ಸುದ್ದಿಮೂಲ ವಾರ್ತೆ ನವದೆಹಲಿ, ಅ.04:
ಕೆಮ್ಮಿಿನ ಸಿರಪ್ ಸೇವಿಸಿ ಮಧ್ಯಪ್ರದೇಶ ಮತ್ತು ರಾಜಸ್ಥಾಾನದಲ್ಲಿ 11 ಮಕ್ಕಳು ಮೃತಪಟ್ಟ ಬೆನ್ನಲ್ಲಿಯೇ ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿಿನ ಸಿರಪ್ ನೀಡದಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ಹೊರಡಿಸಿದೆ.
ಕೇವಲ 15 ದಿನಗಳ ಅಂತರದಲ್ಲಿ ಮಧ್ಯಪ್ರದೇಶ ಮತ್ತು ರಾಜಸ್ಥಾಾನದಲ್ಲಿ 11 ಮಕ್ಕಳು ಮೃತಪಟ್ಟ ಘಟನೆ ದೇಶದಾದ್ಯಂತ ಆಘಾತ ಮೂಡಿಸಿದೆ. ಸಿರಪ್ ಸೇವಿಸಿದ ಮಕ್ಕಳಿಗೆ ಮೂತ್ರ ಬಾರದೆ ಹೊಟ್ಟೆೆ ಊದಿಕೊಂಡು ಬಳಿಕ ಅದು ಕಿಡ್ನಿಿ ವೈಲ್ಯಕ್ಕೆೆ ತಿರುಗಿ ಮಕ್ಕಳು ಸಾವನ್ನಪ್ಪಿಿದ್ದಾರೆ. ವಿಷಕಾರಿ ಡೈಥಿಲೀನ್ ಗ್ಲೈಕೋಲ್ ಬೆರೆಸಿದ ಕಲುಷಿತ ಕೆಮ್ಮಿಿನ ಸಿರಪ್ ಸಾವುಗಳಿಗೆ ಕಾರಣ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಈ ಹಿನ್ನೆೆಲೆಯಲ್ಲಿ ಕೇಂದ್ರ ಸರ್ಕಾರವು ಮಕ್ಕಳಿಗೆ ಕೆಮ್ಮಿಿನ ಸಿರಪ್ ನೀಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆಯನ್ನು ಹೊರಡಿಸಿದ್ದು, ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಅಥವಾ ಶೀತ ಔಷಧಿಗಳನ್ನು ಶಿಾರಸ್ಸು ಮಾಡಬಾರದು ಹಾಗೂ ನೀಡಬಾರದು ಎಂದು ಸೂಚಿಸಿದೆ.
ಅಲ್ಲದೇ, ಐದು ವರ್ಷದೊಳಗಿನ ಮಕ್ಕಳಿಗೆ ಸಾಮಾನ್ಯವಾಗಿ ಕೆಮ್ಮಿಿನ ಸಿರಪ್ಗಳನ್ನು ಶಿಾರಸ್ಸು ಮಾಡುವುದಿಲ್ಲ. ಐದಕ್ಕಿಿಂತ ಮೇಲ್ಪಟ್ಟ ಮಕ್ಕಳಿಗೆ ನೀಡುವಾಗ ಎಚ್ಚರಿಕೆ ವಹಿಸಬೇಕು. ವೈದ್ಯಕೀಯ ಮಾನದಂಡಗಳನ್ನು ಅನುಸರಿಸಬೇಕು. ನಿಕಟ ಮೇಲ್ವಿಿಚಾರಣೆ ಮತ್ತು ಸೂಕ್ತ ಡೋಸ್ ಗಳನ್ನು ಪಾಲನೆ ಮಾಡಬೇಕು ಎಂದು ಸಚಿವಾಲಯ ತಿಳಿಸಿದೆ.
ಕೇಂದ್ರ ಆರೋಗ್ಯ ಇಲಾಖೆ ಶಿಾರಸ್ಸು ಏನು?
* ಮಕ್ಕಳ ಆರೈಕೆಯಲ್ಲಿ ಔಷಧ ಬಗ್ಗೆೆ ತೀವ್ರ ಎಚ್ಚರಿಕೆಯಿಂದ ಇರಬೇಕು
* 2 ವರ್ಷಕ್ಕಿಿಂತ ಕೆಳಗಿನ ಮಕ್ಕಳಿಗೆ ಕೆಮ್ಮು, ಶೀತಕ್ಕೆೆ ಸಿರಪ್ ಬೇಡ
* ವೈದ್ಯರು ಸಿರಪ್ ಶಿಾರಸು ಮಾಡದಂತೆ ಆರೋಗ್ಯ ಇಲಾಖೆ ಸೂಚನೆ
* ಕೆಮ್ಮು ಹೆಚ್ಚಿಿದ್ರೆೆ ವೈದ್ಯರ ಮಾರ್ಗದರ್ಶನದಲ್ಲಿ ಡೊಸೇಜ್ ಮೀರದಂತೆ ಬಳಕೆ
* ಮಾಮೂಲಿ ಶೀತ ಜ್ವರಗಳಿಗೆ ಸಿರಪ್ ಬಳಕೆ ಬೇಡ
* 5 ವರ್ಷಕ್ಕಿಿಂತ ಕಡಿಮೆ ವಯಸ್ಸಿಿನವರಿಗೆ ಶಿಾರಸು ಮಾಡುವಂತಿಲ್ಲ
* ಶೀತ, ಕೆಮ್ಮು ವೇಳೆ ಮಕ್ಕಳು ನಿರ್ಜಲೀಕರಣ (ಡಿಹೈಡ್ರೇೇಟ್) ಆಗದಂತೆ ನೋಡಿಕೊಳ್ಳಬೇಕು
* ಶೀತ, ಕೆಮ್ಮು ತೀವ್ರ ಇದ್ರೆೆ ಮಾತ್ರ ವೈದ್ಯರ ಸಲಹೆಯಂತೆ ಸಿರಪ್ ಬಳಸಬೇಕು