ಸುದ್ದಿಮೂಲ ವಾರ್ತೆ
ದೇವನಹಳ್ಳಿ,ನ.23: ಇದೇ ತಿಂಗಳು 30 ರಂದು ನಡೆಯಲ್ಲಿರುವ ದಾಸಶ್ರೇಷ್ಠ ಭಕ್ತ ಕನಕದಾಸರ ಜಯಂತೋತ್ಸವ ಕಾರ್ಯಕ್ರಮಕ್ಕೆ ತಾಲೂಕಿನ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ದೇವನಹಳ್ಳಿ ತಾಲೂಕು ಕುರುಬ ಸಂಘದ ಅಧ್ಯಕ್ಷ ರವಿಕುಮಾರ್ ತಿಳಿಸಿದ್ದಾರೆ.
ಪಟ್ಟಣದ ಮರಳುಬಾಗಿಲಿನಲ್ಲಿರುವ ಕನಕ ಭವನದಲ್ಲಿ ಕನಕದಾಸರ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಕೊರೋನದಿಂದಾಗಿ ಜಯಂತಿಯನ್ನು ಸರಳವಾಗಿ ಆಚರಿಸಿದ್ದೇವೆ. ಈ ಬಾರಿ ಸಮುದಾಯದವರ ಎಲ್ಲರ ಸಹಕಾರದಿಂದ ವಿಜೃಂಭಣೆಯಿಂದ ಆಚರಿಸೋಣ. ಪ್ರತಿ ಹೋಬಳಿಯ ಸಮುದಾಯದ ಮನೆಗಳಿಗೆ ಕರಪತ್ರಗಳನ್ನು ನೀಡಿ ಎಲ್ಲರೂ ಕಡ್ಡಾಯವಾಗಿ ಕಾರ್ಯಕ್ರಮವಕ್ಕೆ ಭಾಗವಹಿಸುವಂತೆ ಆಯಾ ಹೋಬಳಿ ಮುಖಂಡರು ಜವಾಬ್ದಾರಿ ತೆಗೆದುಕೊಳ್ಳಬೇಕು. ಹೆಚ್ಚಿನ ಜನರನ್ನು ಕರೆತರಬೇಕು ಎಂದರು.
ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಸಹ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾಂರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು ನ.27ರ ಒಳಗೆ ಅರ್ಜಿಗಳನ್ನು ಸಂಘದ ಕಚೇರಿಗೆ ಸಲ್ಲಿಸುವಂತೆ ತಿಳಿಸಿದ್ದಾರೆ. ನ.30 ರಂದು ಪಟ್ಟಣದ ಬೈಪಾಸ್ರಸ್ತೆಯಲ್ಲಿರುವ ಕನಕದಾಸರ ವೃತ್ತದಿಂದ ಪಟ್ಟಣದ ರಾಜಬೀದಿಗಳಲ್ಲಿ ಹೂವಿನ ಪಲ್ಲಕ್ಕಿಯಲ್ಲಿ ಕನಕ ದಾಸರ ಮೆರವಣಿಗೆ ಜಾನಪದ ನೃತ್ಯ ಮತ್ತು ವಾದ್ಯ ಹಾಗೂ ಕಲಾತಂಡಗಳೊಂದಿಗೆ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಪುರಸಭೆ ಸದಸ್ಯ ಗುಟ್ಟಳ್ಳಿ ರವಿ ಮಾತನಾಡಿ ಪ್ರತಿ ಪಂಚಾಯತಿಯಿಂದ ಪಲ್ಲಕ್ಕಿ ವ್ಯವಸ್ಥೆ ಮಾಡುವಂತೆ ಈಗಾಗಲೇ ಆ ಭಾಗದ ಮುಖಂಡರಿಗೆ ಸೂಚಿಸಲಾಗಿದೆ. ಪ್ರತಿ ಗ್ರಾಮಗಳಿಂದ ನಮ್ಮ ಕುಲಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಘಟಿತರಾಗಬೇಕು ಪ್ರತಿಯೊಬ್ಬರಲ್ಲೂ ಸಮುದಾಯದ ಬಗ್ಗೆ ಗೌರವವಿರಬೇಕು, ಎಲ್ಲರೂ ಜವಬ್ದಾರಿಯುತವಾಗಿ ಅವರವರ ಕೆಲಸ ನಿರ್ವಹಿಸಿದರೆ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದರು.
ಇದೆ ವೇಳೆ ದೇವನಹಳ್ಳಿ ತಾಲೂಕು ಕುರುಬ ಸಂಘದ ಖಜಾಂಚಿ ವೇಣುಗೋಪಾಲ್, ಜಾಲಿಗೆ ಗ್ರಾಪಂ ಸದಸ್ಯ ಬೆಟ್ಟೇನಹಳ್ಳಿ ಮಹೇಶ್, ಕೃಷ್ಣಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ, ಜಿಲ್ಲಾ ಸಂಘದ ನಿರ್ದೇಶಕಿ ಮಂಜುಳಾ, ಯುವ ಘಟಕದ ಅಧ್ಯಕ್ಷ ಹರೀಶ್, ಪುರಸಭೆ ಸದಸ್ಯ ರವಿಕುಮಾರ್, ಭಾಗ್ಯರಮೇಶ್, ಮಾದವಿ ಕಾಂತರಾಜು, ಮುನಿರಾಜು (ಬರ್ಮ) ಯುವಕರ ಸಂಘ, ಮಹಿಳಾ ಸಂಘದ ಪದಾಧಿಕಾರಿಗಳು ಸಮುದಾಯದ ಮುಖಂಡರು ಇದ್ದರು.