ಸುದ್ದಿಮೂಲ ವಾರ್ತೆ
ರಾಯಚೂರು,ಸೆ.17:ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ರಾಯಚೂರು ಜಿಲ್ಲಾ ಮಹಾತ್ಮ ಗಾಂಧಿ ಕ್ರೀಡಾಂಗಣ ದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ರಾಷ್ಟ್ರ ಧ್ವಜಾಚರಣೆ ಮಾಡಿ, ಪೊಲೀಸ್ ತುಕಡಿಯಿಂದ ವಂದನೆ ಸ್ವೀಕರಿಸಿ, ನಿಜಾಮರ ಆಡಳಿತದಿಂದ ಹೈದ್ರಾಬಾದ್ ಕರ್ನಾಟಕ ವಿಮೋಚನೆಗೆ ಆಗೀನಿ ಪ್ರಧಾನಿ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಬಾಯ್ ಪಟೇಲ್ ಕಾರಣ ಎಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ದೇಶಸ್ವಾತಂತ್ರ್ಯ ಗೊಂಡರೂ ಹೈದ್ರಾಬಾದ್ ನ ನಿಜಾಮರ ಆಡಳಿತದಲ್ಲಿದ್ದ ರಾಜ್ಯದ ಹೈದ್ರಾಬಾದ್ ಕರ್ನಾಟಕ ಭಾಗ ನಿಜಾಮರ ವಿರುದ್ದ ನಡೆಸಿದ ಹೋರಾಟ ಮಾಡಿ ಸ್ವತಂತ್ರ ಪಡೆದ ಪರಿಣಾಮ ನಾವು ಸೆ.17 ರಂದು ನಿಜಾಂರಿಂದ ಮುಕ್ತಿ ಪಡೆದೆವು ಎಂದ್ರು. ಈ ಭಾಗದ ಹಿಂದೂಳುವಿಕೆ ಗುರುತಿಸಿ ಅಭಿರುದ್ದಿಗಾಗಿ ಮತ್ತು ಉದ್ಯೋಗ, ಶಿಷ್ಣಣ, ವಿಶೇಷ ಸ್ಥಾನ ನೀಡಬೇಕು ಎಂಬ ಬೇಡಿಕೆ ಹಿನ್ನಲೆಯಾಗಿ ಸಂವಿಧಾನ ತಿದ್ದುಪಡಿ ಕಾಯ್ದೆ 371 ಜೆ ಜಾರಿಯಿಂದ ಕಲ್ಯಾಣ ಕರ್ನಾಟಕ ಭಾಗದ ಜನತೆ ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿ ಪಡೆದು ಜೀವನ ಮಟ್ಟ ಸುಧಾರಣೆಗೆ ಕಾರಣವಾಗಿದೆ. ಎಂದರು.
ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಈ ಪ್ರದೇಶದ ವಿಶೇಷ ಅಭಿವೃದ್ದಿ ರಾಜ್ಯ ಸರ್ಕಾರ ಈ ವರ್ಷ 5000 ಕೋ. ರೂ ಅನುದಾನ ನೀಡುತ್ತಿದೆ. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವ್ತುದ್ದಿ ಮಾಡಗುತ್ತಿದೆ ಎಂದರು.
2013 ರಿಂದ 2018 ವರಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರ ನಡಿಸಿದಾಗ 30 ಸಾವಿರ ಸರ್ಕಾರಿ ಹುದ್ದೆ ನೇಮಕ. ಮಾಡಿತ್ತು ಈಗ ಸಹ ಬರುವ 5 ವರ್ಷ ದಲ್ಲಿ 50 ಸಾವಿರ ಹುದ್ದೆ ನೇಮಕ ಮಾಡ್ಲಾಗುವುದು ಎಂದು ಘೋಷಣೆ ಮಾಡಿದರು.ರಾಯಚೂರು ನಲ್ಲಿ ನೂತನ ರಂಗ್ ಮಂದಿರ, ವಿಮಾನ ನಿಲ್ದಾಣ, ನಿರ್ಮಾಣ ಮಾಡಲಾಗುವುದು ಹಾಗೂ ಈಗಾಗಲೇ ಘೋಷಣೆ ಮಾಡಿದಂತೆ ರಾಯಚೂರು ನಲ್ಲಿ ಏಮ್ಸ್ ಸ್ಥಾಪನೆ ಮಾಡಲು ಕೇಂದ್ರಕ್ಕೆ ನಿಯೋಗ ತೆರಳಿ ಮನವಿ ಮಾಡಿದ್ಫು ಪೂರಕ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಏನ್. ಎಸ್. ಬೋಸರಾಜು, ಶಾಸಕ ಬಸನಗೌಡ ದಡ್ಡಲ್, ಜಿಲ್ಲಾಧಿಕಾರಿ ರಾಹುಲ್ ಪಡವೆ, ಮತ್ತಿತರರು ಇದ್ದರು.