ಸುದ್ದಿಮೂಲ ವಾರ್ತೆ ಕೊಪ್ಪಳ, ನ.13:
ಡಿಸಿಎಂ ಡಿ.ಕೆ.ಶಿವಕುಮಾರ ಅವರು ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾಾನದಿಂದ ಕೆಳಗಿಳಿಸುವ ಯೋಚನೆಯಲ್ಲಿದ್ದು, ಇದರಿಂದಲೇ ತುಂಗಭದ್ರಾಾ ಡ್ಯಾಾಂ ಗೇಟ್ಗಳ ರಿಪೇರಿ ಮಾಡಿಸುವಲ್ಲಿ ಕಾಲಹರಣ ಮಾಡುತ್ತಿಿದ್ದಾಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಆರೋಪಿಸಿದರು.
ಕೊಪ್ಪಳ ತಾಲೂಕಿನ ಮುನಿರಾಬಾದ್ ನಲ್ಲಿ 2ನೇ ಬೆಳೆಗೆ ನೀರಿಗಾಗಿ ನಡೆದ ಸಭೆಯಲ್ಲಿ ಅವರು ಸುದ್ದಿಗೋಷ್ಠಿಿ ನಡೆಸಿ ಮಾತನಾಡಿದರು.ಎರಡುವರೆ ವರ್ಷ ಡಿಕೆಶಿ ಅವರು ಸಚಿವರಾಗಿ ಏನೂ ಮಾಡಲಿಲ್ಲ. ಬರೀ ಸಿಎಂ ಕುರ್ಚಿ ಕೆಡುವುದು ಹೇಗೆ ಎಂದು ಯೋಚನೆ ಮಾಡುತ್ತಿಿದ್ದಾಾರೆ. ತುಂಗಭದ್ರಾಾ ಡ್ಯಾಾಂ ಕ್ರಸ್ಟ್ ಗೇಟ್ ಕೊಚ್ಚಿಿಹೋದ ವೇಳೆ ಡಿಕೆಶಿ ಅವರು ಡ್ಯಾಾಂಗೆ ಭೇಟಿ ನೀಡಿದ್ದು ಖುಷಿಯಾಗಿತ್ತು. ಆದರೆ ಇಷ್ಟೊೊಂದು ಕ್ರಿಿಯಾಶೀಲರಾಗಿದ್ದಾಾರೆ ಎನ್ನುವುದು ಗೊತ್ತಿಿಲ್ಲ. ಗೇಟ್ ಕೊಚ್ಚಿಿ ಹೋಗಿ 16 ತಿಂಗಳು ಕಳೆದಿವೆ. ಇದುವರೆಗೂ ಒಂದು ಗೇಟ್ ಬದಲಾವಣೆ ಮಾಡಲು ಆಗಿಲ್ಲ. ಜಲಾಶಯ ತಜ್ಞರು ವರದಿ ಕೊಟ್ಟರೂ ಸರ್ಕಾರ ಎಚ್ಚೆೆತ್ತುಕೊಳ್ಳಲಿಲ್ಲ. ಜಲಾಶಯದ ನೀರು ಪೋಲು ಮಾಡಲು ಸರ್ಕಾರ ಯೋಚನೆ ಮಾಡಿದೆ. ಸರ್ಕಾರ ಮನಸ್ಸು ಮಾಡಿದರೆ 2ನೇ ಬೆಳೆಗೆ ನೀರು ಕೊಡಬಹುದು. ಆದರೆ ಸರ್ಕಾರ ಇದರಲ್ಲಿ ಸಂಪೂರ್ಣ ವೈಲ್ಯವಾಗಿದೆ. ಈಗ 70 ಟಿಎಂಸಿ ನೀರು ಇದ್ದರೂ ರೈತರ 2ನೇ ಬೆಳೆಗೆ ನೀರು ಕೊಡಲು ಹಿಂದೇಟು ಹಾಕುತ್ತಿಿದ್ದಾಾರೆ. ಡಿಸಿಎಂ ಅವರು ಜಲಸಂಪನ್ಮೂಲ ಸಚಿವರಾಗಿ ಸಂಪೂರ್ಣ ವಿಲರಾದ್ದಾಾರೆ. ರಾಜ್ಯದ ಅಣೆಕಟ್ಟಿಿನ ಪರಿಸ್ಥಿಿತಿ, ರೈತರ ಪರಿಸ್ಥಿಿತಿ ಅರಿಯಲು ಮುಂದಾಗುತ್ತಿಿಲ್ಲ. ಜಲಾಶಯದ ಕ್ರಸ್ಟ್ ಗೇಟ್ ಬದಲಾವಣೆ ಮಾಡಲು 52 ಕೋಟಿ ರೂ ಹಣ ಬೇಕು. ಆದರೆ ಸರ್ಕಾರದ ಬಳಿ 52 ಕೋಟಿ ರೂ ಹಣ ಕೊಡಲಾರದಷ್ಟು ಸಂಕಷ್ಟ ಎದುರಿಸುತ್ತಿಿದೆ. ಕ್ರಸ್ಟ್ ಗೇಟ್ ದುರಸ್ಥಿಿಗೂ ಹಣ ಕೊಡುತ್ತಿಿಲ್ಲ. ಸರ್ಕಾರದ ಇಂತಹ ನಿರ್ಲಕ್ಷ್ಯ ಕಂಡು ರೈತರು ಬೀದಿಗಿಳಿದು ಹೋರಾಟ ಮಾಡುತ್ತಿಿದ್ದಾಾರೆ ಎಂದರು.
ಮೈಸೂರು ಭಾಗದಲ್ಲಿ ನಮ್ಮ ನೀರು ನಮ್ಮ ಹಕ್ಕು ಎಂದು ಕಾಂಗ್ರೆೆಸ್ನವರು ಹೋರಾಟ ಮಾಡಿದರು. ನಾವು ಸಹ ನಮ್ಮ ಭಾಗದಲ್ಲಿ ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡುತ್ತೇವೆ. ನಾವು ಟಿಬಿ ಡ್ಯಾಾಂಗೆ ಮುತ್ತಿಿಗೆ ಹಾಕುತ್ತೇವೆ. ಜಲಾಶಯಕ್ಕೆೆ ಜಿಗಿದು ಆತ್ಮಹತ್ಯೆೆ ಮಾಡಿಕೊಳ್ಳಲೂ ಸಿದ್ಧ ಎಂದು ಶ್ರೀರಾಮುಲು ಸರ್ಕಾರಕ್ಕೆೆ ಎಚ್ಚರಿಕೆ ನೀಡಿದರು.
ಡಿಸಿಎಂ ಡಿಕೆಶಿ ಸಿಎಂ ಸ್ಥಾಾನಕ್ಕಾಾಗಿ ಡ್ಯಾಾಂ ಮರೆತರು : ರಾಮುಲು

