ಬೆಂಗಳೂರು.ಮೇ.5: ಪ್ರೇಮ ಕಥೆ ಅಂತ ಬಂದರೇ ಮೊದಲು ಬರುವ ಹೆಸರೇ ರಾಧೆ-ಕೃಷ್ಣ. ಕೃಷ್ಣನಿಗೆ 16 ಸಾವಿರ ಪತ್ನಿಯರು ಇದ್ದರು ಎಂಬ ಸಂಗತಿ ಎಲ್ಲಾರಿಗೂ ತಿಳಿದೇ ಇದೆ. 16 ಸಾವಿರ ಹೆಂಡತಿಯರು ಇದ್ದರು ಕೂಡ ಇಲ್ಲಿ ಯಾವ ಹೆಸರು ಕೂಡ ಬೆಳಕಿಗೆ ಬರುವುದಿಲ್ಲ. ಕೃಷ್ಣ ಎಂದ ಕೂಡಲೇ ಮೊದಲು ನೆನಪಿಗೆ ಬರುವುದೇ ರಾಧೆ. ರುಕ್ಮಿಣಿ ಕೃಷ್ಣ ಹೆಂಡತಿ ಆಗದಿದ್ದರೂ ಕೃಷ್ಣ ಜೊತೆ ರಾಧೆ ಹೆಸರೆ ಕೇಳಿ ಬರುತ್ತದೆ. ರಾಧಾ ಕೃಷ್ಣ ಎಂದೇ ಹೆಚ್ಚು ಕೇಳಿಬರುತ್ತದೆ ಹೊರತುಇ ಕೃಷ್ಣ ರುಕ್ಮೀಣಿ ಎಂಬ ಹೆಸರುಗಳು ಕೇಳಿಬರುವುದು ತುಂಬಾ ಕಡಿಮೆ .
ಕೃಷ್ಣನ ಹೆಂಡತಿಯಾಗಿ ರುಕ್ಮಿಣಿ ಇದ್ದರೂ ಕೂಡ ಕೃಷ್ಣನೊಟ್ಟಿಗೆ ಹೆಚ್ಚು ಗುರುತಿಸಿಕೊಂಡವಳೇ ರಾಧೆ. ರಾಧ-ಕೃಷ್ಣ ಮದುವೆಯಾಗದಿದ್ದರು ಅವರ ಪ್ರೇಮ ಚಿರಕಾಲ, ಇಂದಿನ ಕಾಲದ ಯುವಕ ಯುವತಿಯರಿಗೆ ಪ್ರೇಮ ಕಥೆಗೆ ರಾಧ ಕೃಷ್ಣರೇ ಸ್ಫೂರ್ತಿಯಾಗಬೇಕೆ ಹೊರತು ಕಾಲಕ್ಕೆತಕ್ಕಂತೆ ಬದಲಾಗೋ ಯೌವನದ ಮೇಲಿನ ಮೋಹದ ಕಥೆಗಳಲ್ಲ.
ಕೃಷ್ಣನು ತನ್ನ ನೀಲಿ ಬಣ್ಣದ ಮೈಮಾಟ ಹೊಂದಿದ್ದ. 16 ಸಾವಿರ ಹೆಂಡತಿಯರನ್ನು ಮದುವೆಯಾಗಿದ್ದ. 16 ಸಾವಿರ ಹೆಂಡತಿ ಜೊತೆಯಲ್ಲಿ ಹೇಗೆ ಜೀವನ ಸಾಗಿಸುತ್ತಿದ್ದಾ? ಅಷ್ಟೇಲ್ಲ ಹೆಂಡತಿಯರು ಇದ್ದರು ಕೂಡ ರಾಧೆಯನ್ನು ಯಾಕೆ ಪ್ರೀತಿಸಿದ್ದು ಅಂತ ಕೇಳ್ತಿರಾ.. 16 ಸಾವಿರ ಹೆಂಡತಿಯಾರು ಹೇಗೆ ಆದರು ಎಂಬುವುದರ ಮಾಹಿತಿ ಇಲ್ಲಿದೆ ನೋಡಿ..
