ಸುದ್ದಿಮೂಲ ವಾರ್ತೆ ಬೀದರ, ಡಿ.05:
2016ರಲ್ಲಿ ಅಂದಿನ ತಹಸೀಲ್ದಾಾರ್ ಕೀರ್ತಿ ಚಾಲಕ ಮೂಲಕ ಎಸ್ ಸಿ ಬೇಡಜಂಗಮ ಪ್ರಮಾಣ ಪತ್ರ ಪಡೆದುಕೊಂಡಿದ್ದ ಬೀದರ ನಗರ ನಿವಾಸಿ ರವೀಂದ್ರಸ್ವಾಾಮಿ ಜಾತಿ ಪ್ರಮಾಣ ಪತ್ರವನ್ನು 24-11-2025ರಂದು ಸುಪ್ರೀೀಂ ಕೋರ್ಟ್ ರದ್ದೂಗೊಳಿಸಿರುವುದನ್ನು ಸ್ವಾಾಗತಾರ್ಹವಾಗಿದೆ ಎಂದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸುಳ್ಳು ಜಾತಿ ಪ್ರಮಾಣ ಪತ್ರ ವಿರೋಧ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ರಾಜಕುಮಾರ್ ಮೂಲಭಾರತಿ ತಿಳಿಸಿದ್ದಾರೆ.
ಜಿಲ್ಲಾ ಜಾತಿ ಪರಿಶೀಲನ ಕಮಿಟಿ ಬೀದರ ಜಿಲ್ಲಾಧಿಕಾರಿಗಳು ರದ್ದು ಮಾಡಿರುವುದನ್ನು ಪ್ರಶ್ನಿಿಸಿ ಕಲ್ಬುರ್ಗಿ ವಿಭಾಗೀಯ ಪೀಠ, ಬೆಂಗಳೂರು ಹೈಕೋರ್ಟ್ಗೆ ಹೋಗಿ ನಂತರ ಸುಪ್ರೀೀಂ ಕೋರ್ಟನಲ್ಲಿ ಸೋಲುಕಂಡ ರವೀಂದ್ರ ಸ್ವಾಾಮಿ ಹತಾಷರಾಗಿ ಹೇಳಿಕೆ ನೀಡುತ್ತಿಿದ್ದಾರೆ ಎಂದು ನಗರದ ಡಾ. ಬಿ ಆರ್. ಅಂಬೇಡ್ಕರ್ ವೃತ್ತದಲ್ಲಿ ನ್ಯಾಾಯಾಲಯ ತೀರ್ಪು ಸ್ವಾಾಗತಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಅಧ್ಯಕ್ಷ ಉಮೇಶಕುಮಾರ್ ಸೊರಳ್ಳಿಿಕರ, ಜಿಲ್ಲಾಧ್ಯಕ್ಷ ಅಭಿಕಾಳೆ ಮುಂತಾದವರು ಉಪಸ್ಥಿಿತರಿದ್ದರು.
ಪರಿಶಿಷ್ಟ ಜಾತಿ ಬೇಡ ಜಂಗಮ ಪ್ರಮಾಣ ಪತ್ರ ಪಡೆದುಕೊಂಡ ರವೀಂದ್ರ ಸ್ವಾಾಮಿ ಇನ್ನು ಮುಂದೆ ವೀರಶೈವ ಲಿಂಗಾಯತ ಎಂದು ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರೆಂದು ನೀಡುವುದು ನಿಲ್ಲಿಸಬೇಕು. ಸುಳ್ಳು ಜಾತಿ ಪಡೆದುಕೊಂಡವರ ಮೇಲೆ ಕ್ರಿಿಮಿನಲ್ ಕೇಸು ದಾಖಲಿಸಬೇಕು. ಪರಿಶಿಷ್ಟ ಜಾತಿ ಬೇಡ ಜಂಗಮ ಪ್ರಮಾಣ ಪತ್ರ ನೀಡುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆೆ ಜಿಲ್ಲಾಧಿಕಾರಿಗಳಿಗೆ ಮೂಲಕ ಒತ್ತಾಾಯ ಮಾಡಿದ್ದರು.
15 ದಿವಸ ಒಳಗೆ ನಕಲಿ ದಾಖಲಾತಿಗಳು ನೀಡಿ, ಬೇಡ ಜಂಗಮರೆಂದು ಜಾತಿ ಪ್ರಮಾಣ ಪತ್ರ ಮಂಜೂರಿ ಮಾಡಿರುವ ಅಧಿಕಾರಿಗಳ ಮೇಲೆ ಪರಿಶಿಷ್ಟ ಜಾತಿ ಬೇಡ ಜಂಗಮ ಪ್ರಮಾಣ ಪತ್ರ ಪಡೆದುಕೊಂಡವರ ಪ್ರಮಾಣ ಪತ್ರ ರದ್ದುಗೊಳಿಸಿ ಕ್ರಿಿಮಿನಲ್ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಚಂದ್ರಕಾಂತ್ ನಿರಾಟೆ, ರಾಜಕುಮಾರ ಗುನ್ನಳ್ಳಿಿ ,ಚಿತ್ರ ಪೂಜಾರಿ, ಡಾ. ಸುಬ್ಬಣ್ಣ ಕರಕನಳ್ಳಿಿ ,ಅವಿನಾಶ್ ಬುದೇರಕಾರ ಇದ್ದರು.
ರವೀಂದ್ರ ಸ್ವಾಮಿ ಎಸ್ ಸಿ ಪ್ರಮಾಣ ಪತ್ರ ರದ್ದು -ರಾಜಕುಮಾರ ಮೂಲಭಾರತಿ

