ಸುದ್ದಿಮೂಲವಾರ್ತೆ
ಕೊಪ್ಪಳ, ಸೆ.04: ಇಲ್ಲಿಯವರೆಗೂ ಮಳೆ ಇಲ್ಲದೆ ಬರ ಏದುರಿಸಿದ್ದ ಕೊಪ್ಪಳ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ ಸುರಿದ ಮಳೆ ಅಲ್ಲಲ್ಲಿ ಅವಾಂತರ ಸೃಷ್ಢಿಸಿದೆ. ಇನ್ನೊಂದು ಕಡೆ ಸುಂದರವಾದ ಜಲಪಾತ ಧುಮ್ಮಿಕ್ಕುತ್ತಿದೆ.
ಕೊಪ್ಪಳ ಭಾರೀ ಮಳೆಗೆ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ.ಯಲಬುರ್ಗಾ ತಾಲೂಕಿನ ಸಂಕನೂರ ಗ್ರಾಮದ ಹಳ್ಳದಲ್ಲಿಯ ಸೇತುವೆ ಕೊಚ್ಚಿ ಹೋಗಿದೆ.ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಗೆ ಕೊಚ್ಚಿ ಹೋಗಿದೆ.ಕಳೆದ ವರ್ಷ ಇದೇ ಹಳ್ಳದಲ್ಲಿ ದಾಟುವಾಗ ನಾಲ್ವರು ಕೊಚ್ಚಿ ಹೋಗಿ ಸಾವನ್ನಪ್ಪಿದ್ದರು. ಬಳಿಕ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲಾಗುತ್ತಿತ್ತು.. ಈ ಹಿನ್ನಲೆಯಲ್ಲಿ ವಾಹನ ಸವಾರರಿಗಾಗಿ ತಾತ್ಕಾಲಿಕವಾಗಿ ಸೇತುವೆ ನಿರ್ಮಾಣ ಮಾಡಲಾಗಿತ್ತು.ನಿನ್ನೆ ತಡರಾತ್ರಿ ಸುರಿದ ಮಳೆಗೆ ತಾತ್ಕಾಲಿಕ ಸೇತುವೆ ಕೊಚ್ಚಿಕೊಂಡು ಹೋಗಿದೆ.ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿದೆ.
ಮಳೆಗೆ ಬೆಳೆಗಳು ಜಲಾವೃತ
ಇದೇ ವೇಳೆ ಮೈ ತುಂಬಿಕೊಂಡು ಬೆಳೆದ ಬೆಳೆಗಳೆಲ್ಲ ವರುಣನ ಅವಕೃಪೆಗೆ ಒಳಗಾಗಿ ಜಲಾವೃತವಾಗಿವೆ. ಕೊಪ್ಪಳ ಜಿಲ್ಲೆಯ ಕೂಕನೂರು ತಾಲೂಕಿನ ಬೆಣಕಲ್ ಗ್ರಾಮದ ಹಿರೇಹಳ್ಳ ತುಂಬಿ ಹರಿಯುತ್ತಿದ್ದು, ರೈತರ ಹೊಲಗಳಿಗೆ ನೀರು ನುಗ್ಗಿದೆ.
ಮೆಕ್ಕೆಜೋಳ, ಉಳ್ಳಾಗಡ್ಡಿ, ಹೆಸರು ಸೇರಿದಂತೆ ನಾನಾ ಬೆಳೆ ಬೆಳೆದಿದ್ದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.
ಈ ಬಾರಿ ಸಮರ್ಪಕ ಮಳೆಯಾಗಿಲ್ಲ ಎಂದು ಅನ್ನದಾತರು ಕೊರಗುವ ಮಧ್ಯೆಯೇ ಭಾನುವಾರ ಧಾರವಾಡ, ಗದಗ ಜಿಲ್ಲೆಯಲ್ಲಿ ದುಪ್ಪೆಂದು ಸುರಿದ ಮಳೆಯಿಂದ ಹಿರೇಹಳ್ಳ ತುಂಬಿ ಹರಿಯುತ್ತಿದೆ.ಇದರಿಂದ ರೈತರ ಹೊಲಗಳಿಗೆ ನೀರು ನುಗ್ಗಿದೆ.
ಭಾರಿ ಮಳೆ ಹಿನ್ಜೆಲೆ ಮನೆಗಳಿಗೆ ಮಳೆ ನೀರು ನುಗ್ಗಿದೆ.ಸಂಜೆ ಸುರಿದ ಭಾರಿಯು ಹನುಮನಾಳ ಹಾಗು ಹನುಮಸಾಗರದಲ್ಲಿ ದಾಖಲೆಯಾಗಿದೆ.
ಕುಷ್ಟಗಿ ತಾಲೂಕಿನ ಗ್ರಾಮಗಳು ಹನುಮನಾಳದಲ್ಲಿ ಮನೆಯೊಳಗೆ ನೀರು ನುಗ್ಗಿದೆ. ಇದರಿಂದ ಮಹಿಳೆಯರು ಮಕ್ಕಳನ್ನು ಹೊತ್ತುಕೊಂಡುಹೊರಬಂದಿದ್ದರು.ರಾತ್ರಿಯಿಡೀ ನೀರು ಹೊರಹಾಕಲು ಪರದಾಟ ತಡವಾಗಿ ಬಂದ ಬಂದ ಅನಾಹುತ ಸೃಷ್ಠಿಸುತ್ತಿದೆ.
ಉತ್ತಮ ಮಳೆಯಾದ ಹಿನ್ನೆಲೆ ಮೈ ದುಂಬಿ ಧುಮ್ಮುಕ್ಕುತ್ತಿರುವ ಕಬ್ಬರಗಿ ಜಲಪಾತ ಕಬ್ಬರಗಿಯ ಕಪಿಲೆಪ್ಪ ಜಲಪಾತದಲ್ಲಿ ಜಲರಾಶಿ ಕಲ್ಯಾಣ ಕರ್ನಾಟಕ ಭಾಗದ ಏಕೈಕ ಜಲಪಾತ ಎಂಬ ಖ್ಯಾತಿಯ ಕಪಿಲೆಪ್ಪ ಜಲಪಾತ ನಿನ್ನೆ ಸಂಜೆ ಭಾರಿ ಮಳೆಯಾದ ಹಿನ್ನಲೆಯಲ್ಲಿ ಸುಮಾರು 40 ಅಡಿಯಿಂದ ಧುಮ್ಮುಕ್ಕುತ್ತಿದೆ. ಮಳೆಗಾಲದಲ್ಲಿ ವೈಭವದಿಂದ ಧುಮ್ಮುಕ್ಕುವ ಜಲಪಾತ ಈ ಬಾರಿ ಎರಡನೆಯ ಭಾರಿ ಧುಮ್ಮಕ್ಕುತ್ತಿರುವ ಜಲಪಾತ ಮಳೆಗಾಲದಲ್ಲಿ ಪಿಕನಿಕ್ ಸ್ಪಾಟಾಗುವ ಜಲಪಾತ ಹನುಮಸಾಗರ ಬಳಿಯಲ್ಲಿಯ ಕಬ್ಬರಗಿಯ ಕಪಿಲೆಪ್ಪ ಜಲಪಾತವಾಗಿದೆ.