ಸುದ್ದಿಮೂಲ ವಾರ್ತೆ ರಾಯಚೂರು, ಜ.08:
ಎಡೆದೊರೆ ನಾಡು ರಾಯಚೂರು ಉತ್ಸವ ಹಿನ್ನೆೆಲೆಯಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀೆಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಚಾಲನೆ ನೀಡಿದರು.
ಗುರುವಾರ ಬೆಳಿಗ್ಗೆೆ ಮಹಾತ್ಮಗಾಂಧಿ ಜಿಲ್ಲಾಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಹಯೋಗದಲ್ಲಿ ಪುರುಷರಿಗೆ ಪುಟ್ಬಾಾಲ್, ವಾಲಿಬಾಲ್, ಕಬಡ್ಡಿಿ, ಕ್ರಿಿಕೆಟ್, ಬಾಸ್ಕೆೆಟ್ಬಾಲ್ ಇತರೆ ಗುಂಪು ಕ್ರೀಡೆಗಳು ಹಾಗೂ ವೈಯಕ್ತಿಿಕ ಕ್ರೀಡೆಗಳಾದ ಚೆಸ್, ಓಟ, ಈಜು, ಗುಂಡು ಎಸೆತ ಸೇರಿದಂತೆ ಇತರ ಕ್ರೀೆಡೆಗಳು ಹಾಗೂ ಮಹಿಳೆಯರಿಗೆ ಕಬಡ್ಡಿಿ, ಬಾಲ್ ಬ್ಯಾಾಡ್ಮಿಿಂಟನ್ ಇತರೆ ಗುಂಪು ಕ್ರೀೆಡೆಗಳ ಜೊತೆಗೆ ವೈಯಕ್ತಿಿಕ ಕ್ರೀೆಡೆಗಳಾದ ಚೆಸ್ ರನ್ನಿಿಂಗ್, ಈಜು, ಗುಂಡು ಎಸೆತ ಸೇರಿದಂತೆ ಇತರೆ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಿಂದ ಒಟ್ಟು 1266 ನೌಕರರು ಕ್ರೀೆಡಾಕೂಟಕ್ಕೆೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ್ ನಾಯಕ ತಿಳಿಸಿದರು.
ಕ್ರೀಡಾಪಟುಗಳಿಗೆ ಪ್ರತಿಜ್ಞೆ ಬೋಧಿಸಲಾಯಿತು. ಅಲ್ಲದೆ ಮಹಿಳಾ ಕ್ರೀೆಡಾಪಟುಗಳಿಂದ ಕ್ರೀೆಡಾಜ್ಯೋೋತಿ ಸ್ವೀಕರಿಸಲಾಯಿತು.
ನಂತರ ವಿವಿಧ ಕ್ರೀಡಾಕೂಟಗಳಲ್ಲಿ ವಿವಿಧ ನೌಕರರು ಪಾಲ್ಗೊೊಂಡರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರಾ, ರಾಜ್ಯ ಕಾರ್ಯದರ್ಶಿ ಡಾ.ಶಂಕರಗೌಡ ಎಸ್.ಪಾಟೀಲ್, ಪಾಲಿಕೆಯ ಉಪ ಆಯುಕ್ತರಾದ ಸಂತೋಷರಾಣಿ, ನೌಕರರ ಸಂಘದ ಹಾಜಿಬಾಬು, ದೊಡ್ಡ ನಿಂಗಪ್ಪ, ಭೀಮರಾಜ ಹವಾಲ್ದಾಾರ, ಹನುಮಂತ್ರಾಾಯ, ಆರ್ೀಮಿಯಾ, ಸುರೇಶ ಕುರ್ಡಿ, ಪಂಪಾಪತಿ ಹೂಗಾರ, ಭೀಮೇಶ ನಾಯಕ ಸೇರಿದಂತೆ ಇತರಿದ್ದರು.
ರಾಯಚೂರು ಜಿಲ್ಲಾ ಉತ್ಸವ ವಿಶೇಷ ಕಾರ್ಯಕ್ರಮ ನೌಕರರ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗೆ ಎಡಿಸಿ ಶಿವಾನಂದ ಚಾಲನೆ

