ಸುದ್ದಿಮೂಲ ವಾರ್ತೆ ಮಾನ್ವಿ, ಡಿ.14
ವಿಕಲಚೇತನರಿಗೆ ಅನುಕಂಪಕ್ಕಿಿಂತ ಹೆಚ್ಚಾಾಗಿ ಸರಕಾರಿ ಹಾಗೂ ಇತರ ಸೌಲಭ್ಯಗಳು ಸಿಗುವಂತಾಗಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಶನಿವಾರ ಮಾನ್ವಿಿ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಸಂಕಲ್ಪ ವಿಕಲಚೇತನರ ಜಿಲ್ಲಾ ಒಕ್ಕೂಟದ ವತಿಯಿಂದ ಹಮ್ಮಿಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡುತ್ತಿಿದ್ದರು.
ರಾಜ್ಯ ಸರ್ಕಾರ ವಿಕಲ ಚೇತನರಿಗಾಗಿ ಅನೇಕ ಯೋಜನೆ ಮತ್ತು ಅನುದಾನ ನೀಡುತ್ತಿಿದೆ. ಆದರೆ ಅವುಗಳು ವಿಕಲಚೇತನರಿಗೆ ದೊರೆಯದೆ ಇರುವುದಕ್ಕೆೆ ಮಾಹಿತಿ ಕೊರತೆ ಕಾರಣವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಕಲಚೇತನರಿಗೆ ದೊರೆಯುವ ಸೌಲಭ್ಯಗಳನ್ನು ತಲುಪಿಸುವುದಕ್ಕೆೆ ಪ್ರಾಾಮಾಣಿಕ ಪ್ರಯತ್ನ ಮಾಡಿದಾಗ ವಿಕಲಚೇತನರು ಸ್ವಾಾವಲಂಬಿ ಜೀವನ ನಡೆಸುವುದಕ್ಕೆೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಹಿರಿಯ ಸಾಹಿತಿ ದೇವರಾಜ ಎಸ್.ಬಪ್ಪೂೂರು ವಿಕಲಚೇತನರ ಕುರಿತು ವಿಶೇಷ ಉಪನ್ಯಾಾಸ ನೀಡಿದರು.
ಸಾನಿಧ್ಯ ವಹಿಸಿದ್ದ ಮುಸ್ಲಿಿಂ ಸಮುದಾಯದ ಗುರುಗಳಾದ ಸೈಯದ್ ಸಜ್ಜಾಾದ್ ಹುಸೇನ್ ಮತವಾಲೆ ಸಾಹೇಬ್ ಹಾಗೂ ಕ್ರೈಸ್ತ ಧರ್ಮ ಗುರು ಸೈಂಟ್ ಮೇರಿಸ್ ಕ್ಯಾಾಥೋಲಿಕ್ ಚರ್ಚಿನ ಾ.ಸುರೇಶ ವಿನ್ಸೆೆಂಟ್ ಇವರು ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ವಿಕಲಚೇತನರ ಸಬಲೀಕರಣ ಇಲಾಖೆಯ ಅಧಿಕಾರಿ ವಿನೋದ ಕುಮಾರ, ಜೆಡಿಎಸ್ ಮುಖಂಡರಾದ ರಾಜಾ ರಾಮಚಂದ್ರ ನಾಯಕ, ಹೆಚ್.ಮೌನೇಶಗೌಡ, ಪಿ.ರವಿಕುಮಾರ, ಹಿರಿಯ ವಕೀಲ ಗುಮ್ಮಾಾ ಬಸವರಾಜ, ಸೈಯದ್ ಖಾದ್ರಿಿ, ರಾಘವೇಂದ್ರ, ಆಂಜನೇಯ, ಸುಭಾನ್ ಬೇಗ್, ಸಂಕಲ್ಪ ವಿಕಲಚೇತನರ ಒಕ್ಕೂಟದ ರಾಜ್ಯ ಪ್ರತಿನಿಧಿ ಹಾಗೂ ಜಿಲ್ಲಾ ಗೌರವಾಧ್ಯಕ್ಷ ದೇಸಾಯಿ ದೋತರಬಂಡಿ, ಜಿಲ್ಲಾಧ್ಯಕ್ಷ ಶಿವಕುಮಾರ ಚಲ್ಮಲ್, ಜಿಲ್ಲಾ ಉಪಾಧ್ಯಕ್ಷೆ ಹೆಚ್.ಎಂ. ಸಾವಿತ್ರಮ್ಮ, ತಾಲೂಕಾಧ್ಯಕ್ಷೆ ಲಕ್ಷ್ಮೀ ಉಟಕನೂರು, ಸಿರವಾರ ತಾಲೂಕಾಧ್ಯಕ್ಷ ಅಮರೇಶ ಪಾಟೀಲ್ ಚಾಗಭಾವಿ, ಚಂದ್ರಶೇಖರ ಮುಂತಾದವರು ಭಾಗವಹಿಸಿದ್ದರು.
ವಿಕಲಚೇತನರಿಗೆ ಅನುಕಂಪದ ಬದಲು ಅವಕಾಶಗಳು ಸಿಗುವಂತಾಗಬೇಕು – ರಾಜಾ ವೆಂಕಟಪ್ಪ ನಾಯಕ