ಕೃಷ್ಣನನ್ನು 16 ಸಾವಿರ ಜನ ಹೆಣ್ಣು ಮಕ್ಕಳು ಇಷ್ಟ ಪಟ್ಟಿರುತ್ತಾರೆ. ಒಂದು ದಿನ ಅವರು ಮದುವೆಯಾಗುವಂತೆ ಪೀಡಿಸುತ್ತಿದ್ದ ವೇಳೆ ಕೃಷ್ಣ ಹೇಳಿದ ಒಂದು ಮಾತಿನಿಂದ ಅಷ್ಟೂ ಜನ ಹೆಣ್ಣು ಮಕ್ಕಳು ಕೂಡ ಕೃಷ್ಣನನ್ನೇ ತನ್ನ ಗಂಡ ಎಂದು ಮನಸ್ಸಿನಲ್ಲಿಯೇ ಪೂಜಿಸುತ್ತಾರೆ. ಆದರಿಂದ 16 ಸಾವಿರ ಹೆಂಡತಿಯರನ್ನು ಹೊಂದಿರುವ ಶ್ರೀ ಕೃಷ್ಣ ಪರಮಾತ್ಮ ಎಂದು ಗುರುತಿಸಿಕೊಂಡಿರುವುದು. ಅಷ್ಟೇಲ್ಲರು ನಡುವೆ ರಾಧೆಯು ಒಬ್ಬಳು ಆದರೆ ರಾಧೆ ಮಾತ್ರ ಕೃಷ್ಣನ ಮನಗೆದ್ದವಳು.. ಅಲ್ಲಿಂದ ಶುರುವಾದ ಪ್ರೇಮ ಇಲ್ಲಿಯ ವರೆಗೂ ಕೂಡ ಅಜರಾಮರ. ರಾಧ ಕೃಷ್ಣ ರ ಪ್ರೀತಿ ಎಷ್ಟು ಶುದ್ಧ ಎಂಬುವುದು ಅವರ ಕಥೆಯಲ್ಲಿಯೇ ತಿಳಿಯಲು ಸಾಧ್ಯ.
ರಾಧ-ಕೃಷ್ಣ ಯಾಕೆ ಮದುವೆಯಾಗಲು ಸಾಧ್ಯವಾಗಲಿಲ್ಲ ಅಂತ ಯೋಚಿಸುತ್ತಿದ್ದೀರಾ? ರಾಧ-ಕೃಷ್ಣ ಅಷ್ಟೆಲ್ಲ ಪ್ರೀತಿಸಿದರು ಕೂಡ ಮದವೆಯಾಗಲು ಸಾಧ್ಯವಾಗಲಿಲ್ಲ. ಕಾರಣ ರಾಧೆ ಈ ಮೊದಲೇ ಬಾಲ್ಯ ವಿವಾಹವಾಗಿದ್ದಳು ಎಂಬ ಉಲ್ಲೇಖವಿದೆ. ಮದುವೆಯಾಗಿ ಒಂದೇ ವರ್ಷದಲ್ಲಿ ಆಕೆಯ ಗಂಡ ತೀರಿ ಹೋಗಿದ್ದ. ಆದರಿಂದ ಮರು ಮದುವೆಗೆ ರಾಧೆ ಒಪ್ಪಲಿಲ್ಲ ಮತ್ತು ಮದುವೆ ಎಂಬ ಬಂಧನದಲ್ಲಿ ರಾಧೆ ಬಂಧಿಯಾಗುವುದಗಲಿ ಅಥವಾ ದೈಹಿಕ ಸಂಬಂಧದಿಂದ ತನ್ನ ಪ್ರೀತಿಯನ್ನು ಮಲಿನ ಮಾಡುವ ಆಸಕ್ತಿಯನ್ನು ರಾಧೆ ಹೊಂದಿರಲಿಲ್ಲ. ಆದರಿಂದ ರಾಧ ಕೃಷ್ಣನನ್ನು ಮದುವೆಯಾಗದೇ ಪ್ರೇಮಿಗಳಾಗಿಯೇ ಉಳಿಯುವಂತಾಯಿತ್ತು.
ರಾಧೆ ಮತ್ತು ಕೃಷ್ಣ ಯಾವತ್ತೂ ಪತಿ-ಪತ್ನಿಯಾಗಿರಲಿಲ್ಲ. ಮದುವೆಯ ಬಂಧನದಲ್ಲೂ ಅವರು ಬಂಧಿಯಾಗಿರಲಿಲ್ಲ ಶುದ್ಧ ಪ್ರೀತಿಯನ್ನು ಮಾತ್ರ ಹೊಂದಿದ್ದರು.
