತ್ತು ಕ್ಷುಲ್ಲಕ ಕಾರಣಕ್ಕೆೆ ಜಾತಿ-ಜಾತಿಗಳ ನಡುವೆ ಗಲಭೆ ಸೃಷ್ಠಿಿಸಿ ಸಾಮರಸ್ಯ ಕದಡುವುದು ಕೈಬಿಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ದೇವೇಂದ್ರಪ್ಪ ನಾಯಕ ಯಾಪಲಪರ್ವಿ, ಕರೇಗೌಡ ಕುರುಕುಂದಿ, ಹನುಮಂತಪ್ಪ ಪುಲದಿನ್ನಿಿ, ಕನಕಪ್ಪ ನಾಯಕ ಮುಳ್ಳೂರು, ವೆಂಕಟೇಶ ನಾಯಕ ರಾಗಲಪರ್ವಿ, ಅರುಣಕುಮಾರ ನಾಯಕ, ಲಕ್ಷ್ಮಣ ನಾಯಕ ಕುರುಕುಂದಿ ವಕೀಲ, ರಮೇಶ ತುರ್ವಿಹಾಳ, ಯಂಕೋಬ ಬೂತಲದಿನ್ನಿಿ, ಸಂಗಮೇಶ ಗುಂಜಳ್ಳಿಿ, ಚಂದ್ರಶೇಖರ ನಾಯಕ ಉಪಸ್ಥಿಿತರಿದ್ದರು.
ನಾಯಕ ಸಮುದಾಯದವರ ಮೇಲೆ ನಿರಂತರ ಹಲ್ಲೆ; ಸೂಕ್ತ ಕ್ರಮಕ್ಕೆ ಆರ್.ತಿಮ್ಮಯ್ಯ ನಾಯಕ ಒತ್ತಾಯ

