ಸುದ್ದಿಮೂಲ ವಾರ್ತೆ ರಾಯಚೂರು, ನ.13:
ಜಿಲ್ಲಾಾ ಸಾಹಿತ್ಯ ಪರಿಷತ್ತು ನಿಷ್ಕ್ರಿಿಯವಾಗಿದೆ ಎಂಬ ತಮ್ಮ ವಿರುದ್ಧದ ಆರೋಪ ನಿರಾಧಾರ ಮೂರು ವರ್ಷಗಳಿಂದ ಏನೇನು ಚಟುವಟಿಕೆ ನಡೆದಿವೆ ಎಂದು ದಾಖಲೆ ಬಹಿರಂಗಕ್ಕೆೆ ಸಿದ್ದನಿದ್ದೇನೆ ಎಂದು ಪರಿಷತ್ತಿಿನ ಜಿಲ್ಲಾಾಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ತಿಳಿಸಿದ್ದಾಾರೆ.
ಈ ಕುರಿತು ಪತ್ರಿಿಕಾ ಹೇಳಿಕೆ ನೀಡಿರುವ ಅವರು, ಇದೇ ವರ್ಷ ಮಾರ್ಚ್ 2025ರಲ್ಲಿ ರಾಯಚೂರು, ಮಾನ್ವಿಿ ತಾಲೂಕ ಸಾಹಿತ್ಯ ಸಮ್ಮೇಳನ ನಡೆದಿವೆ. 2024ರಲ್ಲಿ ಜಿಲ್ಲೆಯ ಹಿರಿಯ ಸಾಹಿತಿ ಶಾಂತರಸ ಅವರ ಶತಮಾನೋತ್ಸವ, 2023ರ ಡಿಸೆಂಬರ್ನಲ್ಲಿ ಜಿಲ್ಲೆಯ ತತ್ವಪದಕಾರರ ಚರಿತ್ರೆೆ ಕೃತಿ ಪ್ರಕಟಿಸಿ ಬಿಡುಗಡೆಗೊಳಿಸಲಾಗಿದೆ. ಸಿಂಧನೂರು ತಾಲೂಕಿನಲ್ಲಿ ಸುಮಾರು 56 ದತ್ತಿಿ ಕಾರ್ಯಕ್ರಮ ಹಾಗೂ ದೇವದುರ್ಗ ಮತ್ತು ರಾಯಚೂರ ತಾಲೂಕಿನಲ್ಲಿಯು ನಡೆದಿವೆ. ಅದರಂತೆ ರಾಯಚೂರನಲ್ಲಿ ಕಥಾ ಕಮ್ಮಟ, ಮಾನ್ವಿಿ ಯಲ್ಲಿ ಕಾವ್ಯ ಕಮ್ಮಟ ಹಾಗೂ ಅನೇಕ ಸಾಹಿತಿಗಳ ಪುಸ್ತಕ ಬಿಡುಗಡೆ ಸಮಾರಂಭಗಳು ಹೀಗೆ ಹತ್ತು ಹಲವು ಕಾರ್ಯಕ್ರಮ ಜಿಲ್ಲಾಾಧ್ಯಕ್ಷನಾಗಿ ಜಿಲ್ಲಾಾ ಸಮಿತಿ ಸಹಕಾರದಿಂದ ನಡೆದಿವೆ. ಯಾವುದೇ ಕಾರ್ಯಚಟುವಟಿಕೆಗಳು ನಿಂತಿಲ್ಲ. ಇಷ್ಟೆೆಲ್ಲ ಕಾರ್ಯಕ್ರಮಗಳು ನಡೆದಿದ್ದರೂ ಜಿಲ್ಲಾಧ್ಯಕ್ಷರು ನಿಷ್ಕ್ರಿಿಯ ಎಂದು ಯಾವ ಆಯಾಮದಲ್ಲಿ ಹೇಳುತ್ತಿಿದ್ದಾರೆ ಗೊತ್ತಿಿಲ್ಲ ಎಂದು ತಿಳಿಸಿದ್ದಾಾರೆ.
ಕೇಂದ್ರ ಪರಿಷತ್ತಿಿನಿಂದ ನೀಡಿರುವ ಅನುದಾನದ ಹಣವನ್ನು ನಿಯಮಾನುಸಾರ ಬಳಕೆ ಮಾಡಿ ಪ್ರತಿ ವರ್ಷವು ಲೆಕ್ಕ ಪರಿಶೋಧಕರಿಂದ ಪರಿಶೀಲನೆ ಮಾಡಿ ಕೇಂದ್ರ ಪರಿಷತ್ತಿಿಗೆ ವರದಿ ಸಲ್ಲಿಸಲಾಗುತ್ತಿಿದೆ. ಇನ್ನು ಕನ್ನಡ ಭವನದ ನಿರ್ವಹಣೆಯ ಹಣ ದುರುಪಯೋಗವಾಗಿದೆ ಎಂದು ಆರೋಪ ನಿರಾಧಾರವಾಗಿದೆ.
ಕನ್ನಡ ಭವನದ ಮೇಲ್ಮಹಡಿಯ ಕಾಮಗಾರಿಗಾಗಿ ಶಾಸಕ ಡಾ. ಶಿವರಾಜ ಪಾಟೀಲ ಅವರ ವಿಶೇಷ ಅನುದಾನದಲ್ಲಿ 30 ಲಕ್ಷ ಮೊತ್ತದ ಕಾಮಗಾರಿ ಮಾಡಲಾಗುತ್ತಿಿದೆ. ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ ಅನುದಾನದಲ್ಲಿ 10 ಲಕ್ಷ ದಲ್ಲಿ ಕನ್ನಡ ಭವನದ ನವೀಕರಣ ಹಾಗೂ ಕನ್ನಡ ಭವನದ ಸುತ್ತ ತಡೆಗೋಡೆ ಕಾರ್ಯವನ್ನು ಮಾಡಿಸಲಾಗಿದೆ. ಅದರಂತೆ ಕನ್ನಡ ಭವನದಲ್ಲಿ ಪೀಠೋಪಕರಣ ವ್ಯವಸ್ಥೆೆ ಮಾಡಲಾಗಿದೆ.
