ಸುದ್ದಿಮೂಲ ವಾರ್ತೆ ಹೊಸಪೇಟೆ, ಡಿ.28:
ಮಹಾಭಾರತ ಮತ್ತು ಭಾಗವತವನ್ನು ಮಿಶ್ರಣಗೊಳಿಸಿ ಭಾಮಿನಿ ಷಟ್ಸದಿಯಲ್ಲಿ ಮಹಾ ಕಾವ್ಯ ರಚಿಸಿದವರಲ್ಲಿ ರಂಗೋಪಂತ ನಾಗರಾಜರಾಯರೇ ಮೊದಲಿಗರು ಎಂದು ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಾಲಯದ ವಿಶ್ರಾಾಂತ ಕುಲಪತಿ ಪ್ರೊೊ.ಮಲ್ಲೇಪುರಂ ಜಿ.ವೆಂಕಟೇಶ್ ಹೇಳಿದರು.
ನಗರದ ವೆಂಕಟೇಶ್ವರ ಕಲ್ಯಾಾಣ ಮಂಟಪದಲ್ಲಿ ಗಮಕ ಕಲಾವಿದ, ನಿವೃತ್ತ ಹಿಂದಿ ಶಿಕ್ಷಕ ಕೃಷ್ಣಕವಿ ರಂಗೋಪಂತ ನಾಗರಾಜರಾಯರು ರಚಿಸಿರುವ 16, 000 ಭಾಮಿನಿ ಷಟ್ಸದಿಯಲ್ಲಿರುವ ಶ್ರೀಕೃಷ್ಣ ಲೀಲಾಮೃತ ಮಹಾಕಾವ್ಯಂ ಬಿಡುಗಡೆಗೊಳಿಸಿ ಮಾತನಾಡಿದ ಅವರು ಹೊಸಪೇಟೆಯಲ್ಲಿ ಒಬ್ಬ ಮಹಾಕವಿ ಇದ್ದಾರೆ ಎಂಬುದು ಗೊತ್ತೇ ಇರಲಿಲ್ಲ, ಅವರೊಬ್ಬ ಅನನ್ಯ ಪ್ರತಿಭೆಯ ಕವಿಯಾಗಿದ್ದಾರೆ. ಕುಮಾರವ್ಯಾಾಸ ಭಾರತದಿಂದ ಪ್ರಭಾವಿತರಾಗಿ ನಾಗರಾಜರಾಯರು ಈ ಮಹಾಕಾವ್ಯ ರಚಿಸಿದ್ದರೂ, ತಮ್ಮ ಸ್ವಂತಿಕೆಯನ್ನು ಹಲವು ಸಂದ ರ್ಭಗಳಲ್ಲಿ ಪ್ರದರ್ಶಿಸಿದ್ದಾರೆ. ಭಾಗವತ ಮತ್ತು ಮಹಾಭಾರತವನ್ನು ಮಿಶ್ರಣ ಗೊಳಿಸಿ ಕನ್ನಡದಲ್ಲಿ ಮಹಾಕಾವ್ಯ ರಚಿಸಿದವರು ಇಲ್ಲವೇ ಇಲ್ಲ ಎನ್ನಬಹುದು, ಕೇವಲ ಕಾವ್ಯ ಬರೆಯದೆ, ಕೇವಲ ಶಾಸವನ್ನೂ ಬರೆಯದೆ ಎರಡನ್ನೂ ಸಮನ್ವಯಗೊಳಿಸಿದ್ದರಿಂದ ಈ ಕೃತಿ ಇನ್ನಷ್ಟು ಮಹತ್ವ ಪಡೆದಿದೆ. ಸಂಸ್ಕೃತದಲ್ಲಿ ಈ ಕೆಲಸವನ್ನು ಮಧ್ವಾಾಚಾರ್ಯರು ಮಾಡಿದ್ದಾರೆ, ಆದರೆ ಅವರು ಬರೆದುದು ಶಾಸಕೃತಿಯೇ ಹೊರತು ಕಾವ್ಯವಲ್ಲ. ಈ ನೆಲೆಯಲ್ಲಿ ನಾಗರಾಜರಾಯರ ಕೆಲಸ ವಿಶಿಷ್ಟವಾದುದು ಎಂದು ಮಲ್ಲೇಪುರಂ ಹೇಳಿದರು.
ಪ್ರವಚನಕಾರ ಪಾವಗಡ ಪ್ರಕಾಶ ರಾವ್ ಮಾತನಾಡಿ, ಭಾಮಿನಿ ಷಟ್ಪದಿಯಲ್ಲಿರುವ ಮಹಾಕಾವ್ಯಗಳ ಮೇಲೆ ಉಪನ್ಯಾಾ ಸ ನೀಡುವ, ಗಮಕ ವಾಚನ ಮಾಡುವವರ ಸಂಖ್ಯೆೆ ಹೆಚ್ಚಬೇಕಾಗಿದೆ, ಇಲ್ಲವಾ ದರೆ ಮಹಾಕಾವ್ಯ ಸಂಪ್ರದಾಯ ನಶಿಸಿ ಹೋಗುವ ಅಪಾಯ ಇದೆ ಎಂದರು.
