ಸುದ್ದಿಮೂಲ ವಾರ್ತೆ
ಮಾಲೂರು, ಏ.15: ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ 132 ನೇ ಜಯಂತೋತ್ಸವವನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಇ. ರಾಮೇಗೌಡ ಮಾತನಾಡಿ, ಭಾರತ ದೇಶದಲ್ಲಿ ಪ್ರಜೆಗಳು ಉತ್ತಮ ಜೀವನ ನಡೆಸಲು ಅಂಬೇಡ್ಕರ್ ಬರೆದ ಸಂವಿಧಾನವೇ ಕಾರಣವಾಗಿದೆ. ಅವರು ಯಾವುದೇ ಒಂದು ಜಾತಿಗೆ ಸಂವಿಧಾನವನ್ನು ರಚನೆ ಮಾಡಿಲ್ಲ. ದೇಶದ ಪ್ರತಿಯೊಬ್ಬರಿಗೂ ಸ್ವತಂತ್ರವಾಗಿ ಬದುಕಲು ತಮ್ಮದೇ ಆದ ಹಕ್ಕುಗಳನ್ನು ಪಡೆಯಲು ಕಾರಣ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಿಕೆ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್, ಜೆಡಿಎಸ್ ಎಸ್ಸಿ ಘಟಕದ ಬಿ ವಿಜಯ ಕುಮಾರ್, ಕೆ ವೆಂಕಟೇಶಪ್ಪ, ಗಂಗಣ್ಣ, ರಾಮ್ ಸಿಂಗ್, ಪ್ರಭಾಕರ್, ಸಾಧಿಕ್ ಪಾಶ, ನಿಖಿಲ್, ವಿಜಿ, ಚೋಟು ಬಾಯ್, ಆಸಿಫ್ ಖಾನ್, ನವೀನ್, ಲವಕುಶ, ಬಾಲು, ಶಿವು, ಡಾಕ್ಟರ್ ಸುರೇಶ್, ಮಂಜುನಾಥ್ ಸೇರಿದಂತೆ ಇನ್ನಿತರರು ಇದ್ದರು.