ಸುದ್ದಿಮೂಲ ವಾರ್ತೆ ರಾಯಚೂರು, ಡಿ.14
ಇಂದಿನ ಶಿಕ್ಷಣ ವ್ಯವಸ್ಥೆೆಯಲ್ಲಿ ಕೇವಲ ಶಿಕ್ಷಣ ನೀಡಿ ಅಂಕಗಳಿಸಿದರೆ ಸಾಲದು, ಜೊತೆಗೆ ಸಂಸ್ಕಾಾರ ಕೂಡ ಬಹಳ ಮುಖ್ಯವಾಗಿದೆ ಅದನ್ನು ಶಿಕ್ಷಕರು ಹಾಗೂ ಪೋಷಕರು ಮಕ್ಕಳಲ್ಲಿ ಬೆಳೆಸಬೇಕಾಗಿದೆ ಎಂದು ರಾಯಚೂರು ದಕ್ಷಿಣ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಿ ರಾವುತರಾವ್ ಬರೂರ ಹೇಳಿದರು.
ನಗರದ ಪಂ. ಸಿದ್ದರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ದಿ ಸ್ಟೆೆಪಿಂಗ್ ಸ್ಟೋೋನ್ ಶಾಲೆಯಿಂದ ಹಮ್ಮಿಿಕೊಂಡ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ದಿನಗಳಲ್ಲಿ ಮಕ್ಕಳು ಕೇವಲ ಅಂಕಗಳಿಸಿದರೆ ಸಾಕು ಎಂಬ ಮನಸ್ಥಿಿಗೆ ಪಾಲಕರು ಬಂದಿದ್ದೇವೆ ಅದನ್ನೇ ಸಾಧನೆ ಎಂದು ಬಿಂಬಿಸುತ್ತಿಿದ್ದೇವೆ ಆದರೆ, ಸಂಸ್ಕಾಾರ ಕಲಿಸುವುದು ಮರೆಯುತ್ತಿಿದ್ದೇವೆ ಅದು ಆಗಬಾರದು ಎಂದರು.
ಇತರರಿಗೆ ಸಹಾಯ, ಪರಿಸರದ ಬಗ್ಗೆೆ ಕಾಳಜಿ ಪ್ರಾಾಮಾಣಿಕತೆ ಮತ್ತು ನಿಷ್ಠೆೆಯಿಂದ ಕೆಲಸ ಮಾಡುವ ಜೊತೆಗೆ ದೇಶಾಭಿಮಾನ ಬೆಳೆಸಲು ಶಿಕ್ಷಕರು, ಪಾಲಕರು ಮುಂದಾಗಬೇಕು ಪಾಲಕರು ಮಕ್ಕಳ ಕೈಯಲ್ಲಿ ಮೊಬೈಲ್ ಕೊಡದೆ ಪುಸ್ತಕ ಕೊಡಬೇಕು ಎಂದು ಕಿವಿ ಮಾತು ಹೇಳಿದರು. ಪ್ರಸ್ತುತ ದಿನಗಳಲ್ಲಿ ಮೊಬೈಲ್ ನಿಂದ ಬಹಳಷ್ಟು ಸೈಬರ್ ಅಪರಾಧಗಳು ಆಗುತ್ತಿಿದ್ದು ಅದರಿಂದ ಎಲ್ಲರೂ ಜಾಗೃತರಾಗಿರಬೇಕೆಂದರು.
ಈ ಸಂದರ್ಭದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಂತರ ಪೊಲೀಸ್ ಇಲಾಖೆಯಿಂದ ಸೈಬರ ಅಪರಾಧ ಕುರಿತು ವಿಡಿಯೋ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಸಣ್ಣ ವೀರೇಶ್ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಜಿತೇಂದ್ರ ಪಟೇಲ್, ಲಾಲ್ ಜಿ ಪಟೇಲ್, ಶಾಲೆಯ ಮುಖ್ಯೋೋಪಾಧ್ಯಾಾಯನಿ ಗೀತಾ ಪಟೇಲ್, ಯರಗೇರಾ ಮತ್ತು ಪಶ್ಚಿಿಮ ಠಾಣೆಯ ವೃತ್ತ ನಿರೀಕ್ಷಕ ಲಿಂಗಪ್ಪ , ಪಾಲಕ, ಪೋಷಕರು ವಿದ್ಯಾಾರ್ಥಿಗಳು ಹಾಗೂ ಶಿಕ್ಷಕರು ಇದ್ದರು.
ಕೇವಲ ಶಿಕ್ಷಣ ನೀಡದೆ ಸಂಸ್ಕಾಾರ ಕಲಿಸಿ – ರಾವುತರಾವ್