ಈಗ ತಾಲೂಕುಗಳಿಗೆ ಹೊಸ ಅಧ್ಯಕ್ಷರ ನೇಮಕ ಮಾಡಿದ್ದು, ಐದು ವರ್ಷಗಳ ಸುದೀರ್ಘ ಅವಧಿ ಇರುವುದರಿಂದ ಬದಲಾವಣೆ ಮಾಡಲಾಗಿದೆ. ಕಳೆದ ಮಾರ್ಚ್ -2025 ರಿಂದ ಸೆಪ್ಟೆೆಂಬರ್ ವರೆಗೆ ಪತ್ರ ವ್ಯವಹಾರ ಮಾಡಿದರೂ ಕೇಂದ್ರ ಪರಿಷತ್ತಿಿನ ಅಧ್ಯಕ್ಷರು ಅನುಮೋದಿಸಲಿಲ್ಲ ಅವರಿಗೆ ಏಳು ದಿನ ಕಾಲಾವಕಾಶ ನೀಡಿ ನನ್ನ ವಿವೇಚನೆ ಬಳಸಿ ನೇಮಕ ಮಾಡಿದ್ದೇನೆ. ಈಗ ಆ ಎಲ್ಲ ಅಧ್ಯಕ್ಷರುಗಳು ತಮ್ಮ ತಾಲೂಕುಗಳಲ್ಲಿ ಸಕ್ರಿಿಯವಾಗಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ ಹೀಗಿರುವಾಗ ನಿಷ್ಕ್ರಿಿಯ ಎಂಬ ಪ್ರಶ್ನೆೆಯೇ ಬರುವುದಿಲ್ಲ.
ಜಿಲ್ಲೆಯ ಕಲಾವಿದರು, ಸಾಹಿತಿಗಳನ್ನು ಪರಿಷತ್ತು ಇಂದಿಗೂ ಮರೆತಿಲ್ಲ. ಪ್ರತಿ ವರ್ಷವು ಕನ್ನಡ ಸಾಹಿತ್ಯ ಪರಿಷತ್ತಿಿನ ಸಂಸ್ಥಾಾಪನ ದಿನದಂದು ಮತ್ತು ರಾಜ್ಯೋೋತ್ಸವದಂದು ಮತ್ತು ಅನೇಕ ಸಭೆ, ಸಮಾರಂಭ, ಸಮ್ಮೇಳನಗಳಲ್ಲಿ ವೇದಿಕೆ ಕಲ್ಪಿಿಸಿ ಗೌರವಿಸಲಾಗಿದೆ. ಮಹಿಳೆಯರಿಗೆ ಅವಕಾಶ ನೀಡಿಲ್ಲವೆಂದು ಒಪ್ಪುುವಂಥದಲ್ಲ. ಈಗಾಗಲೇ ಮಸ್ಕಿಿ ತಾಲೂಕಿಗೆ ಮಹಿಳೆಯರನ್ನೇ ನೇಮಕ ಮಾಡಲಾಗಿದೆ ಮತ್ತು ಜಿಲ್ಲಾ ತಾಲೂಕಾ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿಿದ್ದಾರೆ.
ಬೈಲಾ ಪ್ರಕಾರ ಜಿಲ್ಲೆಯಲ್ಲಿ ಆಜೀವ ಸದಸ್ಯರ ಸಭೆ ಮಾಡಲು ಅವಕಾಶ ಇಲ್ಲ. ಇದು ಕೇಂದ್ರ ಪರಿಷತ್ತು ಪ್ರತಿ ವರ್ಷ ಮಾಡುತ್ತಿಿದೆ. ಅಧ್ಯಕ್ಷನಾದ ಮೇಲೆ ತಲಾ 25 ಸಾವಿರದಂತೆ 10 ದತ್ತಿಿಗಳನ್ನು ಸಂಗ್ರಹಿಸಿ ಕೇಂದ್ರ ಪರಿಷತ್ತಿಿಗೆ ಕಳುಹಿಸಲಾಗಿದೆ. ಅದರಲ್ಲೂ ದೇವದುರ್ಗ ಒಂದರಲ್ಲಿಯೆ 8 ಜನ ದತ್ತಿಿ ದಾನಿಗಳು ದತ್ತಿಿ ನೀಡಿದ್ದಾರೆ ಎಂಬುದು ಸ್ಮರಿಸಬೇಕಾಗಿದೆ.
ಇನ್ನುಳಿದ ಅವಧಿಯಲ್ಲಿ ನನ್ನ ಅನಾರೋಗ್ಯದ ಮಧ್ಯೆೆಯೂ ಸಾಧ್ಯವಾದಷ್ಟು ಕನ್ನಡದ ಕೆಲಸ ಕಳೆದ 30-40 ವರ್ಷಗಳಿಂದ ಸೇವೆ ಮಾಡುತ್ತಿಿದ್ದು ಈಗಲೂ ಮಾಡುವ ಬಯಕೆ ನನ್ನದಾಗಿದೆ ಎಂದು ರಂಗಣ್ಣ ಪಾಟೀಲ್ ಅಳ್ಳುಂಡಿ ಹೇಳಿದ್ದಾಾರೆ.

