ಸುದ್ದಿಮೂಲ ವಾರ್ತೆ ನವದೆಹಲಿ, ಡಿ.15:
ಮಾಜಿ ಐಎಎಸ್ ಅಧಿಕಾರಿ ರಾಜ್ಕುಮಾರ್ ಗೋಯಲ್ ಅವರು ಕೇಂದ್ರದ ಮುಖ್ಯ ಮಾಹಿತಿ ಆಯುಕ್ತರಾಗಿ (ಸಿಐಸಿ) ಇಂದು ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಗೋಯಲ್ ಅವರಿಗೆ ರಾಷ್ಟ್ರಪತಿ ದ್ರೌೌಪದಿ ಮುರ್ಮು ಅವರು ಅಧಿಕಾರ ಮತ್ತು ಗೌಪ್ಯತೆ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮತ್ತು ಕೇಂದ್ರ ಸಿಬ್ಬಂದಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಮಾಜಿ ಸಿಐಸಿ ಹೀರಾಲಾಲ್ ಸಮಾರಿಯಾ ಅವರ ಅಧಿಕಾರಾವಧಿಯು ಸೆಪ್ಟೆೆಂಬರ್ 13ಕ್ಕೆೆ ಪೂರ್ಣಗೊಂಡಿತ್ತು. ಅವರ ಸ್ಥಾಾನಕ್ಕೆೆ ಗೋಯಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಮೂವರು ಸದಸ್ಯರ ಸಮಿತಿಯು ಶಿಾರಸು ಮಾಡಿತ್ತು.
ರಾಜ್ಕುಮಾರ್ ಗೋಯಲ್ ಅವರು ಅರುಣಾಚಲ ಪ್ರದೇಶ – ಗೋವಾ – ಮಿಜೋರಾಂ – ಕೇಂದ್ರಾಾಡಳಿತ ಪ್ರದೇಶಗಳ (ಎಜಿಎಂಯುಟಿ) ಕೇಡರ್ನ 1990 ರ ಬ್ಯಾಾಚ್ನ ಭಾರತೀಯ ಆಡಳಿತ ಸೇವೆ (ಐಎಎಸ್) ನಿವೃತ್ತ ಅಧಿಕಾರಿ. ಅವರು ಆಗಸ್ಟ್ 31 ರಂದು ಕಾನೂನು ಮತ್ತು ನ್ಯಾಾಯ ಸಚಿವಾಲಯದ ನ್ಯಾಾಯ ಇಲಾಖೆಯ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು. ಗೃಹ ಸಚಿವಾಲಯದಲ್ಲಿ ಕಾರ್ಯದರ್ಶಿ (ಗಡಿ ನಿರ್ವಹಣೆ) ಆಗಿಯೂ ಸೇವೆ ಸಲ್ಲಿಸಿದ್ದಾರೆ. ಕೇಂದ್ರಾಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
9 ವರ್ಷಗಳ ನಂತರ ಪೂರ್ಣ ಆಯೋಗ ರಚನೆ: ಪ್ರಧಾನಿ ಮೋದಿ ಅವರ ನೇತೃತ್ವದ ಸಮಿತಿಯು ರಾಜ್ಕುಮಾರ್ ಗೋಯಲ್ ಅವರನ್ನು ಮುಖ್ಯ ಮಾಹಿತಿ ಆಯುಕ್ತರನ್ನಾಾಗಿ ಶಿಾರಸು ಮಾಡುವುದರ ಜೊತೆಗೆ 8 ಮಂದಿ ಮಾಹಿತಿ ಆಯಕ್ತರ ಹೆಸರುಗಳನ್ನು ಸೂಚಿಸಿತ್ತು. ಈ ಮೂಲಕ ಮಾಹಿತಿ ಆಯೋಗವು 9 ವರ್ಷಗಳ ನಂತರ ಪೂರ್ಣ ಬಲದ ತಂಡವನ್ನು ಹೊಂದಿದಂತಾಗಿದೆ. ಆಯೋಗವು ಸಿಐಸಿ ನೇತೃತ್ವದಲ್ಲಿ ಗರಿಷ್ಠ 10 ಮಾಹಿತಿ ಆಯುಕ್ತರನ್ನು ಹೊಂದಬಹುದು. ಪ್ರಸ್ತುತ, ಆನಂದಿ ರಾಮಲಿಂಗಂ ಮತ್ತು ವಿನೋದ್ ಕುಮಾರ್ ತಿವಾರಿ ಅವರು ಮಾಹಿತಿ ಆಯುಕ್ತರಾಗಿದ್ದಾರೆ.
ರಾಜ್ಕುಮಾರ್ ಗೋಯಲ್ ಮುಖ್ಯ ಮಾಹಿತಿ ಆಯುಕ್ತರಾಗಿ ಪ್ರಮಾಣ ವಚನ

