ಸುದ್ದಿಮೂಲ ವಾರ್ತೆ ರಾಯಚೂರು, ಜ.14:
ಇಲ್ಲಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಾಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ಜನವರಿ 26ರಿಂದ 31ರವರೆಗೆ ರಾಯಚೂರು ಜಿಲ್ಲೆಯ ನಾಗರೀಕರಿಗೆ ಬಾನಂಗಳದಿಂದ ರಾಯಚೂರು ವೀಕ್ಷಣೆಗೆ ರಾಯಚೂರು ಬೈಸ್ಕಯ್ ಎಂಬ ವಿಶೇಷ ಹೆಲಿಕ್ಯಾಾಪ್ಟರ್ ರೈಡ್ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದ ಮಹಾತ್ಮಗಾಂಧೀ ಜಿಲ್ಲಾ ಕ್ರೀೆಡಾಂಗಣದ ಆವರಣದಿಂದ ಹೆಲಿಕ್ಯಾಾಪ್ಟರ್ ರೈಡ್ಗೆ ಅವಕಾಶ ಕಲ್ಪಿಿಸಲಾಗಿದೆ. ಈ ವಿಶೇಷ ಹೆಲಿಕ್ಯಾಾಪ್ಟರ್ ರೈಡ್ ಕಾರ್ಯಕ್ರಮವು ಪ್ರತಿದಿನ ಬೆಳಿಗ್ಗೆೆ 8 ರಿಂದ ಮಧ್ಯಾಾಹ್ನ 12ರವರೆಗೆ ಹಾಗೂ ಮಧ್ಯಾಾಹ್ನ 12.30ರಿಂದ ಸಂಜೆ 4.30ರವರೆಗೆ ನಡೆಯಲಿದ್ದು, ಪ್ರತಿಯೊಬ್ಬರಿಗೆ ಕೇವಲ 3500/- ರೂ.ಗಳನ್ನು ನಿಗದಿ ಮಾಡಲಾಗಿದೆ. 2 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವುದು. ಟಿಕೆಟ್ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ರಾಯಚೂರು ಇವರನ್ನು ಸಂಪರ್ಕ ಮಾಡಬಹುದಾಗಿದೆ ಎಂದು ರಾಯಚೂರು ಉತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.

