ನಗರದಲ್ಲಿ ನಾಳೆ ಮತ್ತು ನಾಡಿದ್ದು ಎರಡು ದಿನ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮಹಾನಗರ ಪಾಲಿಕೆ ಕಾರ್ಯ ಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾಾರೆ.
ನಗರದ ಮಾವಿನ ಕೆರೆಯ ಹತ್ತಿಿರ ಹಾದು ಹೋಗಿರುವ 450 ಎಮ್ ಎಮ್ ವ್ಯಾಾಸದ ಡಿ.ಐ.ಪೈಪ್ ಲೈನ್ ಬದಲಾವಣೆ ಕಾಮಗಾರಿಯನ್ನು ಕೈಗೆತ್ತಿಿಕೊಳ್ಳುತ್ತಿಿರುವ ಪ್ರಯುಕ್ತ ರಾಂಪೂರು ಜಲಾಶಯ ಅವಲಂಬಿತ ಪ್ರದೇಶದ ಬಡಾವಣೆಗಳಾದ ವಾರ್ಡ್ ನಂ.04 ರಿಂದ 14 ವರೆಗಿನ ಬಡಾವಣೆಗಳಿಗೆ ದಿನಾಂಕ :17-10-2025 ಮತ್ತು 18-10-2025 ರಂದು ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಆದುದರಿಂದ ನಗರದ ಸಾರ್ವಜನಿಕರು ಕುಡಿಯುವ ನೀರನ್ನು ಮಿತವಾಗಿ ಬಳಸಿ ಹಾಗೂ ಕುಡಿಯುವ ನೀರನ್ನು ಕುದಿಸಿ ಆರಿಸಿ ಸೋಸಿ ಕುಡಿಯಲು ಮತ್ತು ಮಹಾನಗರಪಾಲಿಕೆಯೊಂದಿಗೆ ಸಹಕರಿಸಲು ಅವರು ಕೋರಿದ್ದಾಾರೆ