ಸುದ್ದಿಮೂಲ ವಾರ್ತೆ ರಾಯಚೂರು, ೆ.03:
ಸರ್ಕಾರಿ ಹುದ್ದೆೆಗಳ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಒಳ ಮೀಸಲಾತಿಯ ಅನ್ವಯಿಸದ 2024ರ ಅಕ್ಟೋೋಬರ್ 28ರ ನಂತರದ ನೇಮಕಾತಿ ಆದೇಶ ರದ್ದುಗೊಳಿಸಲು ಸಚಿವ ಸಂಪುಟ ನಿರ್ಧರಿಸಿ ಆದೇಶ ಮಾಡಿದರೂ ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯ ಸಹಾಯಕ ಪ್ರಾಾಧ್ಯಾಾಪಕರ ನೇಮಕಾತಿ ಆರಂಭಿಸಿದ್ದನ್ನು ತಕ್ಷಣ ರದ್ದು ಪಡಿಸದೆ ಹೋದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ನಾಯಕ ಒಕ್ಕೂಟದ ಜಿಲ್ಲಾಾಧ್ಯಕ್ಷ ಡಾ.ರವಿಕುಮಾರ ಎಚ್ಚರಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿ ಸಚಿವ ಸಂಪುಟದ ತೀರ್ಮಾನದಂತೆ ಇಲಾಖೆ, ಮಂಡಳಿ, ಸ್ವಾಾಯತ್ತ ಸಂಸ್ಥೆೆಗಳ ಹುದ್ದೆೆಗಳಿಗೆ ನೇರ ನೇಮಕಾತಿ ಅಧಿಸೂಚನೆ ತಿದ್ದುಪಡಿ ಸೂಚನೆಗಳನ್ನು ರದ್ದುಪಡಿಸಿ 2025ರ ಸೆಪ್ಟೆೆಂಬರ್ 4ರಂದು ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಆದರೆ, ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯದಲ್ಲಿ ಸಂವಿಧಾನದ 371(ಜೆ) ಹಾಗೂ ಉಳಿಕೆಯ ವೃಂದದಲ್ಲಿ ಸಹಾಯಕ ಪ್ರಾಾಧ್ಯಾಾಪಕ ಹುದ್ದೆೆಗಳ ನೇಮಕಾತಿಗೆ 2024ರ ಜುಲೈನಲ್ಲಿ ಅಧಿಸೂಚನೆ ಮಾಡಿದೆ. ಕುಲಪತಿಗಳು ನೇರ ನೇಮಕಾತಿಗೆ ಒಳ ಮೀಸಲು ಸ್ಪಷ್ಟನೆ ಕೇಳದೆ ನೇಮಕಾತಿಗೆ ಅವಕಾಶ ನೀಡಲು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು ತಪ್ಪುು ಮಾಹಿತಿ ನೀಡಿದ್ದಾಾರೆ ಹೀಗಾಗಿ ಅವರು ಅವಕಾಶ ಕೊಟ್ಟಿಿದ್ದಾಾರೆ ಎಂದು ದೂರಿದರು.
ನಿಯಮ ಉಲ್ಲಂಘಿಸಿ ನೇಮಕಾತಿ ಮಾಡುತ್ತಿಿರುವುದರ ಹಿಂದೆ ಷಡ್ಯಂತರ, ಅವ್ಯವಹಾರದ ಅನುಮಾನ ವ್ಯಕ್ತಪಡಿಸಿದ ಅವರು, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಅನ್ಯಾಾಯವಾಗುವ ಆತಂಕ ವ್ಯಕ್ತಪಡಿಸಿ ಕೂಡಲೆ ನೇಮಕ ಪ್ರಕ್ರಿಿಯೆ ತಡೆಯಲು ರಾಜ್ಯಪಾಲರಿಗೆ, ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ. ತಡೆಯಲು ಮುಂದಾಗದೆ ಹೋದರೆ ಸರ್ಕಾರ ಮತ್ತು ವಿಶ್ವ ವಿದ್ಯಾಾಲಯದ ವಿರುದ್ಧ ಕಾನೂನು ಮೊರೆ ಹೋಗುತ್ತೇವೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ಬಸವರಾಜ, ಅಂಜಿಬಾಬು, ಪ್ರಭಾಕರ, ಶರಣು ನಾಯಕ, ಮಂಜುನಾಥ, ವಿಕಾಸ, ಜಾನ್ಸನ್ ಇದ್ದರು.

