ನವದೆಹಲಿ, ೆ.11:
ಸರಿಯಾಗಿ ಕೆಲಸ ಮಾಡದಿದ್ದರೆ, ಐದು ವರ್ಷ ಪೂರ್ಣಗೊಳ್ಳುವ ಮೊದಲೇ ಶಾಸಕರು ಅಥವಾ ಸಂಸದರನ್ನು ‘ಜನಪ್ರತಿನಿಧಿಗಳ ಸ್ಥಾಾನದಿಂದ ಕೆಳಗಿಳಿಸುವ ಹಕ್ಕು’ ಇರುವ ವ್ಯವಸ್ಥೆೆಯನ್ನು ಜಾರಿ ಮಾಡಬೇಕು ಎಂದು ಆಮ್ ಆದ್ಮಿಿ ಪಕದ ಸಂಸದ ರಾಘವ ಚಡ್ಡಾಾ ಅವರು ಬುಧವಾರ ರಾಜ್ಯಸಭೆಯಲ್ಲಿ ಆಗ್ರಹಿಸಿದರು.
ಜನರಿಗೆ ಈ ರೀತಿಯ ಸಾಂವಿಧಾನಿಕ ಹಕ್ಕು ನೀಡಬೇಕು. ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ನ್ಯಾಾಯಾಧೀಶರನ್ನು ಪದಚ್ಯುತಗೊಳಿವ ಹಕ್ಕು ನೀಡಲಾಗಿದೆ. ಸರ್ಕಾರಗಳ ವಿರುದ್ಧ ಅವಿಶ್ವಾಾಸ ನಿರ್ಣಯ ಮಂಡಿಸಬಹುದು. ಅಂತೆಯೇ ಶಾಸಕರು, ಸಂಸದರ ವಿರುದ್ಧವೂ ಇಂಥ ವ್ಯವಸ್ಥೆೆಯನ್ನು ರೂಪಿಸಬೇಕು’ ಎಂದರು.
ಈ ವ್ಯವಸ್ಥೆೆಯನ್ನು ರಾಜಕೀಯವಾಗಿ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ಜನಪ್ರತಿನಿಧಿಯನ್ನು ಕೆಳಗಿಳಿಸುವ ಕಾರಣಗಳಿರುವ, ಸೂಕ್ತ ರೀತಿಯಲ್ಲಿ ಪರಿಶೀಲನೆಗೆ ಒಳಪಡಿಸಿದ ಅರ್ಜಿಯನ್ನು ಆ ಮತಕ್ಷೇತ್ರದ ಶೇ.50ಕ್ಕೂ ಹೆಚ್ಚಿಿನ ಮತದಾರರು ಒಪ್ಪಿಿಕೊಳ್ಳಬೇಕು. ಜನಪ್ರತಿನಿಧಿಯೊಬ್ಬರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಮೊದಲ 18 ತಿಂಗಳು ಅವಕಾಶ ನೀಡಬೇಕು’ ಎಂದರು.
ಜನಪ್ರತಿನಿಧಿಗಳ ಸ್ಥಾನದಿಂದ ಕೆಳಗಿಳಿಸುವ ಹಕ್ಕು ನೀಡಿ : ರಾಘವ ಚಡ್ಡಾ

