ಸುದ್ದಿಮೂಲ ವಾರ್ತೆ ರಾಯಚೂರು, ನ.23:
ರಾಯಚೂರು ಸೇರಿದಂತೆ ಸುತ್ತಲಿನ ಜಿಲ್ಲೆಗಳ ವಿದ್ಯಾಾರ್ಥಿಗಳಿಗೆ ಅನುಕೂಲವಾಗಲು ಜಿಲ್ಲಾಡಳಿತವು ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇವರ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ಉಚಿತ ತರಬೇತಿಯ ತರಗತಿಗಳು ನವೆಂಬರ್ 22 ರಿಂದ ಯಶಸ್ವಿಿಯಾಗಿ ಆರಂಭವಾದವು.
ತರಬೇತಿಯ ಮೊದಲ ದಿನವಾದ ನವೆಂಬರ್ 22ರಂದು ಸಹಾಯಕ ಆಯುಕ್ತರಾದ ಗಜಾನನ ಬಾಳೆ ಅವರು, ತರಬೇತಿಗೆ ಆಯ್ಕೆೆಯಾದ 120 ವಿದ್ಯಾಾರ್ಥಿಗಳೊಂದಿಗೆ ನೇರ ಸಂವಹನ ನಡೆಸಿದರು. ರಾಯಚೂರು ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ವಿದ್ಯಾಾರ್ಥಿಗಳೊಂದಿಗೆ ಅವರು ಮಾತನಾಡಿ, ತರಬೇತಿಯ ಅವಧಿ, ತರಬೇತಿಯ ಪಾಠಗಳು, ತರಬೇತಿಯ ಪ್ರತಿದಿನದ ಸಮಯ ಸೇರಿದಂತೆ ನಾನಾ ವಿಷಯಗಳ ಬಗ್ಗೆೆ ಚರ್ಚಿಸಿದರು.
ತರಬೇತಿಯ ನೋಡಲ್ ಅಧಿಕಾರಿಗಳು ಆಗಿರುವ ತಹಸೀಲ್ದಾಾರರಾದ ಸುರೇಶ ವರ್ಮಾ, ಅಮರೇಶ ಬಿರಾದಾರ, ಜಿಲ್ಲಾ ಅಲ್ಪಸಂಖ್ಯಾಾತರ ಕಲ್ಯಾಾಣಾಧಿಕಾರಿ ಪ್ರವೀಣಕುಮಾರ, ವಿವಿಧ ಸಮಿತಿಯಲ್ಲಿರುವ ಅಧಿಕಾರಿಗಳಾದ ಜಿಲ್ಲಾ ಗ್ರಂಥಾಲಯ ಇಲಾಖೆಯ ಅಧಿಕಾರಿಗಳಾದ ಡಾ.ಕಲಾಲ, ನಿರ್ಮಲಾ ಹೆಚ್ ಹೊಸೂರ, ಯುವಸಬಲೀಕರಣ ಮತ್ತು ಕ್ರೀೆಡಾ ಇಲಾಖೆಯ ಅಧಿಕಾರಿ ಈರೇಶ್ ನಾಯಕ, ಆಹಾರ ಇಲಾಖೆಯ ಅಧಿಕಾರಿ ನಜೀರ್ ಅಹ್ಮದ್, ಹಟ್ಟಿಿ ಚಿನ್ನದ ಗಣಿ ಕಂಪನಿಯ ಉಪ ಪ್ರಧಾನ ವ್ಯವಸ್ಥಾಾಪಕರು ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಕೃಷ್ಣ ಶಾವಂತಗೇರಿ, ಸ್ಥಳೀಯ ಲೆಕ್ಕ ಪರಿಶೋಧನಾ ಇಲಾಖೆಯ ಚಂದಪ್ಪ, ಅರಣ್ಯ ಇಲಾಖೆಯ ಮಹೇಂದ್ರ ಸೇರಿದಂತೆ ಇನ್ನಿಿತರರು ಉಪಸ್ಥಿಿತರಿದ್ದು ತರಗತಿ ಆರಂಭದ ಪ್ರಕ್ರಿಿಯೆಯ ಬಗ್ಗೆೆ ಸಮನ್ವಯ ನಡೆಸಿದರು.