ರಾಧೆಯ ಮಾತನ್ನು ಮನ್ನಿಸಿದ ಕೃಷ್ಣ ಬೃಂದಾವನವನ್ನು ತೊರೆದು ತನ್ನ ರಾಜನ ಜವಾಬ್ದಾರಿಯನ್ನು ನಿಭಾಯಿಸಲು ದ್ವಾರಕೆಗೆ ತೆರಳಿದನು. ಆದರೆ, ಕೃಷ್ಣನು ರಾಜನಾದ ಬಳಿಕ ಮತ್ತೆ ಮರಳಿ ಬೃಂದಾವನಕ್ಕೆ ಬರಲೇ ಇಲ್ಲ. ರಾಧೆಯ ತನ್ನ ಜೀವನದ ಪ್ರತಿ ಕ್ಷಣಗಳನ್ನು ಕೃಷ್ಣನ ನೆನಪಿನಲ್ಲಿಯೇ ಸಾಗಿಸುತ್ತಿದ್ದಳು. ಕೃಷ್ಣ ಕೂಡ ರಾಧೆಯ ನೆನಪಿನಲ್ಲಿಯೇ ಜೀವನ ಕಳೆಯುತ್ತಿದ್ದರು ಕೂಡ ರಾಧೆಯನ್ನು ನೋಡಲಾಗಿ ಎಂದಿಗೂ ಬರಲಿಲ್ಲ.. ಕಾರಣ ರಾಜನ ಜವಾಬ್ದಾರಿಯಲ್ಲಿಯೇ ಕೃಷ್ಣ ಮುಳುಗಿದ್ದರಿಂದ ರಾಧೆಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ.
ರಾಧೆ ಒಂದು ದಿನ ಕಾಯಿಸಿದ ಹಾಲನ್ನು ತನ್ನ ಕಾಲ ಮೇಲೆ ಚೆಲ್ಲಿಕೊಂಡಳು. ಅದರ ಪರಿಣಾಮವಾಗಿ ಶ್ರೀ ಕೃಷ್ಣನ ಕಾಲಿನ ಮೇಲೆ ಬೊಬ್ಬೆಗಳಾದವು. ಅವರ ಪ್ರೀತಿಯನ್ನು ತಿಳಿಯಲು ಈ ಒಂದು ಉದಾಹರಣೆಯೇ ಸಾಕು.. ಎಷ್ಟೂ ಶುದ್ದ ಪ್ರೇಮೆ ಎಂಬುವುದನ್ನು ತಿಳಿಸುತ್ತದೆ.
ಹೀಗೆ ಹಲವಾರು ವರ್ಷ ಕಳೆದರು ಕೂಡ ಕೃಷ್ಣ ರಾಧೆಯನ್ನು ಭೇಟಿಯಾಗಲೇ ಇಲ್ಲ. ಸುಮಾರು ವರ್ಷ ಉರುಳಿದ್ದರಿಂದ ರಾಧೆಯ ಆಯಸ್ಸು ಕೂಡ ಉರುಳುತ್ತಿತ್ತು. ಕೊನೆಯ ಬಾರಿಯಾದರು ಕೃಷ್ಣನನ್ನು ನೋಡಲೆಂದು ರಾಧೆ ದ್ವಾರಕೆಗೆ ಹೋಗಿ ಕೃಷ್ಣನನ್ನು ಭೇಟಿಯಾದಳು. ಖುಷಿಯಿಂದ ಕೃಷ್ಣನು ರಾಧೆಗೆ ಇಷ್ಟವಾಗುವಂತಹ ಸ್ವರವನ್ನು ತನ್ನ ಕೊಳಲಿನ ಮೂಲಕ ನುಡಿಸಿದನು. ಆ ಕೊಳಲಿನ ನಾದಕ್ಕೆ ಹೆಜ್ಜೆ ಹಾಕುತ್ತ ರಾಧೆ ಪ್ರಾಣ ಬಿಟ್ಟಳು, ಕೊನೆಗೆ ಕೃಷ್ಣನು ಕೋಳಲನ್ನು ಮುರಿದು ಬಿಸಾಕಿ ಅವಳತ್ತ ಹೋಡಿದನು.
ಈ ಕಥೆಯ ಮೂಲಕ ಒಟ್ಟಿಗೆ ಇದ್ದು ಪ್ರೀತಿಸುವುದು ಮಾತ್ರ ಪ್ರೀತಿಯಲ್ಲ, ದೂರವಿದ್ದರೂ ಪ್ರೀತಿಸಬಹುದು ಎಂಬುವುದನ್ನು ಮತ್ತು ನಿಷ್ಕಲ್ಮಶ ಪ್ರೀತಿಯ ಅರ್ಥಪೂರ್ಣವಾದ ಸಂಬಂಧವನ್ನು ಈ ರಾಧ ಕೃಷ್ಣನ ಕಥೆಯಲ್ಲಿಯೇ ತಿಳಿಯಬಹುದು.