ಸುದ್ದಿಮೂಲ ವಾರ್ತೆ ರಾಯಚೂರು, ಜ.10:
ರಾಯಚೂರು ಉತ್ಸವ ಆಚರಣೆ ಅಂಗವಾಗಿ ಎಲ್ಲಾ ತಾಲೂಕುಗಳಲ್ಲಿ ಜನವರಿ 21ರಂದು ಮ್ಯಾಾರಾಥಾನ್ ಓಟ ಹಾಗೂ ಜನವರಿ 25ರಂದು ಸೈಕ್ಲಿಿಂಗ್ ಅನ್ನು ಸರಕಾರಿ ನೌಕರರಿಗೆ ಮತ್ತು ಸಾರ್ವಜನಿಕರಿಗೆ ಆಯೋಜಿಸುವಂತೆ ಸಂಬಂಧಿಸಿದ ತಹಶೀಲ್ದಾಾರರಿಗೆ ರಾಯಚೂರು ಉತ್ಸವ ಆಚರಣಾ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲೆಯ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಸೂಚಿಸಿದ್ದಾರೆ.

