ಸುದ್ದಿ ಮೂಲ ವಾರ್ತೆ
ನವದೆಹಲಿ ಮಾ.25: ನಾನು ಶಾಶ್ವತವಾಗಿ ಸಂಸತ್ ಸ್ಥಾನದಿಂದ ಹೊರ ಉಳಿದರೂ ಚಿಂತೆ ಇಲ್ಲ. ನಾನು ನನ್ನ ಹೋರಾಟವನ್ನು ಮುಂದುವರೆಸುತ್ತೇನೆ. ರಾಷ್ಟ್ರ ಪರವಾದ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಮೋದಿ ಉಪನಾಮಕ್ಕೆ ಮಾಡಿದ ಅವಮಾನದ ಹಿನ್ನೆಲೆ ರಾಹುಲ್ ಗಾಂಧಿಯನ್ನು 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ವಿಚಾರವಾಗಿ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ಪ್ರಧಾನಿ ಮೋದಿ ಹೆದರಿ ನನ್ನನ್ನು ಅನರ್ಹಗೊಳಿಸಿದ್ದಾರೆ. ಸಂಸದ ಸ್ಥಾನದಿಂದ ಶಾಶ್ವತವಾಗಿ ಹೊರ ಉಳಿದರೂ ದೇಶ ಪರ ಹೋರಾಟವನ್ನು ನಿಲ್ಲಿಸುವುದಿಲ್ಲ, ಸತ್ಯ, ನ್ಯಾಯ, ನಿಷ್ಠೆಯ ಪರ ನನ್ನ ಹೋರಾಟ ಮುಂದುವರೆಯುವುದು ಎಂದು ಹೇಳಿದರು.
ಮೋದಿ ಅವರು ಸತ್ಯವಾಗಿದ್ದರೆ ಅದಾನಿ ಶೆಲ್ ಕಂಪನಿಗೆ 20 ಸಾವಿರ ಕೋಟಿ ರೂ ಹಣ ಹೋಗಿರುವುದು ಹೇಗೆ ಎಂಬ ಸರಳ ಪ್ರಶ್ನೆಗೆ ಹೆದರಿ ನಡೆಸಿದ ಸಂಪೂರ್ಣ ನಾಟಕವಿದು ಎಂದ ರಾಹುಲ್ ಗಾಂಧಿ ಈ ಗುಜರಾತ್ ನ ಸೂರತ್ ಕೋರ್ಟ್ ನೀಡಿರುವ ತೀರ್ಪಿಗೆ ಹೆದರುವುದಿಲ್ಲ ಎಂದು ಹೇಳಿದರು.
ಮೋದಿಗೆ ಕೇಳಿದ ಒಂದು ಪ್ರಶ್ನೆಗೆ ಇನ್ನೂ ಸ್ವಷ್ಟ ಉತ್ತರ ಸಿಕ್ಕಿಲ್ಲ. ಅದಾನಿ ಮತ್ತು ಮೋದಿಯ ನಡುವಿನ ಸಂಬಂಧಕ್ಕೆ ಉತ್ತರ ಸಿಕ್ಕಿಲ್ಲ. ಆದ್ದರಿಂದ ಏನೇ ಆದರೂ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸುದಿಲ್ಲ ಎಂದರು.