ಸುದ್ದಿಮೂಲ ವಾರ್ತೆ,
ರಾಯಚೂರು ಏ ೧೦ : ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೆಂಬಲಿತ ವೀರಶೈವ ಲಿಂಗಾಯತ ಸಮುದಾಯದ ಮುಖಂಡೆ ಸಭೆಯಿಂದು ನಗರದ ರಾಯಲ್ ಹೋಟಲ್ ನಲ್ಲಿ ಜರುಗಿತು.
ಗ್ರಾಮಾಂತರ 1500 ಕ್ಕೂ ಹೆಚ್ಚು ಲಿಂಗಾಯತ ಸಮುದಾಯದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ನರೇಂದ್ರ ಮೋದಿ ನೇತೃತ್ವದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ನಿಕಟಪೂರ್ವ ಮುಖ್ಯಮಂತ್ರಿಗಳಾದ ಯಡಿಯೂರಪ್ಪರವರ ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದು ಈ ಹಿನ್ನೆಲೆಯಲ್ಲು ಸಮಾಜವು ಈ ಚುನಾವಣೆಯಲ್ಲು ತಿಪ್ಪರಾಜು ಹವಲ್ದಾರ್ ಅವರನ್ನು ಬೆಂಬಲಿಸದೆ ಎಂದು ಸಮಾಜದ ಮುಖಂಡರುಗಳು ಸಭೆಯಲ್ಲಿ ತಿಳಿಸಿದರು.
ಈ ವೇಳೆ ಸಮಾಜದ ಹಿರಿಯರು ತಿಪ್ಪರಾಜು ಹವಲ್ದಾರ್ ಅವರಿಗೆ ಸನ್ಮಾನಿಸಿ ಬಸವೇಶ್ವರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದರು. ಈ ವೇಳೆ ಮಾತನಾಡಿದ ತಿಪ್ಪರಾಜು ಸಮಾಜವು ಶಕ್ತಿ ಅಪಾರವಾಗಿದ್ದು , ಲಿಂಗಾಯತ ಸಮುದಾಯವು ಯಾರ ಬೆನ್ನಿಗೆ ನಿಲ್ಲುತ್ತೋ ಅವರೆಂದು ಸೋತ ಉದಾಹರಣೆಯೇ ಇಲ್ಲ . ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮಾಜದ ಬೆಂಬಲವು ಸದಾ ನನ್ನ ಮೇಲಿರಲಿ ಅಲ್ಲದೇ ಸಮಾಜದ ಆಶಯಕ್ಕೆ ಸದಾಬದ್ಧನಾಗಿದ್ದು ಯಾವುದೇ ಕುಂದುಕೊರತೆಗಳು ಆಗದಂತೆ, ಚ್ಯುತಿ ಬಾರದಂತೆ ಇರುವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಎನ್.ಶಂಕ್ರಪ್ಪ , ಬಿಜೆಪಿ ಮಂಡಲ ಅಧ್ಯಕ್ಷರಾದ ಶಂಕರಗೌಡ ಮಿರ್ಜಾಪುರ , ಎಪಿಎಂಸಿ ಅಧ್ಯಕ್ಷರಾದ ಅಚ್ಯುತ್ ರೆಡ್ಡಿ, ಡಾ.ಅಮರಜಿತ್ ಪಾಟೀಲ್ , ಬಸವನಗೌಡ ಮಟಮಾರಿ, ಸುಲೋಚನಮ್ಮ ಆಲ್ಕೂರು, ಮಲ್ಲಿಕಾರ್ಜುನ ಉಡಮಗಲ್ , ಸಿದ್ಧನಗೌಡ ನೆಲಹಾಳ್ , ಜಗದೀಶ್ ವಕೀಲರು, ವೀರಯ್ಯ ಸ್ವಾಮಿ ಆಶಾಪೂರ , ಸುರೇಶ್ ಪಲ್ಕಂದೊಡ್ಡಿ, ರಂಗಪ್ಪಗೌಡ ಹಂಚಿನಾಳ್ , ವೆಂಕಟೇಶಗೌಡ ನಾಗಲಾಪುರ , ಶಂಕರಗೌಡ ಆಲ್ಕೂರು, ಶೇಖರಗೌಡ ಐಜಾಪುರ , ಶಿವಯ್ಯಸ್ವಾಮಿ ಬಿಚ್ಚಾಲಿ ಸೇರಿದಂತೆ ವೀರಶೈವ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.