ಸುದ್ದಿಮೂಲ ವಾರ್ತೆ ಜಾಲಹಳ್ಳಿಿ, ಸೆ.27:
ಇಲ್ಲಿಗೆ ಹತ್ತಿಿರವಿರುವ ಹೊಸೂರು ಸಿದ್ದಾಪುರ ಗ್ರಾಾಮದ ಒಳಗೆ ಮಳೆ ನೀರು ನುಗ್ಗಿಿ ಎರಡು ದಿನಗಳಿಂದ ಜನಜೀವನ ಅಸ್ತವ್ಯಸ್ತ ಆಗಿದೆ.
ಗ್ರಾಾಮದ ಹಿಂದೆ ಸಣ್ಣ ಕೆರೆ ಇದೆ . ಕೆರೆಯ ನೀರು ಮೊದಲು ಬೇರೆ ಮಾರ್ಗವಾಗಿ ಹರಿಯುತಿತ್ತು ಕೆರೆಯ ಮಾಲಿಕರು ಕೆರೆಯ ಒಡ್ಡು ತೆಗೆದಿದ್ದರಿಂದ ಬಹುತೇಕ ಕೆರೆಯ ನೀರು ಮೊದಲಿನ ದಾರಿಯಲ್ಲಿ ಹೋಗದಂತೆ ಆಗಿ ಊರುಒಳಗೆ ನುಗ್ಗಿಿವೆ ,ಊರುಒಳಗೆ ನುಗ್ಗಿಿರುವ ನೀರು ಗ್ರಾಾಮದ ಆರಾಧ್ಯ ದೇವ ಹನುಮಂತ ದೇವಾಲಯದ ಒಳಗೆ ಎರಡು ಅಡಿಯಷ್ಟು ನಿಂತಿದೆ ಅಲ್ಲದೆ ಅಗಸಿ ಬಾಗಿಲಿನಿಂದ ಕೋಟೆ ಒಳಗಿನ ಎಲ್ಲಾ ಮನೆಗಳಲ್ಲಿ ನೀರು ಹೊಕ್ಕಿಿದೆ .ಇದರಿಂದಾಗಿ ವಯಸ್ಸಾಾದ ಪುರುಷ ಮಹಿಳೆಯರಿಗೆ ಮತ್ತು ಸಣ್ಣ ಸಣ್ಣ ಮಕ್ಕಳಿಗೆ ರೋಗರುಜಿನ ಬರುವ ಸಾಧ್ಯತೆ ಹೆಚ್ಚಾಾಗಿದೆ.
ಇಒ ಭೇಟಿ : ನೀರು ನುಗ್ಗಿಿ ಅಸ್ತವ್ಯಸ್ತವಾಗಿರುವ ಹೊಸೂರು ಸಿದ್ದಾಪುರ ಗ್ರಾಾಮಕ್ಕೆೆ ಇಂದು ಮಧ್ಯಾಾಹ್ನ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹಟ್ಟಿಿ ಭೇಟಿ ನೀಡಿ ಕೆರೆಯ ನೀರನ್ನು ಬೇರೆ ಕಡೆ ಹೋಗಲು ಪರ್ಯಾಯ ಮಾರ್ಗ ಮಾಡೋಣ ,ರಾಷ್ಟ್ರೀಯ ಗ್ರಾಾಮೀಣ ಉದ್ಯೋೋಗ ಖಾತ್ರಿಿಯಲ್ಲಿ ಜೊತೆಗೆ ಪಂಚಾಯತಿ ಇತರೆ ಯೋಜನೆಯ ಅನುದಾನದಲ್ಲಿ ಚರಂಡಿಗಳನ್ನು ಎತ್ತರ ಮಾಡಿ ಸುಗಮವಾಗಿ ನೀರು ಹರಿಯುವಂತೆ ಮಾಡೋಣಾ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಗ್ರಾಾಮ ಪಂಚಾಯತಿ ಸದಸ್ಯರು ಮಾನಪ್ಪ ಕಾವಲಿ,ರಂಗಪ್ಪ ,ತಿಮ್ಮಣ್ಣ ಮುರಾಳ,ಚಂದಪ್ಪ ಬುದ್ದಿನ್ನಿಿ ಸೇರಿದಂತೆ ಅನೇಕರು ಇದ್ದರು.
ಮಳೆ : ಹೊಸೂರು – ಸಿದ್ದಾಾಪುರ ಗ್ರಾಾಮಕ್ಕೆೆ ಜಲ ಸಂಕಟ
