ಸುದ್ದಿಮೂಲ ವಾರ್ತೆ ರಾಯಚೂರು, ಜ.06:
ರಾಯಚೂರು ಜಿಲ್ಲೆಯಲ್ಲಿ ಜನವರಿ-2026ರ ಮಾಹೆಯಲ್ಲಿ ಜರಗುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026 ಕಾರ್ಯಕ್ರಮದಲ್ಲಿ ವಿವಿಧ ಕ್ರೀೆಡೆಗಳನ್ನು ಆಯೋಜಿಸಲಾಗಿದೆ. ಜನವರಿ 26ರವರೆಗೆ ಜಿಲ್ಲಾ ಕ್ರೀೆಡಾಂಗಣದಲ್ಲಿ ಪ್ರತಿ ದಿನ ಬೆಳಗ್ಗೆೆ 9 ಗಂಟೆಗೆ ಅಂತರ ಇಲಾಖೆಗಳ ಕ್ರಿಿಕೆಟ್ ಕ್ರೀೆಡಾ ಕೂಟವು ಸರ್ಕಾರಿ ಇಲಾಖೆಗಳಿಂದ ನಡೆಯುತ್ತಿಿದೆ. ಈ ಪಂದ್ಯದಲ್ಲಿ ಭಾಗವಹಿಸಲು ಇಚ್ಚಿಿಸುವವರು ಪಂದ್ಯದ ನೋಡಲ್ ಅಧಿಕಾರಿ ಕ್ರೀೆಡಾ ಇಲಾಖೆಯ ಸೂಪರಿಡೆಂಟ್ ಸಂತೋಷ ಕರ್ಮೂಡಿ ಮೊ.6362238100 ಇವರಿಗೆ ಸಂಪರ್ಕಿಸಿ ಹೆಸರು ನೋಂದಾಯಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

