ಅದ್ದುರಿಯಾಗಿ ಜರುಗಿದ ಶ್ರೀ ದ್ಯಾವಮ್ಮ ದೇವಿಯ ರಥೋತ್ಸವ
ಗುಡೂರ ಗ್ರಾಮದ ಆರಾದ್ಯ ದೇವತೆ ಶ್ರೀ ದ್ಯಾವಮ್ಮ ದೇವಿಯ ರತೋತ್ಸವ ಅದ್ದುರಿಯಾಗಿ ಜರುಗಿತು.
ಜೇವರ್ಗಿ ೧೫ : ತಾಲೂಕಿನ ಗುಡೂರ ಗ್ರಾಮದ ಆರಾದ್ಯ ದೇವತೆ ಶ್ರೀ ದ್ಯಾವಮ್ಮ ದೇವಿಯ ಜಾತ್ರೆಯು ಅದ್ದರಿಯಾಗಿ ನಡೆಯಿತು. ಲಕ್ಷ ದೀಪೋತ್ಸವ, ಪುರಾಣ ಕಾರ್ಯಕ್ರಮ ಜರುಗಿತು.
ಗುಡೂರ ಗ್ರಾಮದ ಆರಾಧ್ಯ ದೇವತೆಯಾದ ಶ್ರಿ ದ್ಯಾವಮ್ಮ ದೇವಿಯ ಜ್ಯಾತ್ರೆಯ ನೀಮಿತ್ಯವಾಗಿ ೯ ದಿನಗಳ ಕಾಲ ಸದ್ಗುರು ವಿಶ್ವರಾಧ್ಯರ ಪುರಾಣ ಕಾರ್ಯಕ್ರಮ ಜರುಗಿತು. ಶ್ರೀ ಉಜ್ಜಯಿನಿ ಪೀಠದ ಮಹಾಸ್ವಾಮಿಜಿಗಳಾದ ಶ್ರೀ ೧೦೦೮ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿಗಳ ದಿವ್ಯ ಸಾನಿಧ್ಯದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮವು ಜರುಗಿತು. ದೇವಿಯ ರತೋತ್ಸವದಲ್ಲಿ ಗುಡೂರ ಗ್ರಾಮ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳ ಭಕ್ತರು ಆಗಮಿಸಿ ದೇವಿಯ ದರ್ಶನವನ್ನು ಪಡೆದರು. ಗ್ರಾಮದ ಹಿರಿಯರು ಗ್ರಾಮಸ್ಥರಿಗೆ ಅಭಿನಂದಿಸಿದರು.
ದೇವಿಯ ರಥೋತ್ಸವವನ್ನು ಭಕ್ತರು ಎಳೆದು ದೇವಿಯ ಆಶಿರ್ವಾದ ಪಡೆದುಕೊಂಡರು. ಗ್ರಾಮದಲ್ಲಿ ೯ ದಿನಗಳಿಂದ ಪುರಾಣ ಕಾರ್ಯಕ್ರಮ ನಡೆದಿದ್ದು ಅನೇಕ ಮುಖಂಡರು ಬಾಗವಹಿಸಿದರು. ಸದ್ಗುರು ವಿಶ್ವರಾದ್ಯರ ಪುರಾಣವನ್ನು ಗ್ರಾಮಸ್ಥರು ಪ್ರತಿದಿನ ಅದ್ದುರಿಯಾಗಿ ನೆರೆವೆರಿಸಿಕೊಂಡು ಬಂದಿದ್ದಕ್ಕೆ ಗ್ರಾಮದ ಹಿರಿಯರು ಸಂತಸ ಪಟ್ಟರು. ಯಾವುದೆ ಅಹಿತಕರ ಘಟನೆ ನಡೆಯದಂತೆ ರಥೋತ್ಸವ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ನೂರಂದಯ್ಯ ಸ್ವಾಮಿ, ನಾಗಣ್ಣ ಹೇಗಣಿ, ಸಿದ್ದಪ್ಪ ಮುರಡಿ, ಸುರೇಶ ಹವಲ್ದಾರ, ಮರೆಪ್ಪ ಕಂಡಾಳಕರ್, ಸೌಖತ್ ಬಳುಂಡಗಿ, ದವಲಪ್ಪ ಮದನಕರ್, ದವಲು ಪೂಜಾರಿ ಹೊಸಮನಿ ಸೆರಿದಂತೆ ದೇವಿಯ ಭಕ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.