ನವೆಂಬರ್ 22ರಂದು ಬೆಳಿಗ್ಗೆೆ ವಿದ್ಯಾಾರ್ಥಿಗಳೊಂದಿಗೆ ನೇರ ಸಂವಹನದ ನಂತರ ತರಬೇತಿಯು ಆರಂಭವಾಯಿತು. ಮೊದಲ ದಿನ ನವೆಂಬರ್ 22ರಿಂದ ಭಾರತೀಯ ಸಂವಿಧಾನ ವಿಷಯದ ಮೇಲೆ ಸಂಪನ್ಮೂಲ ವ್ಯಕ್ತಿಿಗಳಾದ ಶರಣು ಭಾಗೂರ ಅವರು ತರಗತಿ ಆರಂಭಿಸಿದರು. ನವೆಂಬರ್ 23ರಂದು ಸಹ ಪಾಠಗಳು ನಡೆದವು. ನವೆಂಬರ್ 24 ಮತ್ತು ನವೆಂಬರ 25ರಂದು ಸಹ ಭಾರತೀಯ ಸಂವಿಧಾನದ ವಿಷಯದ ಮೇಲೆ ಪಾಠಗಳು ನಡೆಯಲಿವೆ.
ನವೆಂಬರ್ 26 ರಿಂದ ನಾಲ್ಕು ದಿನಗಳ ಕಾಲ ಸಾಮಾನ್ಯ ವಿಜ್ಞಾನ ವಿಷಯದ ಮೇಲೆ ಸಂಪನ್ಮೂಲ ವ್ಯಕ್ತಿಿಗಳಾದ ನಿರಂಜನ ಮೂರ್ತಿ ಟಿ ಅವರು ಪಾಠ ಮಾಡಲಿದ್ದಾರೆ. ನವೆಂಬರ್ 30 ರಿಂದ ಡಿಸೆಂಬರ್ 3ರವರೆಗೆ ಅರ್ಥಶಾಸ್ತ ವಿಷಯದ ಮೇಲೆ ಸಂಪನ್ಮೂಲ ವ್ಯಕ್ತಿಿಗಳಾದ ಸುನೀಲ್ ರಾಠೋಡ್ ಅವರು ಪಾಠ ಮಾಡಲಿದ್ದಾರೆ. ಡಿಸೆಂಬರ್ 4 ರಿಂದ ಡಿಸೆಂಬರ್ 7ರವರೆಗೆ ಭೂಗೋಳಶಾಸ್ತ ವಿಷಯದ ಮೇಲೆ ಸಂಪನ್ಮೂಲ ವ್ಯಕ್ತಿಿಗಳಾದ ಅನಿಲ್ ಅವರು ಪಾಠ ಮಾಡಲಿದ್ದಾರೆ. ಡಿಸೆಂಬರ್ 8 ರಿಂದ 11ರವರೆಗೆ ಮಾನಸಿಕ ಸಾಮರ್ಥ್ಯ ವಿಷಯದ ಮೇಲೆ ಸಂಪನ್ಮೂಲ ವ್ಯಕ್ತಿಿಗಳಾದ ಗಿರೀಶ್ ಅವರು ಪಾಠ ಮಾಡಲಿದ್ದಾರೆ.
ಜಿಲ್ಲಾಧಿಕಾರಿಗಳ ಮನವಿ: ಪ್ರತಿಭೆಯು ಪ್ರತಿಯೊಬ್ಬರಲ್ಲೂ ಇರುತ್ತದೆ. ಪರಿಸರ ಮತ್ತು ಪ್ರಯತ್ನದಿಂದ ಗುರಿ ಸಾಧನೆ, ಯಶಸ್ಸು ಸಾಧ್ಯವಾಗುತ್ತದೆ. ರಾಯಚೂರು ಜಿಲ್ಲೆ ಸೇರಿದಂತೆ ಕಲ್ಯಾಾಣ ಕರ್ನಾಟಕ ಭಾಗದ ಯಾದಗಿರಿ, ಕಲಬುರಗಿ, ಬೀದರ, ಬಳ್ಳಾಾರಿ, ವಿಜಯನಗರ, ಕೊಪ್ಪಳ ಭಾಗದ ವಿದ್ಯಾಾರ್ಥಿಗಳು ಯಾವುದೇ ಸಾಧನೆಯಲ್ಲಿ ಹಿಂದೆ ಉಳಿದಿಲ್ಲ. ಬಡತನ, ತಿಳುವಳಿಕೆ ಕೊರತೆಯಿಂದ ಹಿಂದೆ ಬೀಳುವ ರಾಯಚೂರು ಸೇರಿದಂತೆ ರಾಜ್ಯದ ಯಾವುದೇ ಭಾಗದ ಆಸಕ್ತ ವಿದ್ಯಾಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಪರಿಸರ ಮೂಡಿಸುವ ನಿಟ್ಟಿಿನಲ್ಲಿ ರಾಯಚೂರು ಜಿಲ್ಲಾಡಳಿತವು ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇವರ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಬಾವಿ ಉಚಿತ ತರಬೇತಿ ಕಾರ್ಯಕ್ರಮ ಆಯೋಜಿಸಿದೆ. ಈ ತರಬೇತಿಗೆ ಆಯ್ಕೆೆಯಾದ ಎಲ್ಲ ವಿದ್ಯಾಾರ್ಥಿಗಳು ತರಬೇತಿ ಪೂರ್ಣವಾಗುವವರೆಗೆ ಸಕ್ರಿಿಯ ಭಾಗಿಯಾಗಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಮನವಿ ಮಾಡಿದ್ದಾರೆ.