ವಿಜಯನಗರ ಭಾರತ: ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಾಲಯದ ನಿವೃತ್ತ ಪ್ರಾಾಧ್ಯಾಾಪಕ ಪ್ರೊೊ.ಕೆ.ರವೀಂದ್ರನಾಥ ಮಾತನಾಡಿ, ಕುಮಾರವ್ಯಾಾಸ ಮ ಹಾಭಾರತ ಕಥನವನ್ನು ಭಾಮಿನಿ ಷಟ್ಪದಿಯಲ್ಲಿ ಬರೆದು ಗದುಗಿನ ಭಾರತ ಎಂದೇ ಖ್ಯಾಾತವಾಯಿತು, ನಾಗರಾಜರಾಯರು ಈ ಮಹಾಕಾವ್ಯ ಬರೆಯುವ ಮೂಲಕ ವಿಜಯನಗರ ಭಾರತ ಎಂಬುದಾಗಿ ಈ ಕೃತಿ ಮುಂದಿನ ದಿನಗಳಲ್ಲಿ ಖ್ಯಾಾತಿ ಗಳಿಸಲಿದೆ ಎಂದರು.
ಕೃತಿಕಾರ ರಂಗೋಪಂತ ನಾಗರಾಜ ರಾಯರು ಮಾತನಾಡಿ, ನಾನು ನಿಜವಾಗಿಯೂ ಐದೇ ವರ್ಷದಲ್ಲಿ ಈ ಕೃತಿ ರಚಿಸಿ ಮುಗಿಸಿದ್ದೆ. ಆದರೆ 16 ವರ್ಷಗಳಲ್ಲಿ ಅದು ನಿಜವಾಗಿ ಪೂರ್ಣಗೊಂಡಿ ತು. ನನ್ನ 37ನೇ ವಯಸ್ಸಿಿಗೇ ಕೃತಿ ಸಿದ್ಧವಾಗಿತ್ತು. ಪ್ರಕಾಶನ ಮಾತ್ರ ಸಾಧ್ಯವಾಗ ಲಿಲ್ಲ. ಎತ್ನಳ್ಳಿಿ ಮಲ್ಲಯ್ಯ ಅವಿರತ ಶ್ರಮ ಹಾಕಿದ್ದರಿಂದಲೇ ನನ್ನ ಇಳಿಗಾಲದಲ್ಲಿ ಈ ಕೃತಿ ಹೊರಬರುವುದು ಸಾಧ್ಯವಾಯಿತು’ ಎಂದು ಭಾವುಕರಾಗಿ ನುಡಿದರು.
ಪಿವಿಎಸ್ಬಿಿಸಿ ಪ್ರೌೌಢಶಾಲೆಯ ಆಡಳಿತ ಮಂಡಳಿ ಸದಸ್ಯ ಪಿ.ಎನ್.ಶ್ರೀಪಾದ ಕಾರ್ಯಕ್ರಮ ಉದ್ಘಾಾಟಿಸಿ ಶುಭ ಹಾರೈಸಿದರು. ಕೃತಿ ಹೊರಬರಲು ಪ್ರಮುಖ ಕಾರಣಕರ್ತರಲ್ಲಿ ಒಬ್ಬರಾದ ಬೆಂಗಳೂರಿನ ವಕೀಲ ಮಾಣಿಕ್ಯ ಪ್ರಭು ಕೊನೆ ಗೂ ಕೃತಿ ಹೊರಬಂದಿದ್ದಕ್ಕೆೆ ಸಂತಸ ವ್ಯಕ್ತಪಡಿಸಿದರು.
ವಿಶ್ರಾಾಂತ ಪ್ರಾಾಧ್ಯಾಾಪಕ ಪ್ರೊೊ.ಮೃತ್ಯುಂಜಯ ರುಮಾಲೆ, ಬಳ್ಳಾಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದರಾಮ ಕಲ್ಮಠ, ಡಿಡಿಪಿಯು ನಾಗರಾಜ ಹವಾ ಲ್ದಾಾರ್, ಕೊಪ್ಪಳ ಡಿಡಿಪಿಐ ಎಲ್.ಡಿ.ಜೋಷಿ, ಹೊಸಪೇಟೆ ಬಿಇಒ ಶೇಖರಪ್ಪ ಹೊರಪೇಟೆ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಗೊಗ್ಗ ಚನ್ನಬಸವರಾಜ, ಬ್ರಾಾಹ್ಮಣ ಸಮಾಜದ ಅಧ್ಯಕ್ಷ ಕೆ.ದಿವಾಕರ, ವಿಜಯನಗರ ಸಾಹಿತ್ಯ ಪರಿಷತ್ ಅಧ್ಯಕ್ಷ ಮಧುರಚನ್ನ ಶಾಸಿ, ಕನ್ನಡಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಪಿ.ವೆಂಕಟೇಶ್, ಉದ್ಯಮಿ ಪತ್ತಿಿಕೊಂಡ ಸಂತೋಷ್ನಾಗ್ ಇತರ ರು ಇದ್ದರು.
ಭಾಮಿನಿ ಷಟ್ಪದಿಯಲ್ಲಿ ಮಹಾಭಾರತ ಮತ್ತು ಭಾಗವತ ಮಿಶ್ರಣಗೊಳಿಸಿ ಮಹಾಕಾವ್ಯ ರಚನೆ ರಂಗೋಪಂತ ನಾಗರಾಜರಾಯರೆ ಮೊದಲಿಗರು – ಪ್ರೊ. ಮಲ್ಲೇಪುರಂ ವೆಂಕಟೇಶ್ ಅಭಿಮತ

