ಗ್ಯಾಸ್ ಬೆಲೆ ಏರಿಕೆ ಖಂಡನೆ: ರಫೀಕ್ ಜಮಾದಾರ
ಜೇವರ್ಗಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಬಿಜೆಪಿ ಸರ್ಕಾರವು ಅಡಿಗೆ ಅನಿಲ ಸಿಲಿಂಡರ್ ಗೆ 50 ಹಾಗೂ ವಾಣಿಜ್ಯ ಅಡುಗೆ ಸಿಲಿಂಡರ್ 350 ರೂಪಾಯಿ ರೂಪಾಯಿ ಏರಿಕೆ ಮಾಡಿದ್ದರಿಂದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ರಫೀಕ್ ಜಮಾದಾರ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಈಗಾಗಲೇ ಸಾರ್ವಜನಿಕರು ಬೆಲೆ ಏರಿಕೆಯಿಂದ ಜೀವನ ತತ್ತರಿಸಿದ್ದಾರೆ ಮತ್ತೆ ಗ್ಯಾಸ್ ಬೆಲೆ ಏರಿಕೆ ಮಾಡಿದರಿಂದ ಜನರು ತೊಂದರೆಗೊಳಾಗುತ್ತಾರೆ ಆದಕಾರಣ ಕೂಡಲೇ ಗ್ಯಾಸ್ ಬೆಲೆ ಹಿಂಪಡಿಯಬೇಕೆಂದು ಆಗ್ರಹಿಸಿದ್ದಾರೆ.
ಭಾರತ ದೇಶದಲ್ಲಿ ಲಕ್ಷಾನುಗಟ್ಟಲೆ ಉದ್ಯೋಗ ಯುವಕರಿಗೆ ನೀಡುತ್ತೇನೆ ಎಂದು ಭರವಸೆ ನೀಡಿದ ಮೋದಿ ಯುವಕರು ಪಕೋಡ ಮಾಡಿ ಜೀವನ ಸಾಗಿಸಿ ಎಂದು ಆಶಾಸ್ಪದವಾಗಿ ಹೇಳುತ್ತಾರೆ. ಮೋದಿಜಿ ಅವರೇ ನಿಮ್ಮ ಬಿಜೆಪಿ ಸರ್ಕಾರದಲ್ಲಿ ಯುವಕರು ಉದ್ಯೋಗವಿಲ್ಲದೆ ಅಲೆದಾಡುತ್ತಿದ್ದಾರೆ. ಮತ್ತೊಂದು ಕಡೆ ಸರಕಾರದಲ್ಲಿ ಖಾಲಿ ಇರುವ ಹುದ್ದೆಗಳು ಭರ್ತಿ ಮಾಡುತ್ತಿಲ್ಲ ಕಲಿತ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿದ್ದಾರೆ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ ಇದಕ್ಕೆಲ್ಲ ಕಾರಣ ಪರವಾಗಿ ಕೇಂದ್ರ ಸರ್ಕಾರ ಆರೋಪಿಸಿದರು.
ಒಂದು ಕಡೆ ಬೆಲೆ ಏರಿಕೆ ಇನ್ನೊಂದು ಕಡೆ ಅಡಿಗೆ ಅನಿಲ ದರ ಏರಿಕೆ ಮತ್ತೊಂದು ಕಡೆ ನಿರುದ್ಯೋಗ ಕಾಡುತ್ತಿದ್ದು ಸಂಪೂರ್ಣವಾಗಿ ಸುಳ್ಳು ಆಶ್ವಾಸನೆಗಳು ನೀಡುವ ಸರ್ಕಾರವಾಗಿದೆ ಮೋದಿ ಸರ್ಕಾರ ಎಂದು ಕಾಂಗ್ರೆಸ್ ಯುವ ಮುಖಂಡ ರಫೀಕ್ ಜಮಾದಾರ್ ಆರೋಪಿಸಿದರು.