ಸುದ್ದಿಮೂಲ ವಾರ್ತೆ ರಾಯಚೂರು, ಜ.13:
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾಾ ನಿಲಯದ ಕನ್ನಡ ಅಧ್ಯಯನ ವಿಭಾಗ ಹಾಗೂ ಕನ್ನಡ ಸಾಹಿತ್ಯ ಸಂಘದ ವತಿಯಿಂದ ರಂಗೋಲಿ ಉತ್ಸವ ಸ್ಪರ್ಧೆ ಕಾರ್ಯಕ್ರಮ ಹಮ್ಮಿಿ ಕೊಳ್ಳಲಾಗಿದ್ದು, ವಿಶ್ವವಿದ್ಯಾಾಲಯದ ವಿವಿಧ ವಿಭಾಗಗಳ ಸ್ನಾಾತ ಕೋತ್ತರ ವಿದ್ಯಾಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ವಿವಿ ಕುಲಪತಿ ಪ್ರೊೊ.ಶಿವಾನಂದ ಕೆಳಗಿನಮನಿ ಹಾಗೂ ಕುಲಸಚಿವರಾದ ಡಾ.ಎ.ಚನ್ನಪ್ಪ ಅವರು ವಿದ್ಯಾಾರ್ಥಿಗಳ ವಿಭಿನ್ನ ಸೃಜನಶೀಲ ರಂಗೋಲಿ ಬಿಡಿಸುವ ಕೌಶಲ್ಯ ಮೆಚ್ಚಿಿಕೊಂಡು ಶುಭಾಶಯ ವ್ಯಕ್ತಪಡಿಸಿದರು. ರಂಗೋಲಿ ಉತ್ಸವ ಸ್ಪರ್ಧೆಯಲ್ಲಿ ಕನ್ನಡ ವಿಭಾಗದ ಅಂಬ್ರಮ್ಮ ಪ್ರಥಮ, ಭೌತಶಾಸ ವಿಭಾಗದ ನಾಗರತ್ನ.ಜಿ ದ್ವಿಿತೀಯ, ವಾಣಿಜ್ಯ ವಿಭಾಗದ ಸಂಗೀತಾ ತೃತೀಯ ಸ್ಥಾಾನ ಪಡೆದರೆ, ಬೋಧಕೇತರ ಸಿಬ್ಬಂದಿಗಳಾದ ವಿಜಯಲಕ್ಷ್ಮೀ, ರಾಜೇಶ್ವರಿ, ಮತ್ತು ನಾಗರಾಜ ಸಮಾಧಾನಕರ ಸ್ಥಾಾನ ಪಡೆದರು.
ಈ ಸಂದರ್ಭದಲ್ಲಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊೊ.ಪಾರ್ವತಿ ಸಿ.ಎಸ್., ಡೀನರಾದ ಪ್ರೊೊ.ಪಿ.ಭಾಸ್ಕರ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ಎನ್ಎಸ್ಎಸ್ ಅಧಿಕಾರಿ ಡಾ.ಜಿ.ಎಸ್.ಬಿರಾದಾರ, ವಿಭಾಗದ ಸಂಯೋಜಕರು ಡಾ.ಶಿವರಾಜ ಯತಗಲ್, ಕನ್ನಡ ಸಾಹಿತ್ಯ ಸಂಘದ ಕಾರ್ಯಧ್ಯಕ್ಷರು ಡಾ.ಶಿವಲೀಲಾ ಬಸನಗೌಡ, ಉಪನ್ಯಾಾಸಕರಾದ ಡಾ.ಶರಣಪ್ಪ ಚಲವಾದಿ, ಡಾ.ರಾಜೇಶ್ವರಿ, ಡಾ.ಗೀತಾಂಜಲಿ ಉಪಸ್ಥಿಿತರಿದ್ದರು.
ವಾಲ್ಮೀಕಿ ವಿವಿಯಲ್ಲಿ ರಂಗೋಲಿ ಉತ್ಸವ

