ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.19
ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಗೆ ಪರ್ಯಾಯವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವಗ ವಿಬಿ.ಜಿ ರಾಮ್ ಜಿ ಕಾಯ್ದೆೆಯು ಗ್ರಾಾಮ ವಿರೋಧಿ ಎಂದು ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆೆಸ್ ಸರ್ಕಾರ ಜಾರಿಗೆ ತಂದಿದ್ದ 20 ವರ್ಷಗಳ ನರೇಗಾ ಯೋಜನೆಯನ್ನು ಮೋದಿ ಸರ್ಕಾರ ಒಂದೇ ದಿನದಲ್ಲಿ ನಾಶ ಮಾಡಿದೆ ಎಂದು ಅವರು ಕಿಡಿಕಾರಿದ್ದಾರೆ.
ವಿಬಿ ಜಿ ರಾಮ್ ಜಿ ಕಾಯ್ದೆೆಯು ನರೇಗಾ ಕಾಯ್ದೆೆಯ ಪರಿಷ್ಕರಣೆಯಲ್ಲ ಎಂದು ಎಕ್ಸ್ನಲ್ಲಿ ಪೋಸ್ಟ್ನಲ್ಲಿ ರಾಹುಲ್ ಪ್ರತಿಕ್ರಿಿಯಿಸಿದ್ದಾರೆ. ಮೋದಿ ಸರ್ಕಾರವು 20 ವರ್ಷಗಳ ನರೇಗಾ ಯೋಜನೆಯನ್ನು ಒಂದೇ ದಿನದಲ್ಲಿ ನಾಶ ಮಾಡಿದೆ ಎಂದು ದೂರಿದ್ದಾರೆ.

