ಸುದ್ದಿಮೂಲ ವಾರ್ತೆ,
ರಾಯಚೂರು : ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿಜೆಪಿ ಭೋವಿ ಸಮುದಾಯದ ಮುಖಂಡರ ಸಭೆಯಿಂದು ಜರುಗಿತು.
ಸಮುದಾಯದ ಮತದಾರರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಬಲಿಸಿ , ಆರ್ಶೀವದಿಸಬೇಕೆಂದು ತಿಪ್ಪರಾಜು ಹವಲ್ದಾರ್ ಕೋರಿದರು. ಮತದಾರರು ಬೆಂಬಲಿಸಿದರೆ ಸದಾ ಸಮುದಾಯದ ಹಿತಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುವೆ ಎಂದು ತಿಳಿಸಿದರು.
ಈ ಸಮುದಾಯದ ಮುಖಂಡರು ಮಾತನಾಡಿ ಸಮಾಜವು ಗ್ರಾಮಾಂತರದಲ್ಲಿ ತಿಪ್ಪರಾಜು ಹವಲ್ದಾರ್ ಅವರನ್ನು ಕೈ ಬಿಡುವುದಿಲ್ಲವೆಂದು ವಾಗ್ದಾನ ನೀಡಿದರು.ಈ ಸಭೆಗೆ ಭೋವಿ ಸಮುದಾಯದ 500 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತಾಲ್ಲೂಕು ಬೋವಿ ಸಮಾಜದ ಅಧ್ಯಕ್ಷರಾದ ರಾಮಚಂದ್ರ ಅಲ್ಕೂರು, ಚಂದ್ರು ಬುಳ್ಳಾಪುರ, ತಿಮ್ಮಪ್ಪ ಆರೋಲಿ, ಸೇರಿದಂತೆ ಸಮಾಜ ಮುಖಂಡರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.