ಸುದ್ದಿಮೂಲ ವಾರ್ತೆ ನವದೆಹಲಿ, ಅ.02:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಸತ್ತಾಾತ್ಮಕ ಸಂಸ್ಥೆೆಗಳ ಮೇಲೆ ನಡೆಸುತ್ತಿಿರುವ ದಾಳಿ ಭಾರತಕ್ಕೆೆ ದೊಡ್ಡ ಬೆದರಿಕೆಯಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕೊಲಂಬಿಯಾ ರಾಷ್ಟ್ರದ ಇಐಎ ವಿಶ್ವವಿದ್ಯಾಾಲಯದಲ್ಲಿ ವಿದ್ಯಾಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಅನೇಕ ಧರ್ಮ, ಸಂಪ್ರದಾಯ ಮತ್ತು ಭಾಷೆ ಅಳವಡಿಸಿಕೊಂಡಿರುವ ದೇಶ. ಭಾರತದ ಪ್ರಜಾಪ್ರಭುತ್ವ ಎಲ್ಲ ಧರ್ಮ, ಭಾಷೆ ಹಾಗೂ ಸಂಪ್ರದಾಯ ಅನುಸರಿಸಲು ಅವಕಾಶ ಮಾಡಿಕೊಡುತ್ತದೆ. ಆದರೆ ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವ ವ್ಯವಸ್ಥೆೆಯೂ ಎಲ್ಲ ಕಡೆಗಯಿಂದ ದಾಳಿಗೆ ಒಳಗಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಾಗತಿಕ ಅಧಿಕಾರದ ಹೋರಾಟಗಳ ಸಂದರ್ಭದಲ್ಲಿ ಭಾರತದ ಸವಾಲುಗಳನ್ನು ಗಾಂಧೀಜಿಯವರು ರೂಪಿಸಿದರು. ಪ್ರಮುಖ ಇಂಧನ ಪರಿವರ್ತನೆಗಳ ಸಮಯದಲ್ಲಿ ಸಾಮ್ರಾಾಜ್ಯಗಳು ಹೇಗೆ ಅಭಿವೃದ್ಧಿಿಗೊಂಡವು ಹಾಗೂ ಪತನಗೊಂಡವು ಎಂಬುದರ ಇತಿಹಾಸವನ್ನು ಹೇಳುತ್ತಾಾ, ಬ್ರಿಿಟಿಷರ ಕಲ್ಲಿದ್ದಲು ಮತ್ತು ಉಗಿಬಂಡಿಯ ಯುಗ ನಿಯಂತ್ರಿಿಸಿದರು. ಆದರೆ ಅಮೆರಿಕ ತೈಲ ಯುಗ ಮತ್ತು ಆಂತರಿಕ ದಹನಕಾರಿ ಇಂಜಿನ್ ಅನ್ನು ಆರಂಭಿಸಿತು. ಈಗ ವಿದ್ಯುತ್ ಮೋಟಾರ್ಗಳು ಮತ್ತು ಬ್ಯಾಾಟರಿ ತಂತ್ರಜ್ಞಾನ ಕಾಣುತ್ತಿಿದೆ. ಚೀನಾ ಮತ್ತು ಅಮೆರಿಕ ಈ ಪರಿವರ್ತನೆ ನಿಯಂತ್ರಿಿಸಲು ಸ್ಪರ್ಧಿಸುತ್ತಿಿವೆ ಎಂದು ಅವರು ವಿದ್ಯಾಾರ್ಥಿಗಳಿಗೆ ಮಾಹಿತಿ ನೀಡಿದರು.
ಚೀನಾ ಇಲ್ಲಿವರೆಗೆ ಗೆಲ್ಲುತ್ತಿಿದೆ. ಏಕೆಂದರೆ ಸಮುದ್ರ ಮತ್ತು ಭೂ-ಆಧಾರಿತ ಶಕ್ತಿಿಗಳ ನಡುವಿನ ಈ ಘರ್ಷಣೆ ಮಧ್ಯದಲ್ಲಿ ಭಾರತ ಕುಳಿತಿದೆ. ಭಾರತದ ವಿಕೇಂದ್ರಿಿಕೃತ, ವೈವಿಧ್ಯಮಯ ರಚನೆ ಮತ್ತು ಅದರ ಆಳವಾದ ಆದ್ಯಾಾತ್ಮಿಿಕ ಸಂಪ್ರದಾಯಗಳು ಚೀನಾದ ಕೇಂದ್ರೀೀಕೃತ ಮಾದರಿಗೆ ಹೋಲಿಸಿದರೆ ನಮಗೆ ವಿಶಿಷ್ಟ ಶಕ್ತಿಿ ನೀಡುತ್ತವೆ ಎಂದು ಹೇಳಿದರು.
ಚೀನಾ ದೇಶದ ರೀತಿಯಲ್ಲಿ ಭಾರತವು ತನ್ನ ಜನರನ್ನು ನಿಗ್ರಹಿಸಲು ಸಾಧ್ಯವಿಲ್ಲ. ಡೊನಾಲ್ಡ್ ಟ್ರಂಪ್ ಅವರ ಧ್ರುವೀಕರಣದ ರಾಜಕೀಯವು ಅತ್ಯಂತ ದುರ್ಬಲರನ್ನು, ವಿಶೇಷವಾಗಿ ನಿರುದ್ಯೋೋಗಿಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಅವರು ವಾಗ್ದಾಾಳಿ ನಡೆಸಿದರು.
ಬಾಕ್ಸ್
ರಾಹುಲ್ ಹೇಳಿಕೆಗೆ ಸಂಸದೆ ಕಂಗನಾ ವಿರೋಧ
ಬಿಜೆಪಿ ಸಂಸದೆ ಕಂಗನಾ ರನೌಟ್ ಅವರು ರಾಹುಲ್ ವಿದೇಶದಲ್ಲಿ ನೀಡಿರುವ ಹೇಳಿಕೆಯನ್ನು ಖಂಡಿಸಿದ್ದಾರೆ. ಅವರು ವಿದೇಶದ ನೆಲದಲ್ಲಿ ನಿಂತು ಭಾರತವನ್ನು ಪದೇ, ಪದೇ ಅವಮಾನಿಸುತ್ತಿಿದ್ದಾರೆ. ಎಲ್ಲೆಡೆ ಅವರು ದೇಶದ ಗೌರವಕ್ಕೆೆ ಮಸಿ ಬಳಿಯಲು ಯತ್ನಿಿಸುತ್ತಿಿದ್ದಾರೆ. ರಾಹುಲ್ ಗಾಂಧಿ ದೇಶಕ್ಕೆೆ ಯಾವಾಗಲೂ ಅವಮಾನ ಮಾಡುತ್ತಾಾರೆ ಎಂದು ಅವರು ಆಕ್ರೋೋ ಶ ವ್ಯಕ್ತಪಡಿಸಿದ್ದಾರೆ.