ಸುದ್ದಿಮೂಲ ವಾರ್ತೆ ರಾಯಚೂರು, ಡಿ.29:
ರಾಜ್ಯ ಸರ್ಕಾರದಲ್ಲಿ ವಿವಿಧ ಕ್ಷೇತ್ರಗಳಿಂದ 14 ಜನ ಪರಿಶಿಷ್ಟ ಪಂಗಡದ ಶಾಸಕರಿದ್ದು ಮುಂಬರುವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕನಿಷ್ಠ ಮೂವರಿಗೆ ಸಚಿವ ಸ್ಥಾಾನ ನೀಡಬೇಕು ಎಂದು ಹೈದ್ರಾಾಬಾದ್ ಕರ್ನಾಟಕ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಒತ್ತಾಾಯಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಈ ಹಿಂದೆ ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹಿಂಪಡೆದ ನಂತರ ಪುನಃ ಅವರಿಗೆ ಗೌರವಯುತವಾದ ಸ್ಥಾಾನಮಾನ ನೀಡಿಲ್ಲ ಅಲ್ಲದೆ, ಪರಿಶಿಷ್ಟ ಪಂಗಡ ಇಲಾಖೆಗೆ ಎರಡು ವರ್ಷದಿಂದ ಸಚಿವರೇ ಇಲ್ಲಘಿ. ಹೀಗಾಗಿ, ನಿರೀಕ್ಷಿಿತ ಮಟ್ಟದಲ್ಲಿ ಪ್ರಗತಿ ಸಾಧ್ಯವಾಗಿಲ್ಲಘಿ. ವಿದ್ಯಾಾರ್ಥಿಗಳಿಗೆ ವೇತನ ತಲುಪಿಲ್ಲಘಿ, ವಾಲ್ಮೀಕಿ ಭವನಕ್ಕೆೆ ಅನುದಾನ ಸಿಗುತ್ತಿಿಲ್ಲಘಿ, ಮಂಚ, ಹಾಸಿಗೆ ಸಿಗದೆ ವಸತಿ ನಿಲಯದ ವಿದ್ಯಾಾರ್ಥಿಗಳು ತತ್ತರಿಸುತ್ತಿಿದ್ದಾಾರೆ. ನೇಮಕಾತಿಯೂ ಆಗಿಲ್ಲಘಿ. ರಾಯಚೂರು ಜಿಲ್ಲೆೆಗೆ ಏಕಲವ್ಯ ವಸತಿ ಶಾಲೆ ಮಂಜೂರಾಗಿಲ್ಲಘಿ. ಏಳು ತಾಲೂಕಿನಲ್ಲೂ ಆಶ್ರಮ,ಏಕಲವ್ಯ ಶಾಲೆ ಸ್ಥಾಾಪಿಸಬೇಕು ಇವೆಲ್ಲ ಸಮಸ್ಯೆೆಗಳು ಹಾಗೆಯೇ ಇವೆ ಎಂದು ದೂರಿದರು.
ಅದ್ದರಿಂದ ಕೂಡಲೇ ಮುಂದೆ ನಡೆಯುವ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರಚನೆಯಲ್ಲಿ ಮೀಸಲು ಕ್ಷೇತ್ರದಲ್ಲಿ ಗೆದ್ದಿರುವ ವಾಲ್ಮೀಕಿ ಸಮುದಾಯದ ಇಬ್ಬರು ಶಾಸಕರಿಗೆ ಮತ್ತು ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದಿರುವ ವಾಲ್ಮೀಕಿ ಸಮುದಾಯದ ಹಿರಿಯ ನಾಯಕ ಕೆ.ಎನ್.ರಾಜಣ್ಣ ಅವರಿಗೆ ಸಚಿವ ಸ್ಥಾಾನ ನೀಡಬೇಕೆಂದು ಆಗ್ರಹಿಸಿದರು.
ವಾಲ್ಮೀಕಿ ಸಮುದಾಯವು ರಾಜ್ಯದ ಜನಸಂಖ್ಯೆೆಯಲ್ಲಿ ಮುಂಚೂಣಿಯಲ್ಲಿದ್ದರೂ ನಿರ್ಣಾಯಕ ಹುದ್ದೆಗಳಲ್ಲಿ ಸಮರ್ಪಕ ಪ್ರತಿನಿಧಿತ್ವ ಸಿಗುತ್ತಿಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಲಾಖೆಗೆ ಕೂಡಲೇ ಸಮುದಾಯದ ಮಂತ್ರಿಿಗಳನ್ನು ನೇಮಕ ಮಾಡಿ ಹಿತ ಕಾಪಾಡಲು ಕೋರಿದರು.
ಸುದ್ದಿಗೋಷ್ಠಿಿಯಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಯಕ, ರಾಮುನಾಯಕ, ರಮೇಶ ನಾಯಕ, ನರೇಂದ್ರ ನಾಯಕ, ಮಹೇಶ ನಾಯಕ, ರಾಮುನಾಯಕ ಜಲ್ಲಿ, ಬೋಳಬಂಡಿ ವಡವಟ್ಟಿಿ ಉಪಸ್ಥಿಿತರಿದ್ದರು.

