ಸುದ್ದಿಮೂಲ ವಾರ್ತೆ ರಾಯಚೂರು, ಜ.12:
ಭಕ್ತಿಿ ಮಾರ್ಗದ ಮೂಲಕ ಪರಮಾತ್ಮನನ್ನು ಕಾಣಲು ಯಾವುದೇ ಜಾತಿ ಮತ ಪಂಥದ ಭೇದವಿಲ್ಲ, ಭಕ್ತಿಿಯೊಂದೇ ರಾಜಮಾರ್ಗ ಎಂದು ತೋರಿಸಿಕೊಟ್ಟ ದಾಸ ಶ್ರೇಷ್ಠರು ಶ್ರೀ ಗೋಪಾಲ ದಾಸರು ಎಂದು ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಹೇಳಿದರು.
ನಗರದ ಬಯಲು ಆಂಜನೇಯ ದೇವಸ್ಥಾಾನದಲ್ಲಿ ಆಯೋಜಿಸಿದ 261ನೇ ಶ್ರೀ ಗೋಪಾಲ ದಾಸರ ಮಧ್ಯಾಾರಾಧನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮವನ್ನು ಪಂ.ಮುಕುಂದಾಚಾರ್ಯರು ಉದ್ಘಾಾಟಿಸಿದರು. ನಿವೃತ್ತ ಪ್ರಾಾಚಾರ್ಯ ವೆಂಕಟರಾವ್ ಕುಲಕರ್ಣಿ, ರವೀಂದ್ರ ಕುಲಕರ್ಣಿ, ಜಯಕುಮಾರ ದೇಸಾಯಿ, ದೇವಸ್ಥಾಾನದ ಅರ್ಚಕ ಶ್ರೀಧರಾಚಾರ್ಯ ಮುಂಗಲಿ ಹಾಗೂ ಹಿರಿಯ ಕಲಾವಿದ ಸುರೇಶ್ ಕಲ್ಲೂರ ಇತರರಿದ್ದರು.
ಭಗವಂತನ ಕಾಣಲು ಭಕ್ತಿಯೊಂದೆ ರಾಜಮಾರ್ಗ – ಕುಲಕರ್ಣಿ

