ಸುದ್ದಿಮೂಲ ವಾರ್ತೆ ಕವಿತಾಳ, ಡಿ.22:
ಸಾಮಾನ್ಯ ಮಹಿಳೆ ಮೀಸಲಾತಿ ಹೊಂದಿದ್ದ ಇಲ್ಲಿನ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾಾನಕ್ಕೆೆ ಎರಡನೇ ಅವಧಿಗೆ ರಾಜೇಶ್ವರಿ ತಿಪ್ಪಯ್ಯ ಸ್ವಾಾಮಿ ಅವರು ಸೋಮವಾರ ಅವಿರೋಧವಾಗಿ ಆಯ್ಕೆೆಯಾದರು.
ಮೊದಲನೆ ಅವಧಿಗೆ 15 ತಿಂಗಳು ಅಧ್ಯಕ್ಷರಾಗಿದ್ದ ಖಾಸಿಂಬಿ ಚಾಂದ ಪಾಷ ಅಧಿಕಾರ ಒಪ್ಪಂದದ ಪ್ರಕಾರ ಈಚೆಗೆ ರಾಜೀನಾಮೆ ಸಲ್ಲಿಸಿದ್ದರು. ತೆರವಾಗಿದ್ದ ಅಧ್ಯಕ್ಷ ಸ್ಥಾಾನಕ್ಕೆೆ ನಡೆದ ಚುನಾವಣೆಯಲ್ಲಿ ರಾಜೇಶ್ವರಿ ತಿಪ್ಪಯ್ಯ ಸ್ವಾಾಮಿ ಅವರು ಅಧ್ಯಕ್ಷ ಸ್ಥಾಾನಕ್ಕೆೆ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧವಾಗಿ ಆಯ್ಕೆೆಯಾದರು ಎಂದು ಚುನಾವಣೆ ಅಧಿಕಾರಿ ಸಿರವಾರ ತಸಿರ್ಲ್ದಾಾ ಅಶೋಕ ಪವಾರ್ ತಿಳಿಸಿದರು. ನೂತನವಾಗಿ ಆಯ್ಕೆೆಯಾದ ಅಧ್ಯಕ್ಷರಿಗೆ ಶಾಸಕ ಜಿ ಹಂಪಯ್ಯ ನಾಯಕ ಅವರು ಸನ್ಮಾಾನಿಸಿ ಸಿಹಿ ಹಂಚಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಎಲಿಜಾ ಓವಣ್ಣ, ಸದಸ್ಯರಾದ ಖಾಸಿಂಬಿ ಚಾಂದ ಪಾಷ, ರಮಾದೇವಿ ಸುರೇಶ, ಮಲ್ಲಿಕಾರ್ಜುನ ಗೌಡ, ಅಮರೇಶ ಕಟ್ಟಿಿಮನಿ, ಹುಲಗಪ್ಪ, ಲಿಂಗರಾಜ ಕಂದಗಲ್, ಪಟ್ಟಣ ಪಂಚಾಯತಿ ಮಾಜಿ ಸದಸ್ಯರಾದ ಗಂಗಪ್ಪ ದಿನ್ನಿಿ, ಶರಣಬಸವ ಹಣಗಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಕಿರಲಿಂಗಪ್ಪ, ಮಾಳಪ್ಪ ತೋಳ, ಶೇಖರಪ್ಪ ಹಟ್ಟಿಿ, ಮುಖಂಡರಾದ ಶಿವಣ್ಣ ವಕೀಲ, ಅಯ್ಯಪ್ಪ ನೀಲಗಲ್, ಬಿ ಜೆ ಪಿ ಸದಸ್ಯ ರಮೇಶ ನಗನೂರು, ರಾಜೇಶ ಬನ್ನಿಿಗಿಡ, ಚಾಂದ ಪಾಷ, ತಿಪ್ಪಯ್ಯ ಸ್ವಾಾಮಿ, ಓವಣ್ಣ, ಸುರೇಶ ರಡ್ಡಿಿ ಮತ್ತು ಪಕ್ಷದ ಹಿರಿಯ ಮುಖಂಡರು ಹಾಗೂ ಯುವ ಕಾರ್ಯಕರ್ತರು ಉಪಸ್ಥಿಿತರಿದ್ದರು.
ಕವಿತಾಳ : ಪಟ್ಟಣ ಪಂಚಾಯ್ತಿಗೆ ರಾಜೇಶ್ವರಿ ಪುನಃ ಅಧ್ಯಕ್ಷೆ

