ಸುದ್ದಿಮೂಲ ವಾರ್ತೆ ರಾಯಚೂರು, ಜ.22:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಾಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ಜನವರಿ 28ರ ಸಂಜೆ 4 ಗಂಟೆಯಿಂದ 6 ಗಂಟೆವರೆಗೆ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಿಸ್ಟರ್ ಕಲ್ಯಾಾಣ ಕರ್ನಾಟಕ-2026ರ ಪುರುಷರ ದೇಹದಾರ್ಢ್ಯ ಬಾಡಿ ಬಿಲ್ಡಿಿಂಗ್ ಸ್ಪರ್ಧೆ ಹಮ್ಮಿಿಕೊಳ್ಳಲಾಗಿದ್ದು, ಆಸಕ್ತ ಬಾಡಿ ಬಿಲ್ಡರ್ಗಳು ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸುವಂತೆ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