ಸಹಾಯಕ ಆಯುಕ್ತರ ಮನವಿ: ರಾಯಚೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆಯೋಜನೆ ಮಾಡಿರುವ ಈ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿಯ ಕಾರ್ಯಕ್ರಮವನ್ನು ರಾಯಚೂರು ಜಿಲ್ಲಾಡಳಿತವು ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇವರ ಸಹಯೋಗದಲ್ಲಿ ಅತ್ಯಂತ ಅಚ್ಚುಕಟ್ಟಾಾಗಿ ಆಯೋಜನೆ ಮಾಡಿದೆ.
ಈ ಕಾರ್ಯಕ್ರಮಕ್ಕಾಾಗಿ ಜಿಲ್ಲಾಧಿಕಾರಿಗಳು ವಿಶೇಷ ಕಾಳಜಿ ವಹಿಸಿ ನಾನಾ ಸಮಿತಿಗಳನ್ನು ರಚಿಸಿ ಹಲವು ದಿನಗಳಿಂದ ಮಾರ್ಗದರ್ಶನ ಮಾಡಿದ್ದಾರೆ. ತಹಸೀಲ್ದಾಾರರು, ಅಲ್ಪಸಂಖ್ಯಾಾತರ ಕಲ್ಯಾಾಣ ಇಲಾಖೆ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀೆಡಾ ಇಲಾಖೆ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಶ್ನೆೆ ಪತ್ರಿಿಕೆ ತಯಾರಿಸುವುದು, ಪಾರದರ್ಶಕವಾಗಿ ಪರೀಕ್ಷೆ ನಡೆಸುವುದು, ತರಬೇತಿಗಳ ಹಾಲ್ ಸಿದ್ಧಪಡಿಸುವುದು ಸೇರಿದಂತೆ ಹತ್ತಾಾರು ಮಹತ್ವದ ಕಾರ್ಯಗಳನ್ನು ತಿಂಗಳುಗಟ್ಟಲೇ ನಿರಂತರ ನಡೆಸಿ ಶ್ರಮಿಸಿದ್ದಾರೆ. ಆಯ್ಕೆೆಯಾದ ವಿದ್ಯಾಾರ್ಥಿಗಳು ತಪ್ಪದೇ ತರಗತಿಗೆ ಹಾಜರಾಗಿ ತರಬೇತಿ ಪಡೆದುಕೊಂಡಲ್ಲಿ ಜಿಲ್ಲಾಡಳಿತದ ಕಾರ್ಯಕ್ಕೆೆ ಅರ್ಥ ಬರಲಿದೆ ಎಂದು ತರಗತಿಗೆ ಹಾಜರಾಗಲು ಅಭ್ಯರ್ಥಿಗಳಲ್ಲಿ ಸಹಾಯಕ ಆಯುಕ್ತರಾದ ಗಜಾನನ ಬಾಳೆ ಅವರು ಮನವಿ ಮಾಡಿದ್ದಾರೆ.
ರಾಯಚೂರು ಜಿಲ್ಲಾಡಳಿತದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿಯ ತರಗತಿಗಳು ಯಶಸ್ವಿಿ ಆರಂಭ

