ವಿಶೇಷ ವರದಿ ಕೊಪ್ಪಳ , ಡಿ.11:
ರೈತರಿಗೆ ಉಪಕಸಬು ಹೈನುಗಾರಿಕೆ. ಸರಕಾರಿ ಸ್ವಾಾಮ್ಯದ ನಂದಿನಿ ಹಾಲಿನ ಬಗ್ಗೆೆ ರಾಜ್ಯದ ಜನತೆಗೆ ಹೆಮ್ಮೆೆ. ನಂದಿನಿ ಹಾಲನ್ನು ಆರು ತಿಂಗಳುವರೆಗೂ ಶೇಖರಿಸಬಹುದಾದ ತಂತ್ರಾಾಜ್ಞಾಾನ ಬಳಸಿ ಮಿಲ್ಟ್ರೀ ಸೇರಿದಂತೆ ವಿವಿಧೆಡೆ ಸರಬರಾಜಿಗಾಗಿ ನಿರ್ಮಾಣವಾಗಿರುವ ಹಾಲಿ ಡೈರಿಯಲ್ಲಿ ಈಗ ಮಾಮೂಲಿ ಡೈರಿಯಂತೆ ಇದೆ. ಹಾಲು ಉತ್ಪಾಾದಕರ ಒಕ್ಕೂಟದ ಅಧ್ಯಕ್ಷರ ಮೇಲೆ ಸಾಕಷ್ಟು ಭರವಸೆ ಹಾಲು ಉತ್ಪಾಾದಕರು ಹೊಂದಿದ್ದಾಾರೆ.
ಹಿಂದಿನಿಂದಲೂ ರೈತ ಕೃಷಿ ಭೂಮಿಯಲ್ಲಿ ದುಡಿಯುವಾಗ ತನ್ನೊೊಂದಿಗೆ ದನಕರುಗಳನ್ನು ಸಾಕಿಕೊಂಡು ಹೈನುಗಾರಿಕೆ ಮಾಡುತ್ತಿಿದ್ದ. ಹೈನುಗಾರಿಕೆ ರೈತನಿಗೆ ಉಪಕಸಬು. ಹೈನುಗಾರಿಕೆಯಿಂದ ಸಾಕಷ್ಟು ಜನ ರೈತರು ತಮ್ಮ ಬದುಕನ್ನು ಹಸನ ಮಾಡಿಕೊಂಡಿದ್ದಾಾರೆ. ಅವರಿಗೆ ಹೆಚ್ಚು ಹೆಚ್ಚು ಉತ್ತೇಜನ ನೀಡಬೇಕಾಗಿದೆ. ಇದೇ ಕಾರಣಕ್ಕೆೆ ಆರು ತಿಂಗಳು ವರೆಗೂ ಸಂಗ್ರಹಿಸಬಹುದಾಗಿರುವ ಹಾಲನ್ನು ಪ್ಯಾಾಕ್ ಮಾಡುವ ತಂತ್ರಜ್ಞಾಾನದ ಡೈರಿ ಎಂದು ಕೊಪ್ಪಳದ ಬೂದುಗುಂಪಾ ಹಾಲಿನ ಡೈರಿ ಆರಂಭವಾಗಿದೆ.
2012 ರಲ್ಲಿ ಅಂದಿನ ಮುಖ್ಯಮಂತ್ರಿಿ ಬಿ ಎಸ್ ಯಡಿಯೂರಪ್ಪ ಕೊಪ್ಪಳ ತಾಲೂಕಿನ ಬೂದುಗುಂಪಾ ಬಳಿಯಲ್ಲಿ ವಿಶೇಷ ತಂತ್ರಜ್ಞಾಾನದ ಹಾಲಿನ ಡೈರಿಗೆ ಶಂಕು ಸ್ಥಾಾಪನೆ ಮಾಡಿದ್ದರು. ಕೊಪ್ಪಳ. ರಾಯಚೂರು. ಬಳ್ಳಾಾರಿ ಹಾಗೂ ವಿಜಯನಗರ ಹಾಲು ಉತ್ಪಾಾದಕರ ಸಹಕಾರ ಸಂಘಗಳ ಒಕ್ಕೂಟದಿಂದ ನಿರ್ಮಾಣವಾದ ನಂದಿನಿ ಹಾಲಿನ ಡೈರಿಯೂ 2018 ರಲ್ಲಿ ಹಾಲು ಸಂಗ್ರಹ. ಸಂಸ್ಕರಣೆ ಮಾಡಲಾಗುತ್ತಿಿದೆ. ಶಂಕು ಸ್ಥಾಾಪನೆ ಮಾಡುವ ಸಂದರ್ಭದಲ್ಲಿ ಯಡಿಯೂರಪ್ಪ ರಾಜ್ಯದಲ್ಲಿಯೇ ಈ ಡೈರಿ ವಿಶೇಷವಾಗಿರುತ್ತದೆ. ಇಲ್ಲಿ ಒಮ್ಮೆೆ ಪ್ಯಾಾಕ್ ಮಾಡುವ ಹಾಲು ಆರು ತಿಂಗಳವರೆಗೂ ಬಳಸಬಹುದು. ವಿಶೇಷವಾಗಿ ಇಲ್ಲಿಂದ ಕಾಶ್ಮೀರ ಸೇರಿದಂತೆ ಗಡಿಯಲ್ಲಿ ಸೈನಿಕರಿಗೆ ಈ ಡೈರಿಯಿಂದ ಹಾಲು ಕಳುಹಿಸಲಾಗುವುದು ಎಂದಿದ್ದರು. ಈ ಕಾರಣಕ್ಕಾಾಗಿ ಈ ಭಾಗದ ಹಾಲು ಉತ್ಪಾಾದಕರು ಸಾಕಷ್ಟು ಭರವಸೆ ಇಟ್ಟುಕೊಂಡಿದ್ದರು. ಆದರೆ ಇರುವ ತಂತ್ರಜ್ಞಾಾನ ಬಳಕೆಯಾಗಿಲ್ಲ. ಸೈನಿಕರಿಗೆ ಇಲ್ಲಿಂದ ಹಾಲು ಸರಬರಾಜು ಆಗುತ್ತಿಿಲ್ಲ. ್ಲೇಕ್ಸಿಿ ಪ್ಯಾಾಕ್ ಬೇಡಿಕೆ ಕಡಿಮೆ ಎನ್ನುವ ಕಾರಣಕ್ಕೆೆ ಬುದುಗುಂಪಾ ಡೈರಿ ಸಾಮಾನ್ಯ ಡೈರಿಯಾಗಿದೆ.
ಈಗ ಕೊಪ್ಪಳ. ಬಳ್ಳಾಾರಿ. ರಾಯಚೂರು. ವಿಜಯನಗರ ಹಾಲು ಉತ್ಪಾಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಾಳ ಆಯ್ಕೆೆಯಾಗಿದ್ದಾಾರೆ. ಕೊಪ್ಪಳ ಜಿಲ್ಲೆೆಯವರು ಕೆಎಂಎ್ ಅಧ್ಯಕ್ಷರಾಗಿರುವ ಕಾರಣಕ್ಕೆೆ ಹಿಂದಿನಂತೆ ಬುದುಗುಂಪಾ ಡೈರಿಗೆ ಕಾಯಕಲ್ಪ ಸಿಗುತ್ತಾಾ ಎಂದು ಹಾಲು ಉತ್ಪಾಾದಕರು ಭರವಸೆ ಇಟ್ಟುಕೊಂಡಿದ್ದಾಾರೆ.
ಈ ಕುರಿತು ಪ್ರತಿ ಕ್ರಿಿಯಿಸಿದ ಶಾಸಕ ರಾಘವೇಂದ್ರ ಹಿಟ್ನಾಾಳ ಬಳ್ಳಾಾರಿ ಒಕ್ಕೂಟದಿಂದ ಅನೇಕ ಅಭಿವೃದ್ದಿ ಕಾರ್ಯಗಳನ್ನು ಆರಂಭಿಸಲಾಗಿದೆ. ಅದರಲ್ಲಿ ಬೂದುಗುಂಪಾ ಡೈರಿ ಸಹ ಅಭಿವೃದ್ದಿ ಪಡಿಸಲಾಗುವುದು ಎಂದು ತಿಳಿಸಿದ್ದಾಾರೆ.
ಬೂದುಗುಂಪಾದಲ್ಲಿರುವ ಹಾಲಿನ ಡೈರಿಯಲ್ಲಿ ಈಗ ನಿತ್ಯ 1.50 ಲಕ್ಷ ಹಾಲು ಸಂಸ್ಕರಣೆಗೊಳ್ಳುತ್ತಿಿದೆ. ಇತ್ತೀಚಿಗೆ ಖಾಸಗಿ ಹಾಲಿನ ಕಂಪನಿಗಳು ಪೈಪೋಟಿ ನೀಡುತ್ತಿಿರುವಾಗ ಸರಕಾರದ ಕೆಎಂಎ್ ಹೊಸತಂತ್ರಜ್ಞಾಾನ ಬಳಸಿಕೊಂಡು ಅಧುನಿಕರಣಿಗೊಳಿಸಬೇಕಾಗಿದೆ. ಈ ನಿಟ್ಟಿಿನಲ್ಲಿ ರಾಘವೇಂದ್ರ ಹಿಟ್ನಾಾಳ ಕ್ರಮ ಕೈಗೊಳ್ಳುತ್ತಾಾರಾ ಎಂಬುವುದನ್ನು ಕಾದು ನೋಡಬೇಕು.
ಕೆಎಂಎ್ ಅಧ್ಯಕ್ಷರಾಗಿ ರಾಘವೇಂದ್ರ, ಹಿಟ್ನಾಾಳ : ಬೂದುಗುಂಪಾ ಡೈರಿಗೆ ಸಿಗುವುದೇ ಕಾಯಕಲ್ಪ

