ಸುದ್ದಿಮೂಲ ವಾರ್ತೆ ಕನಕಗಿರಿ, ನ.30:
ವಿದ್ಯಾಾರ್ಥಿಗಳಲಿ ಪರಿಪೂರ್ಣ ವ್ಯಕ್ತಿಿತ್ವ ರೂಪಿಸಲು, ನಾಯಕ್ತವ ಗುಣ ಬೆಳೆಸಲು ರೇಂಜರ್ಸ್ ಮತ್ತು ರೋವರ್ಸ್ ಘಟಕಗಳು ಮಹತ್ವದ್ಧಾಾಗಿದೆ ಎಂದು ಉಪನ್ಯಾಾಸಕ ರಕ್ಷಿತ್ ಎ.ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ್ ಸ್ಕೌೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ರೇಂಜರ್ಸ್ ಮತ್ತು ರೋವರ್ಸ್ ಸ್ವಯಂ ಸೇವಕರಿಗೆ ಏರ್ಪಡಿಸಿದ್ದ ಅಭಿವಿನ್ಯಾಾಸ/ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ರಾಬರ್ಟ್ ಬೇಡೆನ್ ಪೊವೇಲ್ ಅವರ ಭಾವಚಿತ್ರಕ್ಕೆೆ ಪುಷ್ಪಾಾರ್ಚನೆ ಮಾಡಿ ಮಾತನಾಡಿದರು. ರೇಂಜರ್ಸ್ ಮತ್ತು ರೋವರ್ಸ್ ಘಟಕಗಳು ವಿದ್ಯಾಾರ್ಥಿಗಳಲಿ ನೈತಿಕ ಮೌಲ್ಯಗಳ, ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿಿವೆ. ಪ್ರಕೃತಿಯ ಕುತೂಹಲಗಳನ್ನು ನಮಗೆ ಪರಿಚಯಿಸುತ್ತೇವೆ ಎಂದರು.
ಸ್ಕೌೌಟ್ಸ್ ಮತ್ತು ಗೈಡ್ಸ್ ಜಿಲ್ಲಾಾ ಗೈಡ್ ಅರುಣ ಕುಮಾರಿ ವಸ್ತ್ರದ್ ಮಾತನಾಡಿ, ವಿದ್ಯಾಾರ್ಥಿಗಳಲ್ಲಿ ಸ್ವಯಂಶಿಸ್ತು, ಆತ್ಮವಿಶ್ವಾಾಸ,ಸಮಯಪ್ರಜ್ಞೆ, ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ರೇಂಜರ್ಸ್ ಮತ್ತು ರೋವರ್ಸ್ ಘಟಕಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ರೇಂಜರ್ಸ್ ಮತ್ತು ರೋವರ್ಸ್ ವಿದ್ಯಾಾರ್ಥಿಗಳು ರಾಷ್ಟ್ರಪತಿ ಪರೀಕ್ಷೆಯಲ್ಲಿ ಪುರಸ್ಕಾಾರ ಪಡೆದರೆ, ಉದ್ಯೋೋಗಗಳಲ್ಲಿ ಮೀಸಲಾತಿ ಪಡೆಯಬಹುದು, ಪರೀಕ್ಷಾ ಶುಲ್ಕಗಳಲ್ಲಿ ವಿನಾಯಿತಿಯನ್ನು ಪಡೆಯಬಹುದು ಎಂದರು. ಗೈಡ್ ಸಲ್ಯೂಟ್ ಬಗ್ಗೆೆ ಅದರ ಮಹತ್ವದ ಬಗ್ಗೆೆ ತಿಳಿಸಿದರು. ವಿದ್ಯಾಾರ್ಥಿಗಳು ಭಾರತ್ ಸ್ಕೌೌಟ್ಸ್ ಮತ್ತು ಗೈಡ್ಸ್ ನ ಧ್ಯೇಯ ವಾಕ್ಯವಾದ ಸೇವೆಗೆ ಸದಾ ಸಿದ್ಧರಿರಬೇಕು ಎಂದು ವಿದ್ಯಾಾರ್ಥಿಗಳಿಗೆ ಹುರಿದುಂಬಿಸಿದರು.
ರೋವರ್ಸ್ ಸಂಯೋಜಕ ಸಂಗಮೇಶ, ರೇಂಜರ್ಸ್ ಮತ್ತು ರೋವರ್ಸ್ ಇತಿಹಾಸ ಮತ್ತು ನೋಂದಣಿ ಬಗ್ಗೆೆ ತಿಳಿಸಿದರು. ರೇಂಜರ್ಸ್ ಸಂಯೋಜಕರಾದ ಸರ್ವಮಂಗಳಮ್ಮ ಟಿ.ಆರ್ ವಿದ್ಯಾಾರ್ಥಿಗಳಿಗೆ ಪ್ರತಿಜ್ಞಾಾ ವಿಧಿ ಬೋಧಿಸಿದರು.
ಸಹಾಯಕ ಪ್ರಾಾಧ್ಯಾಾಪಕರಾದ ಲಲಿತಾ ಎನ್.ಕೆ, ಡಾ. ವೀರೇಶ ಕೆಂಗಲ್, ಉಪನ್ಯಾಾಸಕರಾದ ಗೋಪಾಲರೆಡ್ಡಿಿ ಮಾದಿನಾಳ, ಮಾರುತೇಶ, ಬಸವರಾಜ, ಸೋಮಶೇಖರಪ್ಪ, ದತ್ತಾಾಂಶ ನಮೂದು ಸಹಾಯಕಿ ಜ್ಯೋೋತಿ ಸೇರಿದಂತೆ ವಿದ್ಯಾಾರ್ಥಿಗಳು ಇದ್ದರು.
ಪರಿಪೂರ್ಣ ವ್ಯಕ್ತಿಿತ್ವ ನಿರ್ಮಾಣಕ್ಕೆೆ ರೇಂಜರ್ಸ್ ಮತ್ತು ರೋವರ್ಸ್ ಘಟಕಗಳ ಕೊಡುಗೆ ಮಹತ್ವದ್ದು – ರಕ್ಷಿತ್ ಎ.

