ಸುದ್ದಿಮೂಲ ವಾರ್ತೆ
ಮೈಸೂರು, ಆ.22:ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಪಿ.ರಾಜೇಶ್ವರಿ ಅವರು ಅವಿರೋಧವಾಗಿ ಆಯ್ಕೆಯಾದರು.
ಈ ಹಿನ್ನೆಲೆಯಲ್ಲಿ ರಾಜೇಶ್ವರಿ ಅವರು, ಶಾಸಕರಾದ ಜಿ.ಟಿ.ದೇವೆಗೌಡ ಮತ್ತು ಜಿ.ಡಿ.ಹರೀಶ್ ಗೌಡರವರನ್ನು ಭೇಟಿ ಮಾಡಿ ಸನ್ಮಾನಿಸಿದರು. ಈ ಸಂಧರ್ಭದಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಕೆ ಉಮಾಶಂಕರ, ರೇವಣ್ಣ, ಹಾಲಿ ಉಪಾಧ್ಯಕ್ಷ ಹರೀಶ್ ಕುಮಾರ್, ನಿರ್ದೇಶಕರಾದ ಸವಿತ, ರಾಮಕೃಷ್ಣ ನಾಯಕ ಮತ್ತಿತರರು ಇದ್ದರು.