ಸುದ್ದಿಮೂಲ ವಾರ್ತೆ ಸಿಂಧನೂರು, ನ.30:
ಪ್ರತಿಯೊಬ್ಬ ಮಗುವಿನಲ್ಲೂ ವಿಭಿನ್ನವಾದ ಪ್ರತಿಭೆಗಳಿವೆ ಅವುಗಳನ್ನು ಗುರುತಿಸಿ ಪ್ರೋೋತ್ಸಾಾಹಿಸುವ ಕೆಲಸ ಆಗಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ರಮೇಶ ಕುನ್ನಟಗಿ ಹೇಳಿದರು.
ತಾಲೂಕಿನ ಕುನ್ನಟಗಿ ಗ್ರಾಾಮದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಗುರುವಾರ ದೇವಿಕ್ಯಾಾಂಪ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಶಾಲೆ ಗೆಲ್ಲಬೇಕು ಎಂಬ ಮನೋಭಾವ ಇಟ್ಟುಕೊಳ್ಳದೆ ಪ್ರತಿಭಾ ಕಾರಂಜಿ ಗೆಲ್ಲಬೇಕು ಎಂಬ ಭಾವನೆ ಪ್ರತಿಯೊಬ್ಬ ಶಿಕ್ಷಕರಲ್ಲಿ ಬರಲಿ ಎಂದು ತಿಳಿಸಿದರು. ವನಸಿರಿ ೌಂಡೇಶನ್ ಸಂಸ್ಥಾಾಪಕ ಅಮರೇಗೌಡ ಮಲ್ಲಾಾಪುರ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆೆಲ್ಲರ ಜವಾಬ್ದಾಾರಿ ಆಗಬೇಕು. ಪರಿಸರ ಉಳಿದರೆ ನಾವೆಲ್ಲ ಉಳಿಯುತ್ತೇವೆ ಎಂದು ತಿಳಿಸಿದರು.
ಆರ್ಡಿಸಿಸಿ ನಿರ್ದೇಶಕ ಸೋಮನಗೌಡ ಬಾದರ್ಲಿ ಪ್ರಶಸ್ತಿಿ ಪತ್ರ ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಸ್ಮಾಾರ್ಟ್ ಕ್ಲಾಾಸ್ ಸಿಗುವಂತಾಗಬೇಕು. ಶಿಕ್ಷಕರು ಮಕ್ಕಳ ಕಲಿಕೆಗೆ ಪ್ರೋೋತ್ಸಾಾಹಿಸಬೇಕು ಎಂದರು.
ಕಾಂಗ್ರೆೆಸ್ ಮುಖಂಡ ಸೈಯ್ಯದ್ ಹಾರೂನ್ಪಾಷಾ ಜಾಗೀರದಾರ್, ಪಗಡದನ್ನಿಿ ಗ್ರಾಾಪಂ ಅಧ್ಯಕ್ಷ ನಿರುಪಾದಿ ನಾಯಕ, ಗ್ರಾಾಪಂ ಸದಸ್ಯ ಪರಸಪ್ಪ, ಪೀರ್ ಹುಸೇನ್ಸಾಬ, ವನಸಿರಿ ೌಂಡೇಷನ್ ಗೌರವ ಅಧ್ಯಕ್ಷ ಶಂಕರಗೌಡ ಎಲೆಕೂಡ್ಲಿಿಗಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ರಫಿ ಕುನ್ನಟಗಿ, ಕ್ಷೇತ್ರ ದೈಹಿಕ ಶಿಕ್ಷಣಾಧಿಕಾರಿ ಸೋಮಲಿಂಗಪ್ಪ, ಕ್ಷೇತ್ರ ಶಿಕ್ಷಣ ಸಂಯೋ ಜಕ, ಬಸವರಾಜ ಆನೆಗುಂದಿ, ಶಿಕ್ಷಣ ಸಂಯೋಜಕ ಹುಲುಗಪ್ಪ, ಬಿಆರ್ಪಿ ಮೈನುದ್ದಿನ್, ಸಿಆರ್ಪಿ ಲಿಂಗಯ್ಯ, ಹನುಮಂತ ವರಕೇರ್, ದುರಗಪ ್ಪ ಗುಡದೂರು, ಮುಖ್ಯಶಿಕ್ಷಕ ಸುದರ್ಶನ ಇದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾಾರ್ಥಿಗಳು ಉತ್ತಮವಾಗಿ ಪ್ರದರ್ಶನ ನೀಡಿದರು.
ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ – ರಮೇಶ ಕುನ್ನಟಗಿ

