ಸುದ್ದಿಮೂಲ ವಾರ್ತೆ ಬೆಂಗಳೂರು, ಜ.14:
ರಾಜ್ಯ ಕಾಂಗ್ರೆೆಸ್ ಸರ್ಕಾರದಲ್ಲಿನ ನಾಯಕತ್ವ ಬದಲಾವಣೆ ಗೊಂದಲಗಳಿಗೆ ಸಂಕ್ರಾಾಂತಿ ನಂತರ ಹೈಕಮಾಂಡ್ ಪರಿಹಾರ ಸೂತ್ರ ಪ್ರಕಟಿಸಲಿದೆ ಎಂದು ಹೇಳಲಾಗುತ್ತಿಿದೆ.
ಮಂಗಳವಾರ ಮೈಸೂರಿಗೆ ಬಂದಿದ್ದ ಕಾಂಗ್ರೆೆಸ್ ನಾಯಕ ರಾಹುಲ್ಗಾಂಧಿ ಅವರು ವಿಮಾನ ನಿಲ್ದಾಾಣದ ರನ್ ವೇ ಮೇಲೆಯೇ ರಾಜ್ಯದ ಮುಖ್ಯಮಂತ್ರಿಿ ಮತ್ತು ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ಇಬ್ಬರೂ ನಾಯಕರೊಂದಿಗೆ ಕೆಲ ನಿಮಿಷಗಳ ಕಾಲ ಪ್ರತ್ಯೇಕವಾಗಿ ಮತ್ತು ರಹಸ್ಯವಾಗಿ ಮಾತನಾಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು ರಾಹುಲ್ಗಾಂಧಿ ಅವರು ಇಬ್ಬರೂ ನಾಯಕರಿಗೆ ಏನು ಸೂಚನೆ ನೀಡಿದ್ದಾರೆ ಎಂಬ ಕುತೂಹಲ ಮನೆಮಾಡಿದೆ.
ಮೂಲಗಳ ಪ್ರಕಾರ ಸಂಕ್ರಾಾಂತಿ ಬಳಿಕ ಸಿಎಂ ಮತ್ತು ಡಿಸಿಎಂ ಅವರನ್ನು ನವದೆಹಲಿಗೆ ರಾಹುಲ್ಗಾಂಧಿ ಆಹ್ವಾಾನಿಸಿದ್ದಾರೆ ಎಂದು ಹೇಳಲಾಗುತ್ತಿಿದೆ. ಇದರ ಬೆನ್ನಲ್ಲಿಯೇ ಬುಧವಾರ ಬೆಂಗಳೂರಿನಲ್ಲಿ ಮಾತನಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ತಾವು ನವದೆಹಲಿಗೆ ಹೋಗುವುದಾಗಿ ಹೇಳಿದ್ದಾರೆ.
’ಸಂಕ್ರಾಾಂತಿ ನಂತರ ನಾವು ತಿಳಿಸಿದಾಗ ದೆಹಲಿಗೆ ಬನ್ನಿಿ ಎಲ್ಲವನ್ನೂ ಕುಳಿತು ಚರ್ಚಿಸಿ ಒಂದು ತೀರ್ಮಾನ ಮಾಡೋಣ’ ಎಂದು ನಿನ್ನೆೆ ಮೈಸೂರಿನಲ್ಲಿ ಕಾಂಗ್ರೆೆಸ್ ಅಧಿನಾಯಕ ರಾಹುಲ್ಗಾಂಧಿ ಅವರು ಮುಖ್ಯಮಂತ್ರಿಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುರ್ಮಾ ಅವರಿಗೆ ಸೂಚಿಸಿದ್ದು, ಅದರಂತೆ ಹೈಕಮಾಂಡ್ ಕರೆದಾಗ ಈ ಇಬ್ಬರೂ ನಾಯಕರು ದೆಹಲಿಗೆ ಹೋಗಲಿದ್ದಾರೆ. ಪಕ್ಷದ ಉನ್ನತ ಮೂಲಗಳ ಪ್ರಕಾರ ಈ ತಿಂಗಳ 28 ರಿಂದ ಸಂಸತ್ ಅಧಿವೇಶನ ಆರಂಭವಾಗುತ್ತಿಿದ್ದು, ಅದಕ್ಕೂ ಮೊದಲೇ ಅಂದರೆ ಮುಂದಿನ ವಾರದ ಹೊತ್ತಿಿಗೆ ಈ ಇಬ್ಬರೂ ನಾಯಕರಿಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಮಾಡಲಿದ್ದು, ಈ ಇಬ್ಬರೂ ನಾಯಕರು ದೆಹಲಿಗೆ ತೆರಳಿ ರಾಹುಲ್ಗಾಂಧಿ ಜತೆ ಅಧಿಕಾರ ಹಂಚಿಕೆಯ ಬಗ್ಗೆೆ ಚರ್ಚಿಸಲಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಜಟಾಪಟಿ ಬೂದಿ ಮುಚ್ಚಿಿದ ಕೆಂಡದಂತಿರುವುದನ್ನು ಅರಿತಿರುವ ವರಿಷ್ಠರು ಸದ್ಯದಲ್ಲೇ ಇದಕ್ಕೆೆ ತೆರೆ ಎಳೆಯಲಿದ್ದು ಹೈಕಮಾಂಡ್ ತೀರ್ಮಾನ ಕುತೂಹಲ ಮೂಡಿಸಿದೆ.
ನಿನ್ನೆೆ ಮೈಸೂರಿನ ವಿಮಾನ ನಿಲ್ದಾಾಣದ ರನ್ವೇನಲ್ಲೇ ರಾಹುಲ್ಗಾಂಧಿ ಅವರನ್ನು ಮುಖ್ಯಮಂತ್ರಿಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಇಬ್ಬರೂ ಅವರ ಜತೆ ಪ್ರತ್ಯೇಕವಾಗಿ ಕೆಲ ನಿಮಿಷಗಳ ಕಾಲ ಮಾತನಾಡಿದ್ದರು. ಆ ಸಂದರ್ಭದಲ್ಲಿ ರಾಹುಲ್ ಈ ಇಬ್ಬರೂ ನಾಯಕರಿಗೆ ದೆಹಲಿಗೆ ಬನ್ನಿಿ ಕುಳಿತು ಮಾತನಾಡೋಣ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳೋೋಣ ಎಂದು ಹೇಳಿದ್ದರು ಎನ್ನಲಾಗಿದ್ದು, ಹಾಗಾಗಿ ಮುಂದಿನ ವಾರದ ಹೊತ್ತಿಿಗೆ ರಾಜ್ಯ ಕಾಂಗ್ರೆೆಸ್ನ ಅಧಿಕಾರ ಹಂಚಿಕೆಯ ಜಟಾಪಟಿಗಳಿಗೆ ಹೈಕಮಾಂಡ್ ಪರಿಹಾರ ಪ್ರಕಟಿಸುವುದು ಬಹುತೇಕ ನಿಶ್ಚಿಿತ.
ಡಿಕೆಶಿ ನಾಳೆ ದೆಹಲಿಗೆ
ಅಸ್ಸಾಾಂ ವಿಧಾನಸಭಾ ಚುನಾವಣೆಯ ಕಾಂಗ್ರೆೆಸ್ ಪಕ್ಷದ ವೀಕ್ಷಕರಾಗಿ ನೇಮಕಗೊಂಡಿರುವ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಅವರು ನಾಳೆ ಸಂಜೆ ದೆಹಲಿಗೆ ತೆರಳುವರು.
ದೆಹಲಿಯಲ್ಲಿ ಈ ತಿಂಗಳ 16ರಂದು ಅಸ್ಸಾಾಂ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯ ಸೂಚಕರು ಹಾಗೂ ಉಸ್ತುವಾರಿಗಳ ಸಭೆಯನ್ನು ರಾಹುಲ್ಗಾಂಧಿ ಕರೆದಿದ್ದು ಈ ಸಭೆಯಲ್ಲಿ ಪಾಲ್ಗೊೊಳ್ಳಲು ಡಿ.ಕೆ. ಶಿವಕುಮಾರ್ ನಾಳೆ ಸಂಜೆ ದೆಹಲಿಗೆ ತೆರಳುವರು. ಈ ಸಭೆಯ ನಂತರ ಡಿ.ಕೆ. ಶಿವಕುಮಾರ್ ರಾಹುಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿಿ ಸಿದ್ದರಾಮಯ್ಯರವರಿಗೆ ದೆಹಲಿಗೆ ಯಾವಾಗ ಬರಬೇಕು ಎಂದು ಹೈಕಮಾಂಡ್ ಇನ್ನೂ ಸ್ಪಷ್ಟ ನಿರ್ಧಾರ ತಿಳಿಸಿಲ್ಲ. ಜನವರಿ 17ರ ಬಳಿಕ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರನ್ನು ವರಿಷ್ಠರು ದೆಹಲಿಗೆ ಬರುವಂತೆ ತಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿಿದೆ.
ಸಂಕ್ರಾಾಂತಿ ನಂತರ ಗೊಂದಲ ಪರಿಹಾರ: ಅಶೋಕ್ ಪಟ್ಟಣ್
ರಾಜ್ಯ ಕಾಂಗ್ರೆೆಸ್ನ ಗೊಂದಲಗಳು ಸಂಕ್ರಾಾಂತಿ ನಂತರ ಪರಿಹಾರವಾಗಲಿದೆ ಎಂದು ವಿಧಾನಸಭೆಯ ಸರ್ಕಾರಿ ಮುಖ್ಯ ಸಚೇತಕ ಅಶೋಕ್ ಪಟ್ಟಣ ಹೇಳಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆೆ ಮೈಸೂರಿನಲ್ಲಿ ಕಾಂಗ್ರೆೆಸ್ ವರಿಷ್ಠರಾದ ರಾಹುಲ್ಗಾಂಧಿ ಅವರು ಮುಖ್ಯಮಂತ್ರಿಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಜತೆ ಮಾತನಾಡಿ, ದೆಹಲಿಗೆ ಬರುವಂತೆ ಸೂಚಿಸಿದ್ದಾರೆ. ಈ ಇಬ್ಬರೂ ನಾಯಕರು ಸಂಕ್ರಾಾಂತಿ ನಂತರ ದೆಹಲಿಗೆ ತೆರಳಲಿದ್ದು, ವರಿಷ್ಠರ ಭೇಟಿ ಚರ್ಚೆಯ ನಂತರ ಎಲ್ಲ ಗೊಂದಲಗಳು ಮುಗಿಯಲಿವೆ ಎಂದು ಅವರು ಹೇಳಿದರು.
ರಾಜ್ಯ ಕಾಂಗ್ರೆೆಸ್ನ ಗೊಂದಲಗಳನ್ನು ಆದಷ್ಟು ಬೇಗ ಪರಿಹರಿಸಬೇಕು ಎಂಬುದು ಎಲ್ಲರ ಒತ್ತಾಾಸೆಯಾಗಿದೆ. ಅದರಂತೆ ರಾಹುಲ್ ಅವರು ಈ ಇಬ್ಬರೂ ನಾಯಕರನ್ನು ದೆಹಲಿಗೆ ಬರುವಂತೆ ಹೇಳಿದ್ದಾರೆ. ಈ ಇಬ್ಬರೂ ನಾಯಕರು ದೆಹಲಿಗೆ ಹೋದ ನಂತರ ಎಲ್ಲವೂ ಬಗೆಹರಿಯಲಿದೆ ಎಂದು ಹೇಳಿದರು.
ನಾವೆಲ್ಲಾ ಪಕ್ಷದ ಶಿಸ್ತಿಿನ ಸಿಪಾಯಿಗಳು. ಹೈಕಮಾಂಡ್ ತೀರ್ಮಾನಕ್ಕೆೆ ಎಲ್ಲರೂ ಬದ್ಧರಾಗಬೇಕಾಗುತ್ತದೆ ಎಂದು ಅವರು ಹೇಳಿದರು. ಸಂಪುಟ ಪುನಾರಚನೆಯಾಗಬೇಕು ಎಂಬ ಬೇಡಿಕೆಯೂ ಇದೆ. ಎಲ್ಲವೂ ಮುಖ್ಯಮಂತ್ರಿಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿದ ನಂತರ ಅಂತಿಮಗೊಳ್ಳಲಿದೆ ಎಂದು ಅವರು ತಿಳಿಸಿದರು.

