ಸುದ್ದಿಮೂಲ ವಾರ್ತೆ ರಾಯಚೂರು, ನ.30:
ರಾಯಚೂರಿನ ಸಾವಿತ್ರಿಿ ಕಾಲೋನಿಯ ಶ್ರೀ ಜೋಡು ವೀರಾಂಜನೇಯ ದೇವಸ್ಥಾಾನದ 33ನೆಯ ವಾರ್ಷಿಕೋತ್ಸವದ ನಿಮಿತ್ಯ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ರಥೋತ್ಸವದ ಅಂಗವಾಗಿ ಬೆಳಿಗ್ಗೆೆ ವಿಶೇಷ ಅಭಿಷೇಕ, ಅರ್ಚನೆ, ಅಲಂಕಾರ, ಪಂಚಾಮೃತ, ಅಲಂಕಾರ, ಮನ್ಯು ಸೂಕ್ತ ಹಾಗೂ ಪವಮಾನ ಹೋಮ ಪೂರ್ಣಾಹುತಿ, ತೊಟ್ಟಿಿಲು ಸೇವೆ, ತೀರ್ಥಪ್ರಸಾದ ವಿನಿಯೋಗ, ಪ್ರವಚನ ಇನ್ನಿಿತರ ಕಾರ್ಯಕ್ರಮಗಳು ಜರುಗಿದವು.
ಉಡುಪಿ ಲಿಮಾರು ಮಠಾಧೀಶರಾದ ಶ್ರೀ ವಿದ್ಯಾಾಧೀಶ ತೀರ್ಥರು ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಿ ಮಹಾ ರಥೋತ್ಸವಕ್ಕೆೆ ಚಾಲನೆ ನೀಡಿದರು. ನಂತರ ನೆರೆದಿದ್ದ ಅಪಾರ ಸಂಖ್ಯೆೆಯ ಭಕ್ತ ವೃಂದವನ್ನುದ್ದೇಶಿಸಿ ಆಶೀರ್ವಚನ ನೀಡಿ ಹನುಮಂತ ದೇವರ ವೈಶಿಷ್ಟ್ಯತೆ,ಮಹಿಮೆ ಅಗಣಿತ ಹಾಗೂ ಅಪಾರ. ಹನುಮನ ನಂಬಿದ ಭಕ್ತರಿಗೆ ಕಷ್ಟ ಎಂದೂ ಎದುರಾಗದು ಎಂದರು.
ರಥೋತ್ಸವದಲ್ಲಿ ಸಚಿವ ಎನ್ ಎಸ್ ಬೋಸರಾಜ್, ಸಮಿತಿ ಕಾರ್ಯಾಧ್ಯಕ್ಷ ವೇಣುಗೋಪಾಲ ಇನಾಮದಾರ, ಉಪಾಧ್ಯಕ್ಷ ನರಸಿಂಗರಾವ್ ದೇಶಪಾಂಡೆ, ಕಾರ್ಯದರ್ಶಿ ವೆಂಕಟೇಶ ನವಲಿ,ಖಜಾಂಚಿ ಅಶೋಕ ನಾಯಕ, ಸದಸ್ಯರಾದ ಗುರುರಾಜ ಕುಲಕರ್ಣಿ, ಈರಣ್ಣ, ವಿಷ್ಣುತೀರ್ಥ ಸಿರವಾರ, ಪಾಂಡುರಂಗರಾವ್, ಶ್ರೀನಿವಾಸ ಶೆಟ್ಟಿಿ,ಮದನಮೋಹನ, ಆನಂದತೀರ್ಥ ಕೊಲ್ಹಾಾಪುರ, ಕಿರಣಕುಮಾರ, ಸಿದ್ದೇಶ, ಪ್ರಹ್ಲಾಾದ ಕುಲಕರ್ಣಿ, ಅರ್ಚಕರಾದ ಸುಶೀಲೇಂದ್ರ ಆಚಾರ ಇನಾಮದಾರ, ಗೋಪಾಲ ಪುರೋಹಿತ, ಉದ್ಯಮಿ ಸಾವಿತ್ರಿಿ ಪುರುಷೋತ್ತಮ, ಶಶಿಭೂಷಣ ಸೇರಿದಂತೆ ಅನೇಕ ಭಕ್ತಾಾದಿಗಳು ಉಪಸ್ಥಿಿತರಿದ್ದರು.
ರಾಯಚೂರು : ಜೋಡು ವೀರಾಂಜನೇಯ ಸ್ವಾಮಿ ರಥೋತ್ಸವ

