ಮಳೆ ಮಲ್ಲೇಶ್ವರ ಅಭಿವೃದ್ದಿಗೆ ಚಾಲನೆ
ಸುದ್ದಿಮೂಲವಾರ್ತೆ
ಕೊಪ್ಪಳ ಜೂ 26: ಕೊಪ್ಪಳ ನಗರದಲ್ಲಿರುವ ಮಳೆಮಲ್ಲೇಶ್ವರ ದೇವಸ್ಥಾನಕ್ಕೆ ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದರು.
ಪ್ರವಾಸೋದ್ಯಮ ಇಲಾಖೆಯಿಂದ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಪಾರ್ಕ, ಕಾರ್ ಪಾರ್ಕಿಂಗ್, ಹೈಮಾಸ್ಕ್ ಲೈಟ್, ಭಕ್ತರಿಗೆ ಮೂಲಭೂತ ಸೌಲಭ್ಯ ಒದಗಿಸುವ ಯೋಜನೆಗೆ ಇಂದು ಭೂಮಿ ಪೂಜೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ ಹಿಂದಿನ ಸರಕಾರದಲ್ಲಿ ರಸ್ತೆ ಅಭಿವೃದ್ದಿಗೆ ನಾಲ್ಕು ವರ್ಷದಲ್ಲಿ ಕೇವಲ 24 ಕೋಟಿ ರೂಪಾಯಿ ಬಂದಿತ್ತು. ಅವಶ್ಯವಿದ್ದ ಕಡೆ ರಸ್ತೆ ಅಭಿವೃದ್ದಿ ಮಾಡಲಾಗಿದೆ. ಇನ್ನುಳಿದ ರಸ್ತೆಗಳ ಅಭಿವೃದ್ದಿಗೆ ಅನುದಾನಕ್ಕೆ ಬಜೆಟ್ ನಂತರ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಕೊಪ್ಪಳ ನಗರಸಭೆ ನವೀಕರಣಕ್ಕಿಂತ ಮೊದಲು ನಗರದ ಸ್ವಚ್ಛತೆ. ನಗರದ ಸೌಂದರೀಕರಣಕ್ಕೆ ಮಳೆಗಾಲದಲ್ಲಿ ಚರಂಡಿ ವ್ಯವಸ್ಥೆ ಸರಿ ಪಡಿಸಲು ಆದ್ಯತೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಶಿವಗಂಗಮ್ಮ ಭೂಮಕ್ಕನವರ, ನಗರಸಭೆ ಸದಸ್ಯರಾದ ಮಹೇಂದ್ರ ಛೋಪ್ರಾ, ಮುತ್ತುರಾಜ ಕುಷ್ಟಗಿ, ಅಕ್ಬರ್ ಪಾಲ್ಟನ್, ಅಜೀಂ ಅಕ್ತರ, ಕಾಟನ್ ಪಾಷಾ ಸೇರಿ ಹಲವರು ಇದ್ದರು.