ಸುದ್ದಿಮೂಲವಾರ್ತೆ
ಹೊಸಕೋಟೆ, ಆ.27: ತಾಲೂಕಿನ ಸ್ಪರ್ದಾತ್ಮಕ ಜಗತ್ತಿನಲ್ಲಿ ಪ್ರತಿಯೊಂದು ಮಕ್ಕಳಿಗೆ ಶಿಕ್ಷಣ ಎಂಬ ಆಸ್ತಿಯನ್ನು ಪೋಷಕರು ಸಂಪಾದಿಸಿ ಕೊಡಬೇಕು ಎಂದು ಮುಂಬೈಯ ಬಯೋಸ್ಟಾಟ್ ಇಂಡಿಯಾ ಕಂಪನಿಯ ಮುಖ್ಯ ವ್ಯವಸ್ಥಾಪಕ ರಾಮ್ಚರಣ್ ಹೇಳಿದರು.
ಹೊಸಕೋಟೆ ತಾಲೂಕಿನ ಸೂಲಿಬೆಲೆ ಪಟ್ಟಣದ ಭಾಗ್ಯಲಕ್ಷ್ಮೀ ಟ್ರೇಡರ್ ಆವರಣದಲ್ಲಿ ಬಯೋಸ್ಟಾಟ್ ಇಂಡಿಯಾ ಕಂಪನಿ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪ್ರೊತ್ಸಾಹದ
ದೃಷ್ಟಿಯಿಂದ ಹಸಿಗಾಳ ಪ್ರೌಢಶಾಲೆ ಹಾಗೂ ಸೂಲಿಬೆಲೆ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ
30 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ ಎಂದರು.
ಗ್ರಾಮೀಣ ಭಾಗದ ಮಕ್ಕಳು ಕಡ್ಡಾಯ ಶಿಕ್ಷಣದಡಿಯಲ್ಲಿ ಉನ್ನತ ವ್ಯಾಸಂಗ ಪಡೆಯಬೇಕು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಕಂಪನಿಗಳ ಸಹಕಾರ ಶಿಕ್ಷಣ ಕ್ಷೇತ್ರಕ್ಕೆ ನೀಡಬೇಕು ಎಂದರು.
ಪ್ರಾಡಕ್ಟ್ ಮ್ಯಾನೇಜರ್ ಹರೇಶ್ರಾಣೆ, ಹಸಿಗಾಳ ಪ್ರೌಢಶಾಲೆ ಮುಖ್ಯಶಿಕ್ಷಕಿ ತನುಜಾ, ವಿವೇಕಾನಂದ ಪ್ರೌಢಶಾಲೆ ಮುಖ್ಯಶಿಕ್ಷಕಿ ಅಂಬುಜಾಕ್ಷಿ, ಭಾಗ್ಯಲಕ್ಷ್ಮಿ ಟ್ರೇಡರ್ಸ್ ಮಾಲೀಕ ಮಂಜುನಾಥ್ ಇತರರು ಇದ್ದರು